ದೇಹದಲ್ಲಿ ಹಿಮೋಗ್ಲೋಬಿನ್ ಅಥವಾ ರಕ್ತದ ಕೊರೆತೆ ಇದ್ದರೆ, ಈ ಸುಲಭ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ!

Home Remedies For Low Hemoglobin: ಇಂದು ನಾವು ನಿಮಗಾಗಿ ಕೆಲ ಮನೆಮದ್ದುಗಳನ್ನು ತಂದಿದ್ದು,  ಹಿಮೋಗ್ಲೋಬಿನ್ ಅಥವಾ ರಕ್ತದ ಕೊರತೆಯಿಂದ ಬಳಲುತ್ತಿರುವ ಜನರಿಗೆ ಇವು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ. ಈ ಮೂರು ಮನೆಮದ್ದುಗಳನ್ನು ಅಳವಡಿಸಿಕೊಂಡರೆ ಸ್ವಲ್ಪ ಮಟ್ಟಿಗೆ ಹಿಮೋಗ್ಲೋಬಿನ್ ಕೊರತೆಯನ್ನು ನೀಗಿಸಬಹುದು. ಬನ್ನಿ ತಿಳಿದುಕೊಳ್ಳೋಣ Health News In Kannada  

Written by - Nitin Tabib | Last Updated : Oct 2, 2023, 10:05 PM IST
  • ರಕ್ತದ ಕೊರತೆ ಅಥವಾ ರಕ್ತಹೀನತೆಯಲ್ಲಿ ಮೊರಿಂಗಾ ಎಲೆಗಳು ಅಥವಾ ನುಗ್ಗೆ ಸೊಪ್ಪು ಪ್ರಯೋಜನಕಾರಿಯಾಗಿದೆ.
  • ಕಬ್ಬಿಣ, ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲದಂತಹ ಅನೇಕ ಪೋಷಕಾಂಶಗಳು ನುಗ್ಗೆಸೊಪ್ಪಿನಲ್ಲಿ ಕಂಡುಬರುತ್ತವೆ, ಇದು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ರಕ್ತಹೀನತೆಯನ್ನು ಹೋಗಲಾಡಿಸಬಹುದು.
ದೇಹದಲ್ಲಿ ಹಿಮೋಗ್ಲೋಬಿನ್ ಅಥವಾ ರಕ್ತದ ಕೊರೆತೆ ಇದ್ದರೆ, ಈ ಸುಲಭ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ! title=

ಬೆಂಗಳೂರು: ಹಿಮೋಗ್ಲೋಬಿನ್ ಅಥವಾ ರಕ್ತದ ಕೊರತೆಯು ಯಾವುದೇ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಕೊರತೆಯು ರಕ್ತಹೀನತೆಯಂತಹ ಸ್ಥಿತಿಯನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಸರಳ ಮನೆಮದ್ದುಗಳು ರಕ್ತಹೀನತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ. ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಮಾತ್ರ ಯಾವುದೇ ಔಷಧಿ ಇಲ್ಲದೆ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಬಹುದು. ರಕ್ತ ಹೀನತೆಯನ್ನು ಹೋಗಲಾಡಿಸಲು ಮೂರು ಸರಳ ಮನೆಮದ್ದುಗಳನ್ನು ತಳಿದುಕೊಳ್ಳೋಣ ಬನ್ನಿ. Lifestyle News In Kannada

ನುಗ್ಗೆ ಸೊಪ್ಪು
ರಕ್ತದ ಕೊರತೆ ಅಥವಾ ರಕ್ತಹೀನತೆಯಲ್ಲಿ ಮೊರಿಂಗಾ ಎಲೆಗಳು ಅಥವಾ ನುಗ್ಗೆ ಸೊಪ್ಪು ಪ್ರಯೋಜನಕಾರಿಯಾಗಿದೆ. ಕಬ್ಬಿಣ, ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲದಂತಹ ಅನೇಕ ಪೋಷಕಾಂಶಗಳು ನುಗ್ಗೆಸೊಪ್ಪಿನಲ್ಲಿ ಕಂಡುಬರುತ್ತವೆ, ಇದು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ರಕ್ತಹೀನತೆಯನ್ನು ಹೋಗಲಾಡಿಸಬಹುದು.

ಬಿಳಿ ಎಳ್ಳು
ಎಳ್ಳು ಉತ್ತಮ ಪ್ರಮಾಣದ ಕಬ್ಬಿಣ ಮತ್ತು ಫೈಬರ್ ಅನ್ನು ಹೊಂದಿರುತ್ತದೆ, ಇದು ರಕ್ತಹೀನತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಎಳ್ಳಿನ ಸೇವನೆಯು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತಹೀನತೆ ಅಥವಾ ರಕ್ತದ ಕೊರತೆಯಿಂದ ಬಳಲುತ್ತಿರುವವರು ಪ್ರತಿದಿನ ಎಳ್ಳನ್ನು ಸೇವಿಸಬಹುದು. ಒಂದು ಚಮಚ ಎಳ್ಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಆ ನೀರನ್ನು ಕುಡಿಯಿರಿ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಇದನ್ನು ಎಳ್ಳು ಚಟ್ನಿ ಅಥವಾ ಲಡ್ಡು ಮಾಡಿಯೂ ಸೇವಿಸಬಹುದು. ಎಳ್ಳಿನಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ-ಕೂದಲುದುರುವಿಕೆ ಸಮಸ್ಯೆಗೆ ರಾಮಬಾಣ ಈ ಜ್ಯೂಸ್ ಗಳು... ಇಂದಿನಿಂದಲೇ ಟ್ರೈಮಾಡಿ!

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು
ರಕ್ತಹೀನತೆ ಅಥವಾ ರಕ್ತದ ಕೊರತೆ ಇದ್ದರೆ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಪ್ರಯೋಜನಕಾರಿಯಾಗಿದೆ. ತಾಮ್ರದಿಂದ ಸ್ವಲ್ಪ ಪ್ರಮಾಣದ ಕಬ್ಬಿಣವು ನೀರಿನಲ್ಲಿ ಕರಗುತ್ತದೆ, ಇದು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಾಮ್ರದ ಜಗ್, ಲೋಟ ಅಥವಾ ಬಟ್ಟಲಿನಲ್ಲಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿ. ಇದು ರಕ್ತದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸುತ್ತದೆ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ ಮತ್ತು ರಕ್ತಹೀನತೆಯಿಂದ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ-40ನೇ ವಯಸ್ಸಿನಲ್ಲೂ ಸ್ವೀಟ್ 16 ರೀತಿ ಕಾಣಿಸಿಕೊಳ್ಳಬೇಕೆ? ಈ ಚಹಾ ನಿಮ್ಮ ಆಹಾರದಲ್ಲಿರಲಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News