Friday Remedies: ಶುಕ್ರವಾರ ಈ ಕೆಲಸ ಮಾಡಿದ್ರೆ ಲಕ್ಷ್ಮಿದೇವಿಯ ಆಶೀರ್ವಾದದಿಂದ ಹಣದ ಸುರಿಮಳೆ!
ಹಿಂದೂ ಧರ್ಮಗ್ರಂಥಗಳಲ್ಲಿ ತಾಯಿ ಲಕ್ಷ್ಮಿದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಶುಕ್ರವಾರವನ್ನು ತಾಯಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಈ ದಿನದಂದು ಕೈಗೊಳ್ಳುವ ಕೆಲವು ಕ್ರಮಗಳು ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ.
ನವದೆಹಲಿ: ಧಾರ್ಮಿಕ ಗ್ರಂಥಗಳ ಪ್ರಕಾರ ಶುಕ್ರವಾರವನ್ನು ಲಕ್ಷ್ಮಿದೇವಿಗೆ ಸಮರ್ಪಿಸಲಾಗಿದೆ. ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ತಾಯಿ ಅನುಗ್ರಹ ನೀಡುತ್ತಾಳೆ. ಜ್ಯೋತಿಷ್ಯದಲ್ಲಿ ಶುಕ್ರವಾರದ ಕೆಲವು ವಿಶೇಷ ಕ್ರಮಗಳ ಬಗ್ಗೆ ಹೇಳಲಾಗಿದೆ. ಈ ದಿನ ಲಕ್ಷ್ಮಿದೇವಿಯ ಪರಿಹಾರಗಳು ಸಂಪತ್ತು, ಐಶ್ವರ್ಯ, ಸೌಂದರ್ಯ ಮತ್ತು ಸಂತೋಷ ಮತ್ತು ಸಮೃದ್ಧಿ ಒದಗಿಸುತ್ತದೆ. ಅದೇ ರೀತಿ ಈ ದಿನದಂದು ಜಾತಕದಲ್ಲಿ ದುರ್ಬಲ ಶುಕ್ರನನ್ನು ಬಲಪಡಿಸಲು ಕೆಲವು ಕ್ರಮ ಸಹ ಉಲ್ಲೇಖಿಸಲಾಗಿದೆ. ಶುಕ್ರವಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯಿರಿ.
ಶುಕ್ರವಾರ ಈ ಸುಲಭ ಪರಿಹಾರ ಮಾಡಿ
- ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಶುಕ್ರವಾರದಂದು ನಿಯಮಿತವಾಗಿ ಪೂಜೆ ಮಾಡುವುದು ಪ್ರಯೋಜನಕಾರಿ. ಶುಕ್ರವಾರದಂದು ಉಪವಾಸ ಇಟ್ಟುಕೊಳ್ಳಿ, ಶುಕ್ರನ ಅಶುಭ ಪರಿಣಾಮಗಳನ್ನು ತಪ್ಪಿಸಲು ಈ ಕೆಲಸವು ವಿಶೇಷವಾಗಿ ಪ್ರಯೋಜನಕಾರಿ.
- ಶುಕ್ರವಾರದಂದು ನಿಯಮಿತವಾಗಿ ತಾಯಿ ಲಕ್ಷ್ಮಿದೇವಿಯ ಶ್ರೀ ಸೂಕ್ತವನ್ನು ಪಠಿಸಿ. ಇದರಿಂದ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆಂದು ಹೇಳಲಾಗುತ್ತದೆ. ಇದರೊಂದಿಗೆ ಶುಕ್ರ ಗ್ರಹದ ಸ್ಥಾನವೂ ಬಲವಾಗುತ್ತದೆ. ಕೆಲವು ಪ್ರಯೋಜನಕಾರಿ ಫಲಿತಾಂಶಗಳು ಕಂಡುಬರುತ್ತವೆ ಮತ್ತು ಮನೆಯಲ್ಲಿ ಹಣ ಹರಿವು ಹೆಚ್ಚಾಗುತ್ತದೆ.
ಇದನ್ನೂ ಓದಿ: Bathroom Vastu Tips: ಬಾತ್ ರೂಂ ವಾಸ್ತುವಿನಲ್ಲಿ ಅಡಗಿದೆ ನಿಮ್ಮ ಆರೋಗ್ಯ-ಆರ್ಥಿಕತೆಯ ಗುಟ್ಟು! ಎಂದಿಗೂ ಇಂಥಾ ತಪ್ಪು ಮಾಡದಿರಿ
- ಶುಕ್ರವಾರ ಬೆಳಗ್ಗೆ ಸ್ನಾನ ಮಾಡಿದ ನಂತರ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಇದಾದ ನಂತರ ತಾಯಿ ಲಕ್ಷ್ಮಿದೇವಿಗೆ ನಮಸ್ಕರಿಸಿ. ಅವರಿಗೆ ಇಷ್ಟವಾದ ಹೂಗಳನ್ನು ಅರ್ಪಿಸಿ ಪೂಜಿಸಿ.
- ಜಾತಕದಲ್ಲಿ ಶುಕ್ರ ಬಲಗೊಳ್ಳಲು ಶುಕ್ರವಾರದಂದು ದೇವಸ್ಥಾನದಲ್ಲಿ ಹಸುವಿನ ಶುದ್ಧ ತುಪ್ಪವನ್ನು ದಾನ ಮಾಡಿ. ಇದರಿಂದ ಶುಕ್ರನು ಶಕ್ತಿಶಾಲಿಯಾಗುತ್ತಾನೆ ಮತ್ತು ಸಂಪತ್ತನ್ನು ತರುತ್ತಾನೆ.
- ನೀವು ಉದ್ಯೋಗ, ವ್ಯಾಪಾರ ಮತ್ತು ಇತರ ಯಾವುದೇ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೆ, ಶುಕ್ರವಾರ ಕಪ್ಪು ಇರುವೆಗಳಿಗೆ ಸಕ್ಕರೆ ತಿನ್ನಿಸಿ. ಇದು ನಿಮ್ಮ ಅಡಚಣೆಯನ್ನು ನಿವಾರಿಸುತ್ತದೆ.
- ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ ಬಲಪಡಿಸಲು ಶುಕ್ರವಾರದಂದು ಮಲಗುವ ಕೋಣೆಯಲ್ಲಿ ಹಕ್ಕಿಯ ಚಿತ್ರವನ್ನು ಇಡುವುದು ಪ್ರಯೋಜನಕಾರಿ.
- ಜಾತಕದಲ್ಲಿ ಶುಕ್ರನನ್ನು ಶಾಂತಗೊಳಿಸಲು ಮತ್ತು ಲಕ್ಷ್ಮಿದೇವಿಯನ್ನು ಮೆಚ್ಚಿಸಲು, ಶುಕ್ರವಾರದಂದು ಬಿಳಿ ಮತ್ತು ಗುಲಾಬಿ ಬಣ್ಣದ ಬಟ್ಟೆಗಳನ್ನು ಮಾತ್ರ ಧರಿಸಿ. ಸಾಧ್ಯವಾದರೆ ಈ ಬಣ್ಣದ ಕರವಸ್ತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.
- ಮಹಿಳೆಯರು ಮತ್ತು ಯುವತಿಯರನ್ನು ಗೌರವಿಸುವುದರಿಂದ ಶುಕ್ರನ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಮತ್ತು ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲಾಗುತ್ತದೆ. ಸಂಪತ್ತು ಮತ್ತು ಸಮೃದ್ಧಿಯ ಅಂಶವಾದ ಶುಕ್ರವು ಎಲ್ಲಾ ರೀತಿಯ ಸಂತೋಷವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಈ 3 ಗ್ರಹಗಳ ಮೈತ್ರಿಯಿಂದ ದೇಶದಲ್ಲಿ ಹಿಂದೆಂದೂ ಕಂಡಿರದಷ್ಟು ಅಪಾಯ ಎದುರಾಗಲಿದೆ: ಈ ಜನರ ಪ್ರಾಣಕ್ಕೂ ಇದೆ ಕುತ್ತು!
- ಶುಕ್ರವಾರದಂದು ತಾಯಿ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಕಮಲದ ಹೂವು, ಶಂಖ, ಕೌರಿ, ಕಮಲದ ಗಟ್ಟ ಅಥವಾ ಹೂಮಾಲೆ, ಮಖಾನ ಅಥವಾ ಬಟಾಶೆ ಇತ್ಯಾದಿಗಳನ್ನು ಅರ್ಪಿಸುವುದು ಲಾಭದಾಯಕ.
- ಈ ದಿನ ತಾಯಿ ಲಕ್ಷ್ಮೀದೇವಿ ಸಮೇತ ವಿಷ್ಣುವನ್ನು ಪೂಜಿಸಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ. ಅಷ್ಟೇ ಅಲ್ಲ ಹಣದ ಆಗಮನಕ್ಕೆ ಹೊಸ ದಾರಿಗಳು ತೆರೆದುಕೊಳ್ಳುತ್ತವೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.