Kanya Sankranti 2022: ಕನ್ಯಾ ಸಂಕ್ರಮಣದ ದಿನ ಘನತೆ-ಗೌರವ ವೃದ್ಧಿಗಾಗಿ ಈ ರೀತಿ ಸೂರ್ಯನ ಉಪಾಸನೆ ಕೈಗೊಳ್ಳಿ

Kanya Sankranti 2022 Date: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾವಧಿಯ ನಂತರ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಸೆಪ್ಟೆಂಬರ್ 17ರಂದು ಸೂರ್ಯ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಇದರ ಮಹತ್ವ, ಪುಣ್ಯಕಾಲ, ಮುಹೂರ್ತ ಹಾಗೂ ಉಪಾಸನೆ ಕೈಗೊಳ್ಳುವ ವಿಧಾನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Sep 10, 2022, 06:29 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಸ್ಥಾನವು ದುರ್ಬಲವಾಗಿದ್ದರೆ,
  • ಸಂಕ್ರಾಂತಿಯ ದಿನ ಸೂರ್ಯ ದೇವರನ್ನು ಪೂಜಿಸುವುದು ಹಲವು ರೀತಿಯ ಲಾಭಗಳನ್ನು ನೀಡುತ್ತದೆ.
  • ಈ ದಿನ ನಿಮ್ಮ ಮನೆಯ ಪೂರ್ವ ದಿಕ್ಕನ್ನು ಸ್ವಚ್ಛಗೊಳಿಸಿ.
Kanya Sankranti 2022: ಕನ್ಯಾ ಸಂಕ್ರಮಣದ ದಿನ ಘನತೆ-ಗೌರವ ವೃದ್ಧಿಗಾಗಿ ಈ ರೀತಿ ಸೂರ್ಯನ ಉಪಾಸನೆ ಕೈಗೊಳ್ಳಿ title=
Kanya Sankranti 2022

Kanya Sankranti Puja Vidhi 2022: ಸೂರ್ಯನ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶವನ್ನು ಸಾಮಾನ್ಯವಾಗಿ ಸಂಕ್ರಾಂತಿ ಎಂದು ಕರೆಯಲಾಗುತ್ತದೆ . ಪ್ರತಿ ತಿಂಗಳು ಅಂದರೆ, 30 ದಿನಗಳ ನಂತರ, ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ, ಸೂರ್ಯನ ಆರಾಧನೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ರೀತಿ ವರ್ಷವಿಡೀ ಸುಮಾರು ಒಟ್ಟು 12 ಸಂಕ್ರಾಂತಿಗಳನ್ನು ಆಚರಿಸಲಾಗುತ್ತದೆ. ಇವುಗಳಲ್ಲಿ ಎರಡು ಸಂಕ್ರಾಂತಿಗಳು ತುಂಬಾ ವಿಶೇಷವಾಗಿವೆ. ಇವುಗಳಲ್ಲಿ ಅಶ್ವಿನ ಮಾಸದಲ್ಲಿ ಬರುವ ಸಂಕ್ರಾಂತಿಯನ್ನು ಕನ್ಯಾ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

ಸೆಪ್ಟೆಂಬರ್ 17 ರಂದು, ಸೂರ್ಯನು ಸಿಂಹ ರಾಶಿಯನ್ನು ತೊರೆದು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಹೀಗಾಗಿ ಇದನ್ನು ಕನ್ಯಾ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನು ಕನ್ಯಾ ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕನ್ಯಾ ಸಂಕ್ರಾಂತಿಯ ದಿನದಂದು ಸೂರ್ಯನನ್ನು ಹೇಗೆ ಪೂಜಿಸಬೇಕು ಎಂಬುದನ್ನು ಹೇಳಲಾಗಿದೆ ಮತ್ತು ಕನ್ಯಾ ಸಂಕ್ರಾಂತಿಯ ಪುಣ್ಯ ಕಾಲದ ಸಮಯ ಮತ್ತು ಪೂಜೆಯ ಮಹತ್ವದ ಬಗ್ಗೆ ವಿವರಿಸಲಾಗಿದೆ.

ಕನ್ಯಾ ಸಂಕ್ರಾಂತಿ 2022 ದಿನಾಂಕ ಮತ್ತು ಶುಭ ಮುಹೂರ್ತ
ಹಿಂದೂ ಧರ್ಮದಲ್ಲಿ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ಸಂಕ್ರಾಂತಿಯ ದಿನದ ಸ್ನಾನ ಮತ್ತು ದಾನಕ್ಕೂ ವಿಶೇಷ ಮಹತ್ವವಿದೆ. ಈ ದಿನ ಪುಣ್ಯ ಕಾಲದ ಮುಹೂರ್ತವು ಬೆಳಗ್ಗೆ 07:36 ರಿಂದ ಮಧ್ಯಾಹ್ನ 02:08 ರವರೆಗೆ ಇರುತ್ತದೆ. ಇದೇ ವೇಳೆ ಮಹಾ ಪುಣ್ಯಕಾಲದ ಮುಹೂರ್ತವು ಬೆಳಗ್ಗೆ 07:36 ರಿಂದ 09.38 ರವರೆಗೆ ಇರುತ್ತದೆ. ಈ ದಿನ ಸೂರ್ಯನು ಸಿಂಹರಾಶಿಯನ್ನು ತೊರೆದು ಬೆಳಗ್ಗೆ 07:36 ಕ್ಕೆ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ.

ಕನ್ಯಾ ಸಂಕ್ರಾಂತಿಯಂದು ಸೂರ್ಯಾರಾಧನೆಯ ವಿಧಾನ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಸ್ಥಾನವು ದುರ್ಬಲವಾಗಿದ್ದರೆ, ಸಂಕ್ರಾಂತಿಯ ದಿನ ಸೂರ್ಯ ದೇವರನ್ನು ಪೂಜಿಸುವುದು ಹಲವು ರೀತಿಯ ಲಾಭಗಳನ್ನು ನೀಡುತ್ತದೆ. ಈ ದಿನ ನಿಮ್ಮ ಮನೆಯ ಪೂರ್ವ ದಿಕ್ಕನ್ನು ಸ್ವಚ್ಛಗೊಳಿಸಿ. ಈ ದಿನದಂದು ತಂದೆ ಮತ್ತು ತಂದೆಯಂತಹ ಹಿರಿಯ ಜನರನ್ನು ಗೌರವಿಸಿ. ಈ ದಿನ, ಸೂರ್ಯೋದಯಕ್ಕೆ ಮುಂಚೆ ಎದ್ದು, ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.

ಈ ದಿನದಂದು ಆದಿತ್ಯಹದ್ಯಸ್ರೋತವನ್ನು ಪಠಿಸುವುದು ವಿಶೇಷ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ ಎನ್ನಲಾಗಿದೆ. ಅಲ್ಲದೆ, ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವಾಗ ನೀರಿನಲ್ಲಿ ಕುಂಕುಮ, ಕೆಂಪು ಹೂವುಗಳು, ಸುಗಂಧ ದ್ರವ್ಯಗಳನ್ನು ಬೆರೆಸಲು ಮರೆಯಬೇಡಿ. ಹೀಗೆ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ-Pitru Paksha 2022: ಇಂದಿನಿಂದ ಪಿತೃಪಕ್ಷ ಆರಂಭ, ಈ ತಪ್ಪುಗಳನ್ನು ಮಾಡ್ಬೇಡಿ, ಮುಹೂರ್ತಗಳ ವಿವರ ಇಲ್ಲಿದೆ

ಕನ್ಯಾ ಸಂಕ್ರಾಂತಿಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಒಳ್ಳೆಯದು ಎಂಬುದು ಧಾರ್ಮಿಕ ನಂಬಿಕೆ ಇದೆ. ಇದನ್ನು ಮಾಡುವುದರಿಂದ ವ್ಯಕ್ತಿಯೊಬ್ಬ ಹೆಚ್ಚುವರಿ ಪುಣ್ಯವನ್ನು ಪಡೆಯುತ್ತಾನೆ ಎನ್ನಲಾಗಿದೆ. ಈ ದಿನದಂದು ವಿಶ್ವಕರ್ಮ ದೇವರ ಪೂಜೆಗೆ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ ಮತ್ತು ಪ್ರತಿಷ್ಠೆ ಕೂಡ ಹೆಚ್ಚುತ್ತದೆ.

ಇದನ್ನೂ ಓದಿ-Tulsi Puja Tips: ಯಾವ ಎರಡು ದಿನ ತುಳಸಿ ಸಸ್ಯವನ್ನು ಸ್ಪರ್ಶಿಸುವುದು ಅಶುಭ? ಸ್ಪರ್ಶಿಸಿದರೆ ಲಕ್ಷ್ಮಿ ಮುನಿಸಿಗೆ ಕಾರಣ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News