ಚಂದ್ರಗ್ರಹಣದ ಸೂತಕ ಸಮಯದಲ್ಲಿ ಈ ಕೆಲಸಗಳನ್ನು ಮಾಡಲೇಬಾರದು.!

Chandragrahana 2022 : ಕೆಲವೆಡೆ ಸಂಪೂರ್ಣ ಚಂದ್ರಗ್ರಹಣ ಗೋಚರಿಸಿದರೆ, ಕೆಲವೆಡೆ ಭಾಗಶಃ ಚಂದ್ರಗ್ರಹಣ ಮಾತ್ರ ಗೋಚರಿಸಲಿದೆ. ಚಂದ್ರಗ್ರಹಣದ ಸೂತಕ ಅವಧಿಯು 9 ಗಂಟೆಗಳ ಮೊದಲು ಅಂದರೆ ಬೆಳಿಗ್ಗೆ 8.20ರಿಂದಲೇ ಪ್ರಾರಂಭವಾಗುತ್ತದೆ.   

Written by - Ranjitha R K | Last Updated : Nov 8, 2022, 08:22 AM IST
  • ಇಂದು ವರ್ಷದ ಕೊನೆಯ ಚಂದ್ರಗ್ರಹಣ
  • ಸಂಜೆ 5:20 ರಿಂದ 6.20 ರವರೆಗೆ ಚಂದ್ರಗ್ರಹಣ ಇರುತ್ತದೆ.
  • ಚಂದ್ರಗ್ರಹಣದ ಸೂತಕ ಅವಧಿಯು 9 ಗಂಟೆಗಳ ಮೊದಲು ಆರಂಭ
ಚಂದ್ರಗ್ರಹಣದ ಸೂತಕ ಸಮಯದಲ್ಲಿ ಈ  ಕೆಲಸಗಳನ್ನು ಮಾಡಲೇಬಾರದು.! title=
chandra grahana 2022 (file photo)

Chandragrahana 2022 : ವರ್ಷದ ಕೊನೆಯ ಚಂದ್ರಗ್ರಹಣವು ಇಂದು ಸಂಜೆ ಚಂದ್ರೋದಯದೊಂದಿಗೆ ಪ್ರಾರಂಭವಾಗುತ್ತದೆ. ಭಾರತದಲ್ಲಿ, ಈ ಗ್ರಹಣವು ಸಂಜೆ 5.20 ರಿಂದ ಗೋಚರಿಸುತ್ತದೆ. ವಿವಿಧ ನಗರಗಳಲ್ಲಿ ಚಂದ್ರಗ್ರಹಣ ಗೋಚರ ಸಮಯ ಭಿನ್ನವಾಗಿರುತ್ತದೆ. ಇದಲ್ಲದೇ ಕೆಲವೆಡೆ ಸಂಪೂರ್ಣ ಚಂದ್ರಗ್ರಹಣ ಗೋಚರಿಸಿದರೆ, ಕೆಲವೆಡೆ ಭಾಗಶಃ ಚಂದ್ರಗ್ರಹಣ ಮಾತ್ರ ಗೋಚರಿಸಲಿದೆ. ಚಂದ್ರಗ್ರಹಣದ ಸೂತಕ ಅವಧಿಯು 9 ಗಂಟೆಗಳ ಮೊದಲು ಅಂದರೆ ಬೆಳಿಗ್ಗೆ 8.20ರಿಂದಲೇ ಪ್ರಾರಂಭವಾಗುತ್ತದೆ.  

ಚಂದ್ರಗ್ರಹಣ ಸಮಯ ಮತ್ತು ಸೂತಕ ಕಾಲ : 
ವರ್ಷದ ಕೊನೆಯ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ.  ಆದ್ದರಿಂದ ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ, ಅದರ ಸೂತಕ ಅವಧಿಯು ಸಹ ಮಾನ್ಯವಾಗಿರುತ್ತದೆ. ಭಾರತೀಯ ಕಾಲಮಾನದ ಪ್ರಕಾರ  ಸಂಜೆ 5:20 ರಿಂದ 6.20 ರವರೆಗೆ ಚಂದ್ರಗ್ರಹಣ ಇರುತ್ತದೆ. ಹೀಗಾಗಿ ಬೆಳಗ್ಗೆ 8.20ರಿಂದ ಸೂತಕ ಕಾಲ ಆರಂಭವಾಗಿದ್ದು, ಸಂಜೆ 6.59ಕ್ಕೆ ಮೋಕ್ಷ ಪ್ರಾಪ್ತಿಯಾಗಲಿದೆ. 

ಇದನ್ನೂ ಓದಿ : Lunar Eclipse 2022: ಮೇಷ ರಾಶಿಯಲ್ಲಿ ಚಂದ್ರಗಹಣ- ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ತಿಳಿಯಿರಿ

ಚಂದ್ರಗ್ರಹಣದ ಸೂತಕ ಕಾಲದಲ್ಲಿ ಈ ಕೆಲಸ ಮಾಡಬೇಡಿ :
ಚಂದ್ರಗ್ರಹಣದ ಸಮಯವಲ್ಲದೆ, ಸೂತಕ ಕಾಲದಲ್ಲಿಯೂ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಸೂತಕದ 9 ಗಂಟೆಯಿಂದ  ಗ್ರಹಣ ಮುಗಿಯುವವರೆಗೆ ಈ ಕೆಲಸವನ್ನು ಮಾಡಬೇಡಿ. ಅಂದರೆ ಬೆಳಗ್ಗೆ 8.20ರಿಂದ ಸಂಜೆ 7ರವರೆಗೆ ಈ ಕೆಲಸಗಳನ್ನು ಮಾಡಬಾರದು.  

1.ಗ್ರಹಣ ಮತ್ತು ಸೂತಕದ ಸಮಯದಲ್ಲಿ ದೇವರ ವಿಗ್ರಹವನ್ನು ಮುಟ್ಟಬಾರದು. ಈ ಸಮಯದಲ್ಲಿ, ಮನೆಯ ದೇವರ ಕೋಣೆ ಮತ್ತು ದೇವರ ವಿಗ್ರಹಗಳನ್ನು ಶುದ್ಧವಾದ ಬಟ್ಟೆಯಿಂದ ಮುಚ್ಚಿ.  
2. ಚಂದ್ರಗ್ರಹಣ ಮತ್ತು ಸೂತಕ ಕಾಲದಲ್ಲಿ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ. ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ರೋಗಿಗಳಿಗೆ ಇದರಿಂದ ವಿನಾಯಿತಿಯಿದೆ. 
3. ಸೂತಕ ಅವಧಿಯಲ್ಲಿ ಮಲಗಬಾರದು. ಈ ಸಮಯದಲ್ಲಿ ದೇವರ ಪೂಜೆ ಮಾಡುವುದು ಉತ್ತಮ. 
4. ಸೂತಕ ಕಾಲದಲ್ಲಿ ಎಣ್ಣೆ ಹಚ್ಚಬೇಡಿ, ಕೂದಲು ಕತ್ತರಿಸಬೇಡಿ, ಉಗುರುಗಳನ್ನು ಕತ್ತರಿಸಬೇಡಿ. 

ಇದನ್ನೂ ಓದಿ : ಭಾರತದ ಯಾವ ಪ್ರದೇಶಗಳಲ್ಲಿ ಗೋಚರಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ: ಇಲ್ಲಿದೆ ವಿಶೇಷ ಮಾಹಿತಿ

5. ಯಾರೊಂದಿಗೂ ವಿವಾದ ಬೇಡ, ಗ್ರಹಣ ಮತ್ತು ಸೂತಕ ಕಾಲದಲ್ಲಿ ಸುಳ್ಳು ಹೇಳಬೇಡಿ. 
6. ಗರ್ಭಿಣಿಯರು ಗ್ರಹಣ ಮತ್ತು ಸೂತಕದ ಸಮಯದಲ್ಲಿ ಸೂಜಿ, ಚಾಕು, ಕತ್ತರಿ ಮುಂತಾದ ಹರಿತವಾದ ವಸ್ತುಗಳನ್ನು ಬಳಸಬಾರದು. 
7. ಸಾಧ್ಯವಾದರೆ ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮತ್ತು ಸೂತಕದ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. 

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News