ಬೆಂಗಳೂರು : ಇಂದು ವರ್ಷದ ಕೊನೆಯ ಚಂದ್ರಗ್ರಹಣ ಕಾಣಿಸಲಿದೆ. ಜ್ಯೋತಿಷ್ಯ, ನಂಬಿಕೆಗಳ ಆಧಾರದ ಮೇಲೆ ಅನೇಕರು ಸೂತಕದ ಸಮಯದಲ್ಲಿ ಆಹಾರವನ್ನು ತಯಾರಿಸುವುದಿಲ್ಲ ತಿನ್ನುವುದಿಲ್ಲ. ಇಂದಿನ ಚಂದ್ರಗ್ರಹಣ  ಸಂಜೆ 5.20 ರಿಂದ ಗೋಚರವಾಗಲಿದ್ದು, ಸಂಜೆ 6.20 ಕ್ಕೆ ಕೊನೆಗೊಳ್ಳಲಿದೆ. ಗ್ರಹಣ ಕಾಲದಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ  ಕಿರಣಗಳು ಹೊರಬರುತ್ತವೆ  ಎಂದು ಅನೇಕರು ನಂಬುತ್ತಾರೆ. ಇದು ಎಷ್ಟು ನಿಜ, ವಿಜ್ಞಾನಿಗಳು ಈ ಬ ಆಗ್ಗೆ ಏನು ಹೇಳುತ್ತಾರೆ ನೋಡೋಣ.  


COMMERCIAL BREAK
SCROLL TO CONTINUE READING

ನಾಸಾದ ಸ್ಪಷ್ಟನೆ :  
ಗ್ರಹಣದ ಸಮಯದಲ್ಲಿ ಹೊರಸೂಸುವ ವಿಕಿರಣವು ಅಡುಗೆಮನೆಯ ಆಹಾರದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಜನರ ನಂಬಿಕೆ. ಹೀಗಾಗಿ ಈ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಮಾಡುತ್ತದೆ ಹಾಗಾಗಿ, ಗ್ರಹಣ ಕಾಲದಲ್ಲಿ ಆಹಾರವನ್ನು ಸೇವಿಸುವ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ಹೇಳಲಾಗುತ್ತದೆ. ಆದರೆ ಈ ಯೋಚನೆ ಆಧಾರರಹಿತ ಎನ್ನುತ್ತಾರೆ ವಿಜ್ಞಾನಿಗಳು. ಈ ವಾದ ಸತ್ಯಕ್ಕೆ ದೂರವಾದದ್ದು ಎಂದು ಹೇಳುತ್ತಾರೆ. ಚಂದ್ರಗ್ರಹಣ ಸಮಯದಲ್ಲಿ ಹೊರಸೂಸುವ ಹಾನಿಕಾರಕ ಕಿರಣಗಳು ಆಹಾರದ ಮೇಲೆ ಪರಿಣಾಮ ಬೀರುವುದಾದರೆ, ಅದು ಹೊಲದ ಬೆಳೆಗಳನ್ನು ಕೂಡಾ ಹಾನಿಗೊಲಿಸಬೇಕು ಎನ್ನುವುದು ವಿಜ್ಞಾನಿಗಳ ವಾದ.  


ಇದನ್ನೂ ಓದಿ : ಚಂದ್ರಗ್ರಹಣದ ಸೂತಕ ಸಮಯದಲ್ಲಿ ಈ ಕೆಲಸಗಳನ್ನು ಮಾಡಲೇಬಾರದು.!


ಗ್ರಹಣ ಕಾಲದ ಕಿರಣಗಳು  ಕುರುಡರನ್ನಾಗಿಸುತ್ತದೆಯೇ ? :
ಚಂದ್ರನ ನಡುವೆ ಭೂಮಿ ಮತ್ತು ಸೂರ್ಯ ಬಂದಾಗ  ಚಂದ್ರಗ್ರಹಣ ಕಾಣಿಸಿಕೊಳ್ಳುತ್ತದೆ.  ಗ್ರಹಣ ಕಾಲದಲ್ಲಿ ಹೊರ ಹೋದರೆ ಕಣ್ಣು ಕುರುಡಾಗುತ್ತದೆ ಎಂಬ ವಾದವನ್ನು ಕೂಡಾ ನಾಸಾ ವಿಜ್ಞಾನಿಗಳು ತಳ್ಳಿ ಹಾಕುತ್ತಾರೆ.  ಆದರೆ ಸೂರ್ಯಗ್ರಹಣವನ್ನು ಬರೀ ಗನ್ನಿನಿಂದ ನೋಡುವುದರಿಂದ ಕಣ್ಣಿಗೆ ಖಂಡಿತವಾಗಿಯೂ ಹಾನಿ ಉಂಟಾಗುತ್ತದೆ.  


ಚಂದ್ರಗ್ರಹಣವನ್ನು ವೀಕ್ಷಿಸುವುದು ಹೇಗೆ? :
ಚಂದ್ರಗ್ರಹಣವನ್ನು ತೆರೆದ ಕಣ್ಣುಗಳಿಂದ ನೋಡಬಹುದು ಎಂದು ನಾಸಾ ಹೇಳಿದೆ. ಇದನ್ನು ನೋಡಲು ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಆದರೆ ಬೈನಾಕ್ಯುಲರ್‌ಗಳೊಂದಿಗೆ ಗ್ರಹಣವನ್ನು ಸ್ಪಷ್ಟವಾಗಿ  ನೋಡಲು ಸಾಧ್ಯವಾಗುತ್ತದೆ. 


ಇದನ್ನೂ ಓದಿ : Lunar Eclipse 2022: ಮೇಷ ರಾಶಿಯಲ್ಲಿ ಚಂದ್ರಗಹಣ- ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ತಿಳಿಯಿರಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.