Ratlam Mahalaxmi Temple: ಇಂದು (ಅಕ್ಟೋಬರ್ 24) ದೇಶಾದ್ಯಂತ ದೀಪಗಳ ಹಬ್ಬ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ ಮತ್ತು ಈ ಸಂದರ್ಭದಲ್ಲಿ ನಾವು ಲಕ್ಷ್ಮಿ ದೇವಿಯ ವಿಶೇಷ ದೇವಾಲಯದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಈ ದೇವಾಲಯವು ತನ್ನ ವಿಶೇಷತೆಗಳಿಂದಾಗಿ ತುಂಬಾ ಪ್ರಸಿದ್ಧವಾಗಿದೆ. ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಒಂದು ವಿಶೇಷವಾದ ಮಹಾಲಕ್ಷ್ಮಿಯ ದೇವಾಲಯವಿದೆ. ಈ ವಿಶೇಷ ದೇವಾಲಯದಲ್ಲಿ ಈ ದಿನ ತಾಯಿ ಮಹಾಲಕ್ಷ್ಮಿ ದೇವಸ್ಥಾನವನ್ನು ಹೂವುಗಳಿಂದ ಅಲಂಕರಿಸುವ ಬದಲಿಗೆ ನೋಟುಗಳಿಂದ ಅಲಂಕರಿಸಲಾಗುತ್ತದೆ. ಅಷ್ಟೇ ಅಲ್ಲ, ದೀಪಾವಳಿಯ ದಿನ ಇಲ್ಲಿಗೆ ಭೇಟಿ ನೀಡುವ ಭಕ್ತರು  ನೋಟುಗಳ ಜೊತೆಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪ್ರಸಾದವಾಗಿ ಪಡೆಯುತ್ತಾರೆ. 


COMMERCIAL BREAK
SCROLL TO CONTINUE READING

ಪುರಾಣಗಳ ಪ್ರಕಾರ, ಮಹಾಲಕ್ಷ್ಮಿ ದೇವಾಲಯ ಎಂದು ಕರೆಯಲ್ಪಡುವ ಈ ದೇವಾಲಯದಲ್ಲಿ, ಪ್ರಾಚೀನ ಕಾಲದಲ್ಲಿ, ರಾಜ-ಮಹಾರಾಜರು ಸಂತೋಷ, ಸಮೃದ್ಧಿ ಮತ್ತು ಸಂಪತ್ತುಗಾಗಿ ದೇವಾಲಯದಲ್ಲಿ ಕರೆನ್ಸಿಗಳ ಜೊತೆಗೆ ಆಭರಣಗಳನ್ನು ಅರ್ಪಿಸುತ್ತಿದ್ದರು. ನಂತರ ಇಲ್ಲಿ ನೋಟುಗಳನ್ನು ನೀಡುವ ಸಂಪ್ರದಾಯ ಪ್ರಾರಂಭವಾಯಿತು. ಈ ವಿಶೇಷವಾದ ಲಕ್ಷ್ಮಿ ದೇವಿಯ ದೇವಾಲಯದಲ್ಲಿ, ಭಕ್ತರಿಗೆ ಪ್ರಸಾದದ ರೂಪದಲ್ಲಿ ಎಲ್ಲಾ ರೀತಿಯ ಕರೆನ್ಸಿಗಳನ್ನು ನೀಡಲಾಗುತ್ತದೆ ಮತ್ತು ಪ್ರಪಂಚದಾದ್ಯಂತದ ಕರೆನ್ಸಿಗಳು ಇಲ್ಲಿ ಕಾಣುತ್ತವೆ. 


ಇದನ್ನೂ ಓದಿ- Diwali celebrations: ಅಚಾನಕ್ ಪಟಾಕಿ ಸಿಡಿದು ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು.?


ದೇವಸ್ಥಾನವನ್ನು ಹೂವಿನ ಬದಲು ನೋಟುಗಳಿಂದ ಅಲಂಕರಿಸಲಾಗುವುದು:
ಈ ದೇವಾಲಯವು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿದೆ ಮತ್ತು ಇದರ ವಿಶೇಷವೆಂದರೆ ದೀಪಾವಳಿಯಲ್ಲಿ ಈ ದೇವಾಲಯವನ್ನು ಹೂವುಗಳಿಂದ ಅಲಂಕರಿಸಲಾಗುವುದಿಲ್ಲ. ಬದಲಿಗೆ ದೇವಾಲಯವನ್ನು ನೋಟುಗಳು,  ಚಿನ್ನ ಮತ್ತು ಬೆಳ್ಳಿಯಿಂದ ಅಲಂಕರಿಸಲಾಗುವುದು. ದೇವಾಲಯದ ಗೋಡೆ, ಲಕ್ಷ್ಮಿ ದೇವಿಯ ವಿಗ್ರಹ ಮತ್ತು ದೇವಾಲಯದ ಪ್ರಾಂಗಣದಲ್ಲಿರುವ ಅಂಚುಗಳನ್ನು ನೋಟುಗಳಿಂದ ಅಲಂಕರಿಸಲಾಗುತ್ತದೆ.


ಇದನ್ನೂ ಓದಿ- Diwali Firecrackers Rule 2022: ದೀಪಾವಳಿಯಂದು ಪಟಾಕಿ ಸಿಡಿಸಬಹುದೇ? ಇಲ್ಲಿದೆ ನಿಯಮ


ಭಕ್ತರು ಪ್ರಸಾದದಲ್ಲಿ ಚಿನ್ನ, ಬೆಳ್ಳಿ ಮತ್ತು ಹಣವನ್ನು ಪಡೆಯುತ್ತಾರೆ: 
ಈ ದೇವಾಲಯದಲ್ಲಿ, ದೀಪಾವಳಿಯ ಹಬ್ಬವು ಧಂತೇರಸ್‌ನಿಂದಲೇ ಪ್ರಾರಂಭವಾಗುತ್ತದೆ ಮತ್ತು ದೀಪೋತ್ಸವವನ್ನು ಐದು ದಿನಗಳವರೆಗೆ ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ, ಲಕ್ಷ್ಮಿ ದೇವಿಯ ಜೊತೆಗೆ ಭಗವಾನ್ ಕುಬೇರನ ಆಸ್ಥಾನವನ್ನು ಸಹ ನಡೆಸಲಾಗುತ್ತದೆ ಮತ್ತು ಮಹಿಳೆಯರಿಗೆ ಕುಬೇರನ ಮೂಟೆಯನ್ನು ನೀಡಲಾಗುತ್ತದೆ. ವಿಶೇಷವೆಂದರೆ ಈ ದೇವಾಲಯಕ್ಕೆ ಭೇಟಿ ನೀಡಲು ಬರುವ ಭಕ್ತರಿಗೆ ಪ್ರಸಾದದಲ್ಲಿ ನೋಟುಗಳನ್ನು ನೀಡಲಾಗುತ್ತದೆ. ಇದಲ್ಲದೆ, ಅನೇಕ ಜನರು ಪ್ರಸಾದವಾಗಿ ಚಿನ್ನ ಮತ್ತು ಬೆಳ್ಳಿಯನ್ನು ಸಹ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.