ದಶಕಗಳ ನಂತರ, ಚಂದ್ರಗ್ರಹಣ ಕಾಲದಲ್ಲಿ ಅದ್ಭುತ ಸಂಯೋಗ.!ಐದು ಗ್ರಹಗಳ ಸ್ಥಾನ ಪಲ್ಲಟ ! ಈ ರಾಶಿಯ ಮೇಲೆ ಹೆಚ್ಚು ಪರಿಣಾಮ

ಚಂದ್ರಗ್ರಹಣದ ನಂತರ, ಅನೇಕ ಗ್ರಹಗಳ ಸಂಕ್ರಮಣದ  ವಿಶಿಷ್ಟ ಸಂಯೋಜನೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ.

Written by - Ranjitha R K | Last Updated : Nov 7, 2022, 04:49 PM IST
  • ನಾಳೆ ವರ್ಷದ ಕೊನೆಯ ಚಂದ್ರಗ್ರಹಣ
  • ಸೂತಕ ಅವಧಿಯು ಮಾನ್ಯವಾಗಿರುತ್ತದೆ.
  • ಐದು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ.
ದಶಕಗಳ ನಂತರ, ಚಂದ್ರಗ್ರಹಣ ಕಾಲದಲ್ಲಿ ಅದ್ಭುತ ಸಂಯೋಗ.!ಐದು ಗ್ರಹಗಳ ಸ್ಥಾನ ಪಲ್ಲಟ !  ಈ ರಾಶಿಯ ಮೇಲೆ ಹೆಚ್ಚು ಪರಿಣಾಮ  title=
chandragrahana

ಬೆಂಗಳೂರು : ನಾಳೆ  ವರ್ಷದ ಕೊನೆಯ ಚಂದ್ರಗ್ರಹಣ ಗೋಚರಿಸಲಿದೆ. ಈ ಚಂದ್ರಗ್ರಹಣವು ದೇಶದ ವಿವಿಧ ಭಾಗಗಳಲ್ಲಿ ಗೋಚರಿಸುತ್ತಿದ್ದು, ಅದರ ಸೂತಕ ಅವಧಿಯು ಸಹ ಮಾನ್ಯವಾಗಿರುತ್ತದೆ. ದಶಕಗಳ ನಂತರ ಚಂದ್ರಗ್ರಹಣದ ಬಳಿಕ ಐದು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ. ಚಂದ್ರಗ್ರಹಣದ ನಂತರ, ಅನೇಕ ಗ್ರಹಗಳ ಸಂಕ್ರಮಣದ  ವಿಶಿಷ್ಟ ಸಂಯೋಜನೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ.

ಚಂದ್ರಗ್ರಹಣದ ನಂತರ ಗ್ರಹ ಸಂಚಾರ :
ನವೆಂಬರ್ 8 ರ ಚಂದ್ರಗ್ರಹಣದ ನಂತರ ನವೆಂಬರ್ 11 ರಂದು ಸಂಪತ್ತು ಮತ್ತು ಐಷಾರಾಮಿಗಳನ್ನು ನೀಡುವ ಶುಕ್ರ ಗ್ರಹವು ರಾಶಿಚಕ್ರವನ್ನು ಬದಲಾಯಿಸುತ್ತದೆ. ಶುಕ್ರನ ಸಂಕ್ರಮಣವು ಜನರ ಸಂತೋಷ, ಪ್ರೀತಿ ಮತ್ತು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. 

ಇದನ್ನೂ ಓದಿ : Lunar Eclipse 2022: ನಾಳೆ ಚಂದ್ರಗ್ರಹಣ, ಸೂತಕದ ಅವಧಿಯಲ್ಲಿ ಏನು ಮಾಡಬಾರದು ಗೊತ್ತಾ..? 

ಮಂಗಳ ಮತ್ತು ಬುಧವು ನವೆಂಬರ್ 13 ರಂದು ಸ್ಥಾನ ಪಲ್ಲಟ ಮಾಡಲಿದೆ.  ಈ ಸಮಯದಲ್ಲಿ ಮಂಗಳ ಹಿಮ್ಮುಖ ಚಲನೆಯಲ್ಲಿದ್ದು, ವೃಷಭ ರಾಶಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಮತ್ತೊಂದೆಡೆ, ಬುಧ ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದೆ.  

ನವೆಂಬರ್ 16 ರಂದು, ಗ್ರಹಗಳ ರಾಜನಾದ ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಚಂದ್ರಗ್ರಹಣದ ನಂತರ ಸೂರ್ಯನ ಈ ಸಂಕ್ರಮಣವು ಹೆಚ್ಚಿನ ಜನರಿಗೆ ಮಂಗಳಕರವಾಗಿರುತ್ತದೆ. ತಮ್ಮ ಕೆಲಸದಲ್ಲಿ ಯಶಸ್ಸು, ಗೌರವ ಮತ್ತು ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. 

ನವೆಂಬರ್ 23 ರಂದು ದೇವಗುರು ಬೃಹಸ್ಪತಿ  ನೇರ ನಡೆ ಆರಂಭಿಸಲಿದ್ದಾರೆ.  ಗುರುಗ್ರಹದ ನೇರ ಚಲನೆಯು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರವೆಂದು ಸಾಬೀತಾಗಲಿದೆ. 

ಇದನ್ನೂ ಓದಿ : Vastu Tips: ಮನೆಯಲ್ಲಿ ಈ ಸಸ್ಯವನ್ನು ಎಂದಿಗೂ ನೆಡಬೇಡಿ: ದೀರ್ಘಕಾಲದವರೆಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ!

ಈ ರಾಶಿಯವರು ಜಾಗರೂಕರಾಗಿರಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣ ಮತ್ತು ನಂತರದ ಗ್ರಹಗಳ ಸಂಕ್ರಮಣವು ಕೆಲವು ರಾಶಿಯವರಿಗೆ ಮಂಗಳಕರವಾಗಿರಲಿದೆ. ಆದರೆ ಇನ್ನು ಕೆಲವು ರಾಶಿಯವರಿಗೆ ಅಶುಭ ಫಲ ನೀಡಲಿದೆ.  ಜ್ಯೋತಿಷಿಗಳ ಪ್ರಕಾರ, ಈ ಸಮಯವು ಮಿಥುನ, ವೃಶ್ಚಿಕ ಮತ್ತು ಕುಂಭ ರಾಶಿಯವರಿಗೆ ಉತ್ತಮವಾಗಿರುತ್ತದೆ. ಇವುಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಶಿಚಕ್ರದವರು ಜಾಗರೂಕರಾಗಿರಬೇಕು. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News