ಬೆಂಗಳೂರು : Easy weight lose Tips : ಸ್ಥೂಲಕಾಯತೆ, ರಕ್ತದೊತ್ತಡ, ಮಧುಮೇಹದಂಥಹ ಕಾಯಿಲೆಗಳನ್ನು ದೂರ ಇಡಬೇಕಾದರೆ   ಆರೋಗ್ಯಕರ ಆಹಾರವನ್ನು ಸೇವಿಸುವುದು ಅತ್ಯಗತ್ಯ. ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಎಲ್ಲಾ ಪೋಷಕಾಂಶಗಳು ಬೇಕಾಗುತ್ತವೆ. ಆಗ ಮಾತ್ರ ನಾವು ಆರೋಗ್ಯದಿಂದ ಇರುವುದು ಸಾಧ್ಯವಾಗುತ್ತದೆ. ಈ ಪೈಕಿ ನಾವು ತೆಗೆದುಕೊಳ್ಳುವ  ಕ್ಯಾಲೋರಿ ಕಡಿಮೆ  ಪ್ರಮಾಣದಲ್ಲಿ ಇರಬೇಕು ಎನ್ನುವುದು ಕೂಡಾ ಗಮನಿಸಬೇಕಾದ ಅಂಶ. ನಾವು ದಿನವಿಡೀ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಿದರೆ, ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳು ಸಂಗ್ರಹವಾಗುತ್ತದೆ. ನಾವು ಎಷ್ಟು ಪ್ರಮಾಣದ ಕ್ಯಾಲೋರಿಯನ್ನು ಸೇವಿಸುತ್ತೆವೆಯೋ ಆ ಕ್ಯಾಲೋರಿಯನ್ನು ಬರ್ನ್ ಮಾಡಬೇಕಾಗುತ್ತದೆ. ಇಲ್ಲವಾದರೆ ಅದು ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಸಂಗ್ರಹವಾಗುತ್ತವೆ. ಇದರಿಂದಾಗಿ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ.  ಬೊಜ್ಜಿನ ಜೊತೆಗೆ ಅನೇಕ ಅಪಾಯಕಾರಿ ಕಾಯಿಲೆಗಳು ಕೂಡಾ ನಮ್ಮ ದೇಹವನ್ನು ಪ್ರವೇಶಿಸಿ ಬಿಡುತ್ತದೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಾಗುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರಿಂದ ತೂಕ ಹೆಚ್ಚಾಗುವುದು ಮಾತ್ರವಲ್ಲ ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬು ಕೂಡಾ ಹೆಚ್ಚಾಗುತ್ತದೆ. ಇದರಿಂದ ಬೊಜ್ಜು ಮಾತ್ರವಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತವೆ. ಸ್ಥೂಲಕಾಯತೆಯು ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ ಸಮಯಕ್ಕೆ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸುವುದು ಅವಶ್ಯಕ.


ಇದನ್ನೂ  ಓದಿ : ಪಪ್ಪಾಯವನ್ನು ಒಂದು ವಾರಗಳವರೆಗೆ ಹೀಗೆ ತಿನ್ನಿ! ನಿಮ್ಮ ನೀರೀಕ್ಷೆಯಂತೆಯೇ ಚಪ್ಪಟೆಯಾಗುವುದು ಹೊಟ್ಟೆ


ಕೆಲವರು ತೂಕ ಇಳಿಸಿಕೊಳ್ಳಲು ತುಂಬಾ ಕಷ್ಟಪಡುತ್ತಾರೆ. ಕೆಲವರು ಕಟ್ಟು ನಿಟ್ಟಿನ ಆಹಾರಕ್ರಮವನ್ನು ಅನುಸರಿಸಲು ಆರಂಭಿಸುತ್ತಾರೆ. ಇನ್ನು ಕೆಲವರು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಾರೆ. ಆದರೆ, ತೂಕ ಇಳಿಸಿಕೊಳ್ಳಲು ಕೆಲವು ಸರಳ, ನೈಸರ್ಗಿಕ ಮಾರ್ಗಗಳಿವೆ. ಇಂದಿನ ಲೇಖನದಲ್ಲಿ ಅಂಥದ್ದೇ ಸರಳ ಮಾರ್ಗವೊಂದರ ಬಗ್ಗೆ ನಾವು ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. 


ದೈಹಿಕ ಆರೋಗ್ಯವನ್ನು ಸುಧಾರಿಸುವ ಮತ್ತು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವ ಅನೇಕ ಪಾನೀಯಗಳಿವೆ. ಈ ಪಾನೀಯಗಳು  ತೂಕ ನಷ್ಟಕ್ಕೂ ಸಹಾಯ ಮಾಡುತ್ತವೆ. ತೂಕವನ್ನು ಕಳೆದುಕೊಳ್ಳುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಕೆಲವು ಪಾನೀಯಗಳಿವೆ.  ಇವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ, ಖಂಡಿತವಾಗಿಯೂ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. 


ಇದನ್ನೂ  ಓದಿ : ಈ 2 ಮನೆಮದ್ದುಗಳಿಂದ 15 ದಿನಗಳಲ್ಲಿ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ!


ತೂಕ ನಷ್ಟಕ್ಕೆ ಸಹಾಯ ಮಾಡುವ ಪಾನೀಯಗಳು:
ಸೋಂಪು ಚಹಾ : 

ಸೋಂಪು ಚಹಾವು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಹೆಚ್ಚಿಸಲು  ಸಹಾಯ ಮಾಡುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವುದಾದರೆ ಈ ಪಾನೀಯವನ್ನು  ನಿತ್ಯ ಸೇವಿಸಬೇಕು. 


ಗ್ರೀನ್ ಟೀ : 
ತೂಕ ನಷ್ಟಕ್ಕೆ ಗ್ರೀನ್ ಟೀ ತುಂಬಾ ಪರಿಣಾಮಕಾರಿ. ತೂಕ ಇಳಿಸಿಕೊಳ್ಳಲು ಅನೇಕ ಜನರು ಗ್ರೀನ್ ಟೀ ಸೇವಿಸುತ್ತಾರೆ. ಇದು ಕ್ಯಾಟೆಚಿನ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ತೂಕ ನಷ್ಟಕ್ಕೆ  ಬ್ಲಾಕ್ ಟೀ :
ಬ್ಲಾಕ್ ಟೀ ತೂಕ ನಷ್ಟಕ್ಕೆ ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಪಾಲಿಫಿನಾಲ್‌ಗಳಲ್ಲಿ ಅಧಿಕವಾಗಿದೆ. ಇವು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು ತೂಕ ಇಳಿಸಲು ಸಹಾಯ ಮಾಡುತ್ತದೆ.


ಇದನ್ನೂ  ಓದಿ : ಚರ್ಮದ ಎಲ್ಲಾ ಸಮಸ್ಯೆಗಳಿಗೆ ಪರ್ಫೆಕ್ಟ್‌ ಮನೆಮದ್ದು ಈ ನೀರು..ಟ್ರೈ ಮಾಡಿ ನೋಡಿ!!


ಶುಂಠಿ ನಿಂಬೆ ಪಾನೀಯ : 
ತೂಕ ನಷ್ಟಕ್ಕೆ ಶುಂಠಿ ನಿಂಬೆ ಪಾನೀಯವನ್ನು ಸಹ ಪ್ರಯತ್ನಿಸಬಹುದು . ತೂಕ ನಷ್ಟವನ್ನು ಹೊರತುಪಡಿಸಿ, ಜಠರಗರುಳಿನ ಸಮಸ್ಯೆಗಳಿಗೆ ಈ ಪಾನೀಯವು ತುಂಬಾ ಉಪಯುಕ್ತವಾಗಿದೆ.  ಹೊಟ್ಟೆ ಉಬ್ಬುವುದು ಮತ್ತು ಆಸಿಡಿಟಿ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.


ತರಕಾರಿ ಸೂಪ್ : 
ತೂಕ ನಷ್ಟಕ್ಕೆ ತರಕಾರಿ ಸೂಪ್ ಗಳು ಬೆಸ್ಟ್ ಎಂದು ಹೇಳಲಾಗುತ್ತದೆ. ನೀವು ಕೂಡಾ ತೂಕ ನಷ್ಟವನ್ನು ಪ್ರಯತ್ನಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಕಡಿಮೆ ಕ್ಯಾಲೋರಿ ತರಕಾರಿ ಸೂಪ್ ಅನ್ನು ಸೇರಿಸಿಕೊಳ್ಳಬಹುದು. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.


ಆಪಲ್ ವಿನೆಗರ್ : 
ಊಟಕ್ಕೆ ಮೊದಲು ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ನಿಮ್ಮ ಮೆಟಾಬಾಲಿಸಂ ಹೆಚ್ಚುತ್ತದೆ. ಅಲ್ಲದೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೀಗಾಗಿ, ಅನಗತ್ಯ ಅನಾರೋಗ್ಯಕರ ಆಹಾರಗಳ ಸೇವನೆ ತಪ್ಪುತ್ತದೆ. 


ಇದನ್ನೂ  ಓದಿ : ದೇಹದಲ್ಲಿ ಹಿಮೋಗ್ಲೋಬಿನ್ ಅಥವಾ ರಕ್ತದ ಕೊರೆತೆ ಇದ್ದರೆ, ಈ ಸುಲಭ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.