Dreams related with Money: ಈ ವಸ್ತುಗಳು ಕನಸಲ್ಲಿ ಬಂದರೆ ಭಾರೀ ಧನ ಲಾಭದ ಮುನ್ಸೂಚನೆ
ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ಕೆಲವು ವಿಶೇಷ ವಿಷಯಗಳನ್ನು ನೋಡಿದರೆ, ಇದ್ದಕ್ಕಿದ್ದಂತೆ ಸಂಪತ್ತು ಗಳಿಸುವ ಮುನ್ಸೂಚನೆಯಂತೆ.
ನವದೆಹಲಿ : ರಾತ್ರಿ ಕಾಣುವ ಕನಸು (Dreams) ಆ ದಿನವಿಡೀ ನಾವು ಮಾಡಿರುವ ಕೆಲಸಗಳನ್ನು ಅವಲಂಬಿಸಿರುತ್ತದೆ. ಹಾಗೆಯೇ ನಾವು ದಿನವಿಡೀ ಯಾವುದಾದರೂ ವಿಚಾರದ ಬಗ್ಗೆ ಬಹಳ ಯೋಚನೆ ಮಾಡುತ್ತಿರುತ್ತೆವೆಯೋ ಅದನ್ನೇ ಕನಸಲ್ಲಿ ಕಾಣುತ್ತೇವೆ ಎಂಬ ಮಾತು ಕೂಡಾ ಇದೆ. ಇದಲ್ಲದೆ, ಒಬ್ಬ ವ್ಯಕ್ತಿಯ ಈಡೇರದ ಬಯಕೆಗಳಿದ್ದರೆ, ಅದು ಕೂಡಾ ಕನಸಿನ ರೂಪದಲ್ಲಿ ಬರುತ್ತದೆ. ಸ್ವಪ್ನ ಶಾಸ್ತ್ರವನ್ನು (Swapna Shastra) ನಂಬುವುದಾದರೆ, ಕನಸಿನಲ್ಲಿ ಬರುವ ವಸ್ತುಗಳಿಗೂ ಭವಿಷ್ಯದ ಘಟನೆಗಳಿಗೂ ಸಂಬಂಧವಿದೆಯಂತೆ. ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಪೂರ್ವ-ಸೂಚನೆಯನ್ನು ಕನಸು ನೀಡುತ್ತದೆ ಎನ್ನಲಾಗಿದೆ.
ಈ ವಸ್ತುಗಳು ಕನಸಲ್ಲಿ ಕಂಡರೆ ಹಣ ಲಾಭವಂತೆ :
ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ಕೆಲವು ವಿಶೇಷ ವಿಷಯಗಳನ್ನು ನೋಡಿದರೆ, ಇದ್ದಕ್ಕಿದ್ದಂತೆ ಸಂಪತ್ತು ಗಳಿಸುವ ಮುನ್ಸೂಚನೆಯಂತೆ.
ಇದನ್ನೂ ಓದಿ : Vinayaki Devi Temple: ಶ್ರೀಗಣೇಶನ ಸ್ತ್ರೀ ಅವತಾರ 'ವಿನಾಯಕಿ' ಬಗ್ಗೆ ನಿಮಗೆಷ್ಟು ತಿಳಿದಿದೆ?
1. ದೇವರ (God) ಕನಸನ್ನು ಕಂಡರೆ ಅದು ಅತ್ಯಂತ ಶುಭ ಎನ್ನಲಾಗುತ್ತದೆ. ಯಾರಾದರೂ ಕನಸಿನಲ್ಲಿ ದೇವಿಯನ್ನು ನೋಡಿದರೆ ಭವಿಷ್ಯದಲ್ಲಿ ಸುಖ ಸಮೃದ್ಧಿ ಪಡೆಯುತ್ತಾರಂತೆ. ಅಲ್ಲದೆ, ಭವಿಷ್ಯದಲ್ಲಿ ಯಶಸ್ಸಿನ ಜೊತೆಗೆ ಧನಲಾಭ (Money) ಕೂಡಾ ಆಗಲಿದೆಯಂತೆ.
2. ನಿಮ್ಮ ಕನಸಿನಲ್ಲಿ ಹುಡುಗಿ ಅಥವಾ ಮಹಿಳೆ ನೃತ್ಯ ಮಾಡುವುದನ್ನು (Dancing Girl) ಕಂಡರೆ ಅದು ಸಂಪತ್ತು ಪ್ರಾಪ್ತಿಯಾಗುವ ಸಂಕೇತವೆಂದು ಪರಿಗಣಿಸಲಾಗುತ್ತದೆ.
3. ಇನ್ನು ದೇವಿ ಲಕ್ಷ್ಮೀ (Godess Lakshmi) ಕಮಲದ ಹೂವಿನ ಮೇಲೆ ವಿರಾಜಮಾನಳಾಗಿರುತ್ತಾಳೆ. ಹಾಗಾಗಿ ನೀವು ಕನಸಲ್ಲಿ ಕಮಲದ ಹೂವನ್ನು (Lotus) ನೋಡಿದರೆ, ತಾಯಿ ಲಕ್ಷ್ಮೀಯ ಅನುಗ್ರಹವು ನಿಮ್ಮ ಮೇಲೆ ಬೀಳಲಿದೆ ಎನ್ನುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ : Goddess Lakshmi Photo : ಧನ ಪ್ರಾಪ್ತಿ, ಸುಖ ಸಮೃದ್ಧಿಗಾಗಿ ಮನೆಯಲ್ಲಿ ಲಕ್ಷ್ಮೀ ದೇವಿಯ ಯಾವ ಫೋಟೋ ಇಡಬೇಕು ತಿಳಿದಿದೆಯಾ?
4. ಕನಸಿನಲ್ಲಿ ಕದಂಬ ವೃಕ್ಷವನ್ನು (Kadamb Tree) ಕಂಡರೆ, ಅದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮಗೆ ಉತ್ತಮ ಆರೋಗ್ಯ, ಗೌರವ ಮತ್ತು ಸಂಪತ್ತು ಸಿಗಲಿದೆ ಎಂದು. ಇದಲ್ಲದೆ, ನೆಲ್ಲಿ (Amla) ಅಥವಾ ನೆಲ್ಲಿಕಾಯಿ ಮರ ಕನಸಿನಲ್ಲಿ ಕಾಣುವುದು ಕೂಡ ಶುಭ ಎನ್ನಲಾಗಿದೆ. ಯಾಕೆಂದರೆ ಆಮ್ಲಾ ಶಿವ (Lord Shiva) ಮತ್ತು ವಿಷ್ಣು ಇಬ್ಬರ ಸಂಕೇತವಾಗಿದೆ. ಈ ಮರವನ್ನು ಪೂಜಿಸುವುದರಿಂದ ಬಡತನ ನಿರ್ಮೂಲನೆಯಾಗುತ್ತದೆ ಎನುವುದು ನಂಬಿಕೆ.
5. ನೀವು ಚಿನ್ನ (Gold), ಬೆಳ್ಳಿ ಅಥವಾ ಯಾವುದೇ ಆಭರಣವನ್ನು ಖರೀದಿಸುವ ಕನಸು ಕಂಡರೆ ಭವಿಷ್ಯದಲ್ಲಿ ಹಣ ಗಳಿಸುವ ಸಂಕೇತವಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.