Deepika Padukone Fitness Diet :  ದೀಪಿಕಾ ಪಡುಕೋಣೆ ತಮ್ಮ ಫಿಟ್‌ನೆಸ್ ಬಗ್ಗೆ ಕಾಳಜಿ ವಹಿಸುತ್ತಾರೆ. ಇದಕ್ಕಾಗಿ ಅವರು ವ್ಯಾಯಾಮ, ಯೋಗ, ಜಿಮ್ ಹೊರತಾಗಿ ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಹಾಗಾಗಿ ಬಹಳ ತಾವು ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವ ನಿಯಮವನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ.ಹಾಗಂತ ದೀಪಿಕಾ ಬಾಯಿಕಟ್ಟಿ ಬದುಕುತ್ತಾರೆ ಎಂದೇನಲ್ಲ. ಮೂರು ಹೊತ್ತು ಕೂಡಾ ಚೆನ್ನಾಗಿಯೇ ತಿನ್ನುತ್ತಾರೆ. ಆದರೆ ಏನು ತಿನ್ನುತ್ತಾರೆ ಎನ್ನುವುದರ ಬಗ್ಗೆ ಕಾಳಜಿ ಇರುತ್ತದೆ ಅಷ್ಟೇ. 


COMMERCIAL BREAK
SCROLL TO CONTINUE READING

ಇನ್ನು ದೀಪಿಕಾ ಪಡುಕೋಣೆ ದೊಡ್ಡ ಫೂಡಿ ಅಂತೆ. ಅದರ ಮಧ್ಯೆಯೂ ಅವರು ತಮ್ಮ ಫಿಗರ್ ಮತ್ತು ತೂಕ ಎರಡನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ. ಇದಕ್ಕಾಗಿ ದೀಪಿಕಾ ವಿಶೇಷ ಆಹಾರ ಯೋಜನೆಯನ್ನು ಹೊಂದಿದ್ದು ಅದನ್ನು ಅವರು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ಅವರ ಡಯೆಟಿಷಿಯನ್ ಪೂಜಾ ಮಖಿಜಾ ಅವರು ನಟಿಯ ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ.


ಇದನ್ನೂ ಓದಿ : ಸ್ಥೂಲಕಾಯತೆಯ ನಿಯಂತ್ರಣಕ್ಕೆ ಇಲ್ಲಿದೆ ರಾಮಬಾಣ..! 


ಈ ಆಹಾರಗಳೆಂದರೆ ದೀಪಿಕಾಗೆ ಬಲು ಇಷ್ಟ : 
ತನ್ನ ನಟನೆಯ ಜೊತೆಗೆ ಸೌಂದರ್ಯ ಮತ್ತು ಫಿಟ್ನೆಸ್ ನಿಂದ ಎಲ್ಲರ ಮನ ಗೆದ್ದಿರುವ ದೀಪಿಕಾ ಪಡುಕೋಣೆ, ತಮ್ಮ ಆಹಾರ ಕ್ರಮದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ದೀಪಿಕಾ ಪಾಸ್ಟಾ, ಚೈನೀಸ್ ಫುಡ್ ಮತ್ತು ಭಾರತೀಯ ಆಹಾರ ಅದರಲ್ಲೂ ಬೇಳೆ ಸಾರು ಮತ್ತು ಅನ್ನವನ್ನು ಇಷ್ಟಪಡುತ್ತಾರೆ.ಸ್ಟ್ರೀಟ್ ಫುಡ್‌ನಲ್ಲಿ ಅವರಿಗೆ  ಸೇವ್ ಪುರಿ ಅಂದರೆ ಅಚ್ಚುಮೆಚ್ಚು. ಸೇವ್ ಪೂರಿ ಕಂಡರೆ ತಿನ್ನದೇ ಬಿಡುವುದಿಲ್ಲವಂತೆ ಈ ನಟಿ. 


ಫಿಟ್‌ನೆಸ್‌ಗಾಗಿ ದೀಪಿಕಾ ಅನುಸರಿಸುವ ಆಹಾರ ಪದ್ಧತಿ : 
ದೀಪಿಕಾ ಪಡುಕೋಣೆ ಸಿನಿಮಾ ಮತ್ತು ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಕಾರಣ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆದ್ದರಿಂದ ಅವರು  ಬೆಳಿಗ್ಗೆ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.


ಇದನ್ನೂ ಓದಿ : White Hair Home Remedies: ಟೀ ಪೌಡರ್ ನಲ್ಲಿ ಈ ಒಂದು ಪದಾರ್ಥ ಬೆರೆಸಿ ತಲೆಗೆ ಹಚ್ಚಿ, ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗುತ್ತವೆ!


ಬೆಳಗಿನ ಉಪಾಹಾರ : 
ದೀಪಿಕಾ ತುಂಬಾ ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ, ಅವಳು ಕಡಿಮೆ ಕೊಬ್ಬಿನ ಹಾಲು, ಮೊಟ್ಟೆಯ ಬಿಳಿ ಭಾಗ ಅಥವಾ ದಕ್ಷಿಣ ಭಾರತೀಯ ಆಹಾರವನ್ನು ಸೇವಿಸುತ್ತಾರೆ. ಅದರಲ್ಲೂ ಉಪ್ಪಿಟ್ಟು, ರವಾ ದೋಸೆ ಅಥವಾ ಇಡ್ಲಿಯನ್ನು ಬಹಳವಾಗಿ ಇಷ್ಟಪಡುತ್ತಾರೆ. 


ಇನ್ನು ಮಧ್ಯಾಹ್ನದ ಊಟಕ್ಕೆ  ದೀಪಿಕಾ ಚಪಾತಿ, ಪಲ್ಯ, ಸಲಾಡ್ ಮತ್ತು  ತಂದೂರಿ ಫಿಶ್  ತಿನ್ನಲು ಇಷ್ಟಪಡುತ್ತಾರೆ.


ಫಿಟ್ನೆಸ್ ಕಾಪಾಡಿಕೊಳ್ಳಲು ರಾತ್ರಿ ಲಘು ಆಹಾರವನ್ನು ಸೇವಿಸುತ್ತಾರೆ. ಹಾಗಾಗಿ ರಾತ್ರಿ ಅವರು ಸಲಾಡ್, ಚಪಾತಿ- ಪಲ್ಯ ಮತ್ತು ಕಾಲೋಚಿತ ತರಕಾರಿಗಳನ್ನು ಸೇವಿಸುತ್ತಾರೆ. 


ಇದಲ್ಲದೆ, ಅವರು ತಾಜಾ ಹಣ್ಣುಗಳು, ಎಳ ನೀರು ಮತ್ತು ಒಣ ಹಣ್ಣುಗಳನ್ನು   ತಿನ್ನುತ್ತಾರೆ. ಹಾಗಾಗಿ 38 ರ ವಯಸ್ಸಿನಲ್ಲಿಯೂ ಅವರ ದೇಹದ ಆಕಾರದಲ್ಲಿ ಕಿಂಚಿತ್ತೂ ಏರು ಪೇರು ಕಂಡು ಬಂದಿಲ್ಲ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ