ಮಳೆಗಾಲದಲ್ಲಿ ಕಾಡುವ ನೆಗಡಿ, ಕೆಮ್ಮಿಗೆ ರಾಮಬಾಣ ಈ ಬಳ್ಳಿಯ ಕಷಾಯ!

Amruthaballi Kashaya: ಮಳೆಗಾಲದಲ್ಲಿ ತುಂಬಾ ಜನರನ್ನು ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಯೆಂದರೆ ನೆಗಡಿ, ಕೆಮ್ಮು. ಈ ಸಮಸ್ಯೆಗೆ ಗಿಡಮೂಲಿಕೆಯಿಂದ ಪರಿಹಾರ ನೀಡಬಹುದು.   

Written by - Savita M B | Last Updated : Oct 2, 2023, 07:31 AM IST
  • ಶೀತ ಕೆಮ್ಮಿನಂತಹ ಸಮಸ್ಯೆಗಳು ಹೆಚ್ಚಾಗಿ ಶಾಲೆಗೆ ಹೋಗುವ ಮಕ್ಕಳಲ್ಲಿ ಕಂಡು ಬರುತ್ತದೆ
  • ಮಕ್ಕಳಿಗೆ ಆ್ಯಂಟಿಬಯೋಟಿಕ್‌ ಅತಿಯಾಗಿ ಕೊಡಬಾರದು.
  • ಬದಲಾಗಿ ಕಷಾಯ, ಮನೆಮದ್ದು ಬಳಸಿ ಕೆಮ್ಮು ಕಡಿಮೆಯಾಗುವಂತೆ ಮಾಡುವುದು ಒಳ್ಳೆಯದು.
ಮಳೆಗಾಲದಲ್ಲಿ ಕಾಡುವ ನೆಗಡಿ, ಕೆಮ್ಮಿಗೆ ರಾಮಬಾಣ ಈ ಬಳ್ಳಿಯ ಕಷಾಯ! title=

Amruthaballi Kashaya recipe: ಈ ಶೀತ ಕೆಮ್ಮಿನಂತಹ ಸಮಸ್ಯೆಗಳು ಹೆಚ್ಚಾಗಿ ಶಾಲೆಗೆ ಹೋಗುವ ಮಕ್ಕಳಲ್ಲಿ ಕಂಡು ಬರುತ್ತದೆ. ತಂಪಾದ ವಾತಾವರಣದಿಂದ ಅಥವಾ ಮಳೆಯಲ್ಲಿ ನೆನಯುವ ಕಾರಣದಿಂದಾಗಿಯೋ ಮಕ್ಕಳಲ್ಲಿ ಈ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. 

ಆದರೆ  ನೆಗಡಿ, ಕೆಮ್ಮು ಇದೆ ಎಂದು ಮಕ್ಕಳಿಗೆ ಆ್ಯಂಟಿಬಯೋಟಿಕ್‌ ಅತೀಯಾಗಿ ಕೊಡಬಾರದು. ಬದಲಾಗಿ ಕಷಾಯ, ಮನೆಮದ್ದು ಬಳಸಿ ಕೆಮ್ಮು ಕಡಿಮೆಯಾಗುವಂತೆ ಮಾಡುವುದು ಒಳ್ಳೆಯದು. ಈ ಕಷಾಯವನ್ನು ಅಮೃತ ಬಳ್ಳಿಯಿಂದ ಮಾಡಿ ಕುಡಿಸಿದರೆ ಇನ್ನೂ ಒಳ್ಳೆಯದು. 

ಅಮೃತಬಳ್ಳಿ ದೇಹದಲ್ಲಿರುವ ಕೊಳಕನ್ನು ಹೊರಹಾಕಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೇ ಸಂಧಿವಾತದ ಸಮಸ್ಯೆಯಿಂದಲೂ ಮುಕ್ತಿ ನೀಡುತ್ತದೆ. ಒಟ್ಟಾರೆಯಾಗಿ ಈ ಅಮೃತ ಬಳ್ಳಿ ದೇಹಕ್ಕೆ ವರದಾನವಿದ್ದಂತೆ. 

ಇದನ್ನೂ ಒದಿ-ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಈ ಒಂದು ಎಲೆ!

ಅದರಲ್ಲೂ ಈ ಮಳೆಗಾಲದಲ್ಲಿ ಅಮೃತಬಳ್ಳಿ ಕಷಾಯ ಮಾಡಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಶೀತ ಕೆಮ್ಮು ನೆಗಡಿಯತಂತಹ ಸಮಸ್ಯೆಗಳು ನಿಮ್ಮ ಬಳಿಯೂ ಸುಳಿಯುವುದಿಲ್ಲ. ಹಾಗಾದರೆ ಈ ಅಮೃತ ಬಳ್ಳಿ ಕಷಾಯ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. 

ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು
* 3-4 ಎಲೆ ಒಣ ಅಮೃತಬಳ್ಳಿ
* 2 ದೊಡ್ಡಪತ್ರೆ ಎಲೆ 
* 5-6 ತುಳಸಿ ದಳ
* 1 ಚಮಚ ಜೀರಿಗೆ 
* ಕಾಳು ಮೆಣಸು 
* ಬೆಳ್ಳುಳ್ಳಿ ಎಸಳು 
* ಅರಿಶಿಣ 
* ಜೇನು ತುಪ್ಪ

ಕಷಾಯ ಮಾಡುವ ವಿಧಾನ
* ಎರಡು ಕಪ್‌ ನೀರನ್ನು ಚೆನ್ನಾಗಿ ಕುದಿಸಿ ನಂತರ ಅದಕ್ಕೆ ಮೇಲಿನ ಎಲ್ಲ ವಸ್ತುಗಳನ್ನು ಹಾಕಿ 
* ನಂತರ ಅದನ್ನು ಸೂಸಿ ಆರುವ ಮುನ್ನ ಕುಡಿಯಿರಿ

ಇದನ್ನೂ ಒದಿ-ಈ ಹೂವಿನ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿಗೆ ಸಿಗುವುದು ಶಾಶ್ವತ ಪರಿಹಾರ ! ಹಿತ್ತಲಲ್ಲೇ ಅರಳುತ್ತದೆ ಈ ಹೂವು

ಅಮೃತ ಬಳ್ಳಿಯ ಸೇವನೆ ಮಿತವಾಗಿರಲಿ
ಅಮೃತ ಬಳ್ಳಿ ದೇಹಕ್ಕೆ ಉತ್ತಮ ಆದರೆ ಹೆಚ್ಚಾಗಿ ಸೇವಿಸಬಾರದು. ಬರೀ ಅಮೃತ ಬಳ್ಳಿ ಮಾತ್ರವಲ್ಲ ಯಾವುದೇ ಔಷಧವನ್ನು ಸಹ ಹೆಚ್ಚಾಗಿ ಸೇವಿಸಿದರೆ ಅಡ್ಡಪರಿಣಾಮ ಉಂಟಾಗುವುದು ಖಚಿತ.

ಮಧುಮೇಹವಿದ್ದವರಿಗೆ ವರದಾನ ಅಮೃತ ಬಳ್ಳಿ
ಮಧುಮೇಹವಿರುವವರಿಗೆ ಅಮೃತ ಬಳ್ಳಿ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಬದಲಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ನೀವು ಔಷಧ ತೆಗೆದುಕೊಳ್ಳದೇ ಈ ಬಳ್ಳಿಯನ್ನು ಸೇವಿಸಿದರೆ ಅದು ಮಧುಮೇಹವನ್ನು ನಿಯಂತ್ರಸುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News