Diwali celebrations: ಅಚಾನಕ್ ಪಟಾಕಿ ಸಿಡಿದು ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು.?

ಯಾರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಹ ಕೆಲವೊಮ್ಮೆ ಪಟಾಕಿ ಸಿಡಿಸುವಾಗ ಕೆಲವು ಅಪಘಾತಗಳು ನಡೆಯುತ್ತವೆ. ಇದಕ್ಕಾಗಿ ನಾವು ಪಟಾಕಿ ಸಿಡಿಸುವಾಗ ಏನು ಮಾಡಬೇಕು? ಏನು ಮಾಡಬಾರದು..? ಅಚಾನಕ್ ಪಟಾಕಿ ಸಿಡಿದು ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು  ಎಂಬ ಬಗ್ಗೆಯೂ ತಿಳಿದಿರುವುದು ಅತ್ಯಗತ್ಯ. ನೀವು ಈ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಮೊದಲು ಈ ವಿಷಯಗಳನ್ನೊಮ್ಮೆ ತಪ್ಪದೇ ತಿಳಿಯಿರಿ.

Written by - Yashaswini V | Last Updated : Oct 24, 2022, 08:06 AM IST
  • ಪಟಾಕಿ ಸುಡುವಾಗ ಎಚ್ಚರಿಕೆಯಿಂದ ಸುಡುವಂತೆ ಮನವಿ
  • ಇದೇ ವೇಳೆ ಮಕ್ಕಳಿಗೆ ಪಟಾಕಿ ಕೊಡುವಾಗ ದೊಡ್ಡ ಶಬ್ದವಾಗುವ ಪಟಾಕಿಯನ್ನು ಕೊಡದಂತೆ ಜಾಗೃತಿ ವಹಿಸಿ.
  • ಪಟಾಕಿ ಸುಡುವಾಗ ತಮ್ಮ‌ ತಮ್ಮ ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಿ- ಮಿಂಟೋ ಆಸ್ಪತ್ರೆ ನಿರ್ದೇಶಕಿ ಸುಜಾತಾ ರಾಥೋಡ್
Diwali celebrations: ಅಚಾನಕ್ ಪಟಾಕಿ ಸಿಡಿದು ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು.? title=
Diwali firecrackers precautions

ಬೆಂಗಳೂರು: ಇಂದು ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಾಗುತ್ತಿದೆ. ಭಾರತದಲ್ಲಿ ದೀಪಾವಳಿ ಆಚರಣೆಗೆ ಬಹಳ ಮಹತ್ವವಿದೆ. ತ್ರೇತಾ ಯುಗದಲ್ಲಿ ಲಂಕೆಯಲ್ಲಿ ರಾವಣನನ್ನು ಅಂತ್ಯಗೊಳಿಸಿದ ನಂತರ ಭಗವಾನ್ ಶ್ರೀ ರಾಮನು ಸೀತಾ ಮಾತೆ ಮತ್ತು ಲಕ್ಷ್ಮಣರೊಂದಿಗೆ ಈ ದಿನ ಅಯೋಧ್ಯೆಗೆ ಮರಳಿದನು ಎಂದು ಹೇಳಲಾಗುತ್ತದೆ. 14 ವರ್ಷಗಳ ವನವಾಸದ ನಂತರ ಶ್ರೀರಾಮನನ್ನು ಹಿಂದಿರುಗಿದ ಸಂತೋಷದಲ್ಲಿ, ಅಯೋಧ್ಯೆಯ ಜನರು ಅಮಾಸ್ಯೆಯ ದಿನದಂದು ದೀಪವನ್ನು ಬೆಳಗಿಸುವ ಮೂಲಕ ಅವರನ್ನು ಸ್ವಾಗತಿಸಿದರು, ಅಂದಿನಿಂದ ಈ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ. ಪ್ರಸ್ತುತ, ದೀಪಾವಳಿ ಆಚರಣೆ ಎಂದರೆ ಧಾರ್ಮಿಕ ಆಚರಣೆಗಳ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸುವುದು. ಪಟಾಕಿ ಇಲ್ಲದೆ ದೀಪಾವಳಿ ಪೂರ್ಣ ಎಂದೆನಿಸುವುದಿಲ್ಲ. ಆದರೆ, ಸಂಭ್ರಮದ ಮಧ್ಯೆ ಎಚ್ಚರವಹಿಸುವುದೂ ಕೂಡ ಅಗತ್ಯ. ಇಲ್ಲದಿದ್ದರೆ, ಹಲವು ಬಾರಿ ಇದು ಪ್ರಾಣಕ್ಕೇ ಕುತ್ತಾಗಬಹುದು.

ದೀಪಾವಳಿ ಆಚರಣೆಯಲ್ಲಿ ಪಟಾಕಿ ಸುಡುವ ಬಗ್ಗೆ ಮಾತನಾಡಿರುವ ಮಿಂಟೋ ಆಸ್ಪತ್ರೆ ನಿರ್ದೇಶಕಿ ಸುಜಾತಾ ರಾಥೋಡ್,  ಪಟಾಕಿ ಸುಡುವಾಗ ಎಚ್ಚರಿಕೆಯಿಂದ ಸುಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಮಕ್ಕಳಿಗೆ ಪಟಾಕಿ ಕೊಡುವಾಗ ದೊಡ್ಡ ಶಬ್ದವಾಗುವ ಪಟಾಕಿಯನ್ನು ಕೊಡದಂತೆ ಜಾಗೃತಿ ವಹಿಸಿ. ತಮ್ಮ‌ ತಮ್ಮ ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಿ ಎಂದು ಎಂದು ಮನವಿ ಮಾಡಿದ್ದಾರೆ.

ಯಾರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಹ ಕೆಲವೊಮ್ಮೆ ಪಟಾಕಿ ಸಿಡಿಸುವಾಗ ಕೆಲವು ಅಪಘಾತಗಳು ನಡೆಯುತ್ತವೆ. ಇದಕ್ಕಾಗಿ ನಾವು ಪಟಾಕಿ ಸಿಡಿಸುವಾಗ ಏನು ಮಾಡಬೇಕು? ಏನು ಮಾಡಬಾರದು..? ಅಚಾನಕ್ ಪಟಾಕಿ ಸಿಡಿದು ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು ಎಂಬ ಬಗ್ಗೆಯೂ ತಿಳಿದಿರುವುದು ಅತ್ಯಗತ್ಯ. ನೀವು ಈ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಮೊದಲು ಈ ವಿಷಯಗಳನ್ನೊಮ್ಮೆ ತಪ್ಪದೇ ತಿಳಿಯಿರಿ.

ಇದನ್ನೂ ಓದಿ- Diwali Firecrackers Rule 2022: ದೀಪಾವಳಿಯಂದು ಪಟಾಕಿ ಸಿಡಿಸಬಹುದೇ? ಇಲ್ಲಿದೆ ನಿಯಮ

ಪಟಾಕಿ ಸಿಡಿಸುವಾಗ ಈ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ: 

- ಪಟಾಕಿ ಸಿಡಿಸುವಾಗ ಫಸ್ಟ್ ಆ್ಯಡ್ ಬಾಕ್ಸ್ ರೆಡಿ ಇಟ್ಟುಕೊಳ್ಳಿ

- ಉದ್ದದ ಅಗರ್ಬತ್ತಿ ಇಟ್ಟುಕೊಂಡು ಪಟಾಕಿ ಹಚ್ಚಿ

- ಜಾಸ್ತಿ ಬೆಂಕಿ‌ ಉಗುಳುವ ಪಟಾಕಿ ಬಳಸಬೇಡಿ

- ಹೂವಿನ ಪಾಟ್ ಎತ್ತರದ ಜಾಗದಲ್ಲಿ ಪಟಾಕಿ‌ ಇಟ್ಟು ಸಿಡಿಸಬೇಡಿ

- ಸಾಧ್ಯವಾದಷ್ಟು ತೆರೆದ ಜಾಗದಲ್ಲಿ ಪಟಾಕಿ ಸಿಡಿಸಿ

ಅಚಾನಕ್ ಪಟಾಕಿ ಸಿಡಿದು ಕಣ್ಣಿಗೆ ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು?
* ಅಕಸ್ಮಾತ್ ಕಣ್ಣಿಗೆ ಗಾಯವಾದರೆ ಒದ್ದೆ ಬಟ್ಟೆ ಕಣ್ಣಿನ ಮೇಲೆ ಇಡಿ

* ವಿಳಂಬ ಮಾಡದೆ ತಕ್ಷಣವೇ ಆಸ್ಪತ್ರೆ ಸೇರಿಸಿ

* ಕಣ್ಣಿಗೆ ಗಾಯವದ ಸಂದರ್ಭದಲ್ಲಿ ‌ಕಣ್ಣನ್ನು ಉಜ್ಜಬಾರದು

ಇದನ್ನೂ ಓದಿ- Diwali 2022: ದೀಪಾವಳಿಯ ಬಳಿಕ ಈ ಅಪಾಯಕಾರಿ ಕಾಯಿಲೆಗಳ ದಾಳಿ ಸಾಧ್ಯತೆ, ಎಚ್ಚರ!

ಪಟಾಕಿ ಸುಡುವಾಗ ಏನು ಮಾಡಬಾರದು..?

>> 5 ವರ್ಷದೊಳಗಿನ‌ ಮಕ್ಕಳನ್ನು ಪಟಾಕಿ ಸಿಡಿಸಲು ಬಿಡಬಾರದು

>>  ಮನೆಯೊಳಗೆ ಮತ್ತು ಪಾರ್ಕಿಂಗ್ ಜಾಗದಲ್ಲಿ ಪಟಾಕಿ ಸಿಡಿಸಬಾರದು

>> ಸುಟ್ಟ ಪಟಾಕಿಯನ್ನು ಕಂಡಕಂಡಲ್ಲಿ ಎಸೆಯಬಾರದು

>> ಸುಟ್ಟ ಪಟಾಕಿಯನ್ನು ಮತ್ತೆ ಮತ್ತೆ ಸುಡಬಾರದು

>> ತೆಳು ಬಟ್ಟೆಗಳನ್ನು ಧರಿಸಿ ಪಟಾಕಿ ಸಿಡಿಸಬಾರದು

>> ಪಟಾಕಿ ಸಿಡಿಸುವ ವೇಳೆ ವಿದ್ಯುತ್ ಸೆಂಟರ್ ಪಾಯಿಂಟ್ ಗಳಿಂದ ದೂರ ಇರುವುದು ಕಡ್ಡಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News