ಕಂತೆ ಕಂತೆ ಕೂದಲು ಉದುರುವುದು ಇದೇ ಕಾರಣದಿಂದ ! ತಲೆ ಬೋಳಾಗುವುದಕ್ಕೆ ಮುನ್ನ ಈ ಉಪಾಯ ಅನುಸರಿಸಿ !
Reason For Hair Fall and Remedies: ಕೂದಲು ಉದುರುವಿಕೆಗೆ 5 ಪ್ರಮುಖ ಕಾರಣಗಳಿವೆ. ಇದಕ್ಕೆ ಪರಿಹಾರ ಕೂಡಾ ಇದೆ.
Reason For Hair Fall and Remedies : ಕೂದಲು ಉದುರುವುದು, ಕೂದಲು ಒಡೆಯುವುದು ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಎದುರಿಸುತ್ತಿರುವ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಜನರು ಈ ಸಮಸ್ಯೆಯನ್ನು ಹೆಚ್ಚೇ ಎದುರಿಸುತ್ತಿದ್ದಾರೆ. ಕೆಲವರಿಗೆ ಕೂದಲು ಬೆಳೆಯುತ್ತದೆಯಾದರೂ ಬಹಳ ದುರ್ಬಲವಾಗಿರುತ್ತದೆ. ಹೀಗಾಗಿ ಕೂದಲಿಗೆ ಬಾಚಣಿಕೆ ಹಾಕಿದರೆ ಸಾಕು ಕಂತೆ ಕಂತೆ ಕೂದಲು ಬಾಚಣಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅಷ್ಟು ಮಾತ್ರವಲ್ಲ ಬೆಳಗ್ಗೆ ಎದ್ದ ಕೂಡಲೇ ದಿಂಬು ನೋಡಿದರೆ ದಿಂಬು ತುಂಬಾ ಕೂದಲು ಕಾಣಿಸಿಕೊಳ್ಳುತ್ತದೆ. ಹೀಗಾದಾಗ ಬೋಳು ತಲೆಯ ಅಪಾಯ ಕಾಡತೊಡಗುತ್ತದೆ. ಕೂದಲು ಉದುರುವಿಕೆಗೆ 5 ಪ್ರಮುಖ ಕಾರಣಗಳಿವೆ. ಇದಕ್ಕೆ ಪರಿಹಾರ ಕೂಡಾ ಇದೆ.
ಕೂದಲು ಉದುರಲು 5 ಪ್ರಮುಖ ಕಾರಣಗಳು :
1. ಪೋಷಕಾಂಶಗಳ ಕೊರತೆ:
ಕೂದಲ ಬೆಳವಣಿಗೆ ಮತ್ತು ಆರೈಕೆಗೆ ವಿಟಮಿನ್ ಇ, ವಿಟಮಿನ್ ಡಿ, ಪ್ರೊಟೀನ್ ಸೇರಿದಂತೆ ಹಲವು ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ. ಯಾವಾಗ ದೇಹದಲ್ಲಿ ಈ ವಿಟಮಿನ್ ಗಳ ಕೊರತೆ ಕಾಣಿಸಿಕೊಳ್ಳುವುದೋ ಆಗ ಕೂದಲು ಉದುರಲಾರಂಭಿಸುತ್ತದೆ.
ಇದನ್ನೂ ಓದಿ : Diabetes ನಿಂದ ಕ್ಯಾನ್ಸರ್ ಅಪಾಯ ಕೂಡ ಎದುರಾಗುತ್ತಂತೆ... ಎಚ್ಚರ! ಹೊಸ ಅಧ್ಯಯನ ಹೇಳಿದ್ದೇನು?
2. ಕೆಮಿಕಲ್ ಮತ್ತು ಹೀಟ್ ಟ್ರೀಟ್ ಮೆಂಟ್ :
ಇತ್ತೀಚಿನ ದಿನಗಳಲ್ಲಿ, ಕೂದಲು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಲು ರಾಸಾಯನಿಕ ಆಧಾರಿತ ಉತ್ಪನ್ನಗಳನ್ನು ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ. ಅಲ್ಲದೆ, ಹೀಟ್ ಟ್ರೀಟ್ ಮೆಂಟ್ ಅನ್ನು ಬಹುತೇಕ ಮಂದಿ ಆಶ್ರಯಿಸುತ್ತಾರೆ. ಇದು ಒಮ್ಮೆಗೆ ಕೂದಲು ಅಂದವಾಗಿ ಕಾಣುವಂತೆ ಮಾಡುತ್ತದೆ. ಆದರೆ, ನಂತರ ಅದರ ಅಡ್ಡ ಪರಿಣಾಮ ಕಂಡು ಬರುತ್ತದೆ.
3. ಹಾರ್ಮೋನುಗಳ ಬದಲಾವಣೆಗಳು:
ಗರ್ಭಾವಸ್ಥೆಯಲ್ಲಿ ಮಹಿಳೆಯರು ಅನೇಕ ಹಾರ್ಮೋನುಗಳ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಕೂದಲು ಉದುರುವುದು ಅಥವಾ ಕೂದಲು ಒಡೆಯುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
4. ಹಾರ್ಮೋನುಗಳ ಅಸಮತೋಲನ:
ಕೆಲವರು ಹೈಪೋಥೈರಾಯ್ಡಿಸಮ್ ಅಂದರೆ ಥೈರಾಯ್ಡ್ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದನ್ನು ಹೊರತುಪಡಿಸಿ ಅನೇಕ ಮಹಿಳೆಯರು PCOS ಸಮಸ್ಯೆಯನ್ನು ಕೂಡಾ ಎದುರಿಸುತ್ತಿರುತ್ತಾರೆ. ಇಂತಹ ಹಾರ್ಮೋನ್ ಅಸಮತೋಲನದಿಂದಾಗಿ ಕೂದಲು ಉದುರಲು ಆರಂಭವಾಗುತ್ತದೆ.
ಇದನ್ನೂ ಓದಿ : ಮದ್ಯಾಹ್ನದ ನಿದ್ರೆ ಆರೋಗ್ಯಕ್ಕೆ ಒಳ್ಳೆಯದಾ ಅಥವಾ... ಇಲ್ಲಿದೆ ಉತ್ತರ !
5. ಆಟೋಇಮ್ಯೂನ್ ಕಾಯಿಲೆ:
ನೀವು ಯಾವುದೇ ರೀತಿಯ ಆಟೋಇಮ್ಯೂನ್ ಕಾಯಿಲೆಯನ್ನು ಎದುರಿಸುತ್ತಿದ್ದರೆ ಅದು ನಿಮ್ಮ ಕೂದಲಿನ ಬೆಳವಣಿಗೆ ಮತ್ತು ಅದರ ಬಲದ ಮೇಲೆ ಪರಿಣಾಮ ಬೀರಬಹುದು.
ಕೂದಲು ಉದುರುವುದನ್ನು ತಡೆಯುವುದು ಹೇಗೆ ? :
1. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ.
ಕೂದಲಿನ ಆರೋಗ್ಯಕ್ಕೆ ಐರನ್ ಬಹಳ ಮುಖ್ಯ. ಇದಕ್ಕಾಗಿ ಹಸಿರು ಎಲೆಗಳ ತರಕಾರಿಗಳು, ಬೀಜಗಳು ಮತ್ತು ಒಣ ಹಣ್ಣುಗಳನ್ನು ಸೇವಿಸಿ. ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಗಾಗಿ ಚಿಕನ್, ಸೀ ಫುಡ್ ಅಥವಾ ಮೀನು, ಕಾಳುಗಳು, ಸೋಯಾಬೀನ್ ತಿನ್ನಿ. ವಿಟಮಿನ್ ಇಗಾಗಿ ಸೂರ್ಯಕಾಂತಿ ಬೀಜಗಳು, ಮೊಟ್ಟೆಗಳು, ಆವಕಾಡೊಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ .
2. ಕೂದಲನ್ನು ಸೂರ್ಯನ ಬೆಳಕಿಗೆ ಒಡ್ಡಿ :
ಕೂದಲನ್ನು ಸೂರ್ಯನ ಬೆಳಕಿಗೆ ಒಡ್ಡಿ. ಕೂದಲಿಗೆ ವಿಟಮಿನ್ ಡಿ ಅಗತ್ಯವಾಗಿ ಬೇಕು. ಅದನ್ನು ಪಡೆಯಲು ನಿಮಗೆ ಸೂರ್ಯನ ಬೆಳಕು ಬೇಕೇ ಬೇಕು. ಇದಕ್ಕಾಗಿ ಮುಂಜಾನೆ ಸ್ವಲ್ಪ ಹೊತ್ತು ಸೂರ್ಯ ಬೆಳಕಿನಲ್ಲಿ ಕುಳಿತುಕೊಳ್ಳಬೇಕು. ಇದು ಕೂದಲನ್ನು ಬಲಪಡಿಸುತ್ತದೆ. ಆದರೆ ನೆನಪಿರಲಿ ಸೂರ್ಯನ ಪ್ರಖರ ಕಿರಣಗಳಿಂದ ಮತ್ತು ಮಾಲಿನ್ಯದಿಂದ ನಿಮ್ಮ ಕೂದಲನ್ನು ರಕ್ಷಿಸಿಕೊಳ್ಳುವುದು ಕೂಡಾ ಬಹಳ ಮುಖ್ಯ.
ಇದನ್ನೂ ಓದಿ : ರಾಗಿಯನ್ನು ನಿತ್ಯ ಖಾಲಿ ಹೊಟ್ಟೆಗೆ ಹೀಗೆಯೇ ತಿನ್ನಿ, ಹೊಟ್ಟೆ - ಸೊಂಟದ ಭಾಗ ಸ್ಲಿಂ ಆಗಿಯೇ ಇರುವುದು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.