ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಸದಾ ಇರಲಿದೆ ಲಕ್ಷ್ಮೀ ಕಟಾಕ್ಷ , ಇಲ್ಲವಾದಲ್ಲಿ ಬಡತನ ಬೆಂಬಿಡುವುದೇ ಇಲ್ಲ
ಬೆಳಿಗ್ಗೆ ಕೆಲವು ವಿಶೇಷ ಕೆಲಸಗಳನ್ನು ಮಾಡಿದರೆ, ಜೀವನದಲ್ಲಿ ಯಶಸ್ಸನ್ನು ಪಡೆಯುವುದು ತುಂಬಾ ಸುಲಭ. ಮತ್ತೊಂದೆಡೆ, ಬೆಳಿಗ್ಗೆ ಮಾಡುವ ತಪ್ಪಿನಿಂದ ಇಡೀ ದಿನದ ಶ್ರಮವೇ ಹಾಳಾಗುತ್ತದೆ.
ಬೆಂಗಳೂರು : ದಿನ ಚೆನ್ನಾಗಿ ಆರಂಭವಾದರೆ ಇಡೀ ದಿನ ಚೆನ್ನಾಗಿಯೇ ಸಾಗುತ್ತದೆ. ಅದಕ್ಕಾಗಿಯೇ ಬೆಳಿಗ್ಗೆ ಎದ್ದ ತಕ್ಷಣ ದೇವರ ನಾಮಸ್ಮರಣೆ ಮಾಡಿ ಅಥವಾ ಅಂಗೈಗಳ ದರ್ಶನ ಮಾಡಿ ಎಂದು ಹೇಳಲಾಗುತ್ತದೆ. ಇದರೊಂದಿಗೆ, ವ್ಯಕ್ತಿಯ ಮನಸ್ಸು ಸಂತೋಷವಾಗಿರುತ್ತದೆ ಮತ್ತು ಸಕಾರಾತ್ಮಕತೆಯಿಂದ ದಿನವನ್ನು ಪ್ರಾರಂಭಿಸಬಹುದು. ಪ್ರತಿದಿನ ಯಶಸ್ವಿಯಾಗಲು, ಮತ್ತು ಸಂತೋಷದಿಂದ ಇರಲು ಏನು ಮಾಡಬೇಕು ಎನ್ನುವುದನ್ನು ಚಾಣಕ್ಯ ನೀತಿಯಲ್ಲಿ , ಆಚಾರ್ಯ ಚಾಣಕ್ಯರು ವಿವರವಾಗಿ ತಿಳಿಸಿದ್ದಾರೆ (Chanakya Niti_).
ಬೆಳಗಿನ ಹೊತ್ತಿನಲ್ಲಿ ಈ ತಪ್ಪು ಮಾಡಬೇಡಿ :
ಚಾಣಕ್ಯ ನೀತಿಯ (Chanakya Niti) ಪ್ರಕಾರ, ದಿನವು ಉತ್ತಮವಾಗಿರಬೇಕೆಂದರೆ, ಕೆಲವೊಂದು ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಬೇಕು (Mistakes to avoid in morning). ಬೆಳಿಗ್ಗೆ ಎದ್ದ ತಕ್ಷಣ, ಯಾರ ಮೇಲೂ ಕೋಪಮಾಡಿಕೊಳ್ಳಲು ಹೋಗಬಾರದು. ಯಾರನ್ನೂ ನಿಂದಿಸಬಾರದು. ಯಾಕೆಂದರೆ ಹೀಗೆ ಮಾಡಿದರೆ, ಎದುರಿಗಿರುವವರ ಮೂಡ್ ಹಾಳಾಗುವುದಲ್ಲದೆ, ನಿಮಗೂ ಹಾನಿಯಾಗುತ್ತದೆ. ನಿಮ್ಮ ಈ ಕೆಲಸದಿಂದ ಉಂಟಾದ ನಕಾರಾತ್ಮಕತೆಯು (Negetivity)ಇಡೀ ದಿನ ನಿಮ್ಮನ್ನು ಕಾಡುತ್ತದೆ. ಇಡೀ ದಿನ ಏನಾದರೊಂದು ಕಾರಣಕ್ಕೆ ಕಿರಿ ಕಿರಿಯಾಗುತ್ತಲೇ ಇರುತ್ತದೆ.
ಇದನ್ನೂ ಓದಿ : ಹೋಳಿ ದಿನ ರೂಪುಗೊಳ್ಳುತ್ತಿದೆ ಮೂರು ರೀತಿಯ ರಾಜಯೋಗ, ಯಾರ ಮೇಲೆ ಏನು ಪರಿಣಾಮ ?
ಚಾಣಕ್ಯ ನೀತಿಯ ಪ್ರಕಾರ, ನೀವು ಯಶಸ್ವಿಯಾಗಲು ಬಯಸಿದರೆ, ಕೆಲವೊಂದು ವಿಷಯಗಳನ್ನು ಅನುಸರಿಸಬೇಕು (Chanakya Niti for Success). ಬೆಳಿಗ್ಗೆ ಬೇಗನೆ ಎದ್ದೇಳಿ. ಯಾವಾಗಲೂ ಬ್ರಹ್ಮ ಮುಹೂರ್ತದಿಂದ ಸೂರ್ಯೋದಯದ ಮಧ್ಯದಲ್ಲಿ ಏಳುವುದು ಉತ್ತಮ. ಹೀಗೆ ಮಾಡುವುದರಿಂದ ವ್ಯಕ್ತಿಯು ಆರೋಗ್ಯಕರವಾಗಿರುತ್ತಾನೆ. ಮನಸ್ಸು ಕೂಡ ಶಾಂತವಾಗಿರುತ್ತದೆ ಮತ್ತು ಉಲ್ಲಾಸದಾಯಕವಾಗಿರುತ್ತದೆ. ಅಂತಹವರ ಮೇಲೆ ತಾಯಿ ಲಕ್ಷ್ಮೀ (Godess Lakshmi) ಸದಾ ದಯೆ ತೋರುತ್ತಾಳೆ. ಇನ್ನು ರಾತ್ರಿ ತಡವಾಗಿ ಮಲಗುವ ಜನರು ಬೆಳಿಗ್ಗೆ ಸಕಾರಾತ್ಮಕತೆಯಿಂದ ಇರಲು ಸಾಧ್ಯವಾಗುವುದಿಲ್ಲ. ಅವರು ಸೋಮಾರಿಗಳಾಗುತ್ತಾರೆ ಮತ್ತು ಸಿಕ್ಕಿದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಒಟ್ಟಾರೆಯಾಗಿ, ತಮ್ಮ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : Sun Transit: ಇಂದಿನಿಂದ ಸೂರ್ಯನಂತೆ ಹೊಳೆಯಲಿದೆ ಈ 4 ರಾಶಿಯವರ ಭವಿಷ್ಯ , ಇವರು ಮುಟ್ಟಿದ್ದೆಲ್ಲಾ ಚಿನ್ನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.