Gajkesari Yog In Pisces: ಜೋತಿಷ್ಯ ಶಾಸ್ತ್ರದ ಪ್ರಕಾರ ನಿತ್ಯ ಗ್ರಹ ಹಾಗೂ ನಕ್ಷತ್ರಗಳ ನಡೆ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತದೆ. ಈ ಬಾರಿ ಹಿಂದೂ ಪಂಚಾಂಗದ ಪ್ರಕಾರ ಆಗಸ್ಟ್ 15 ರಂದು ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಆಗಸ್ಟ್ 15ರಂದು ಸೋಮವಾರ ಮೀನ ರಾಶಿಯಲ್ಲಿ ಗಜಕೆಸರಿ ಯೋಗ ನಿರ್ಮಾಣಗೊಳ್ಳುತ್ತಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ಗಜಕೆಸರಿ ಯೋಗವನ್ನು ಅತ್ಯಂತ ಶುಭ ಯೋಗವೆಂದು ಪರಿಗಣಿಸಲಾಗುತ್ತದೆ. ಅಂದು ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ತಿ ತಿಥಿ ಕೂಡ ಇದೆ. ಸಾಮಾನ್ಯವಾಗಿ ಚತುರ್ಥಿಯ ತಿಥಿ ಶ್ರೀಗಣೇಶನಿಗೆ ಸಮರ್ಪಿತವಾಗಿದೆ.

COMMERCIAL BREAK
SCROLL TO CONTINUE READING

ಈ ಬಾರಿ ಸಂಕಷ್ಟ ಚತುರ್ಥಿ ಆಗಸ್ಟ್ 15ರಂದು ಬರುತ್ತಿದೆ. ಇದರ ಜೊತೆಗೆ ಮೀನ ರಾಶಿಯಲ್ಲಿ ಅತಿಶುಭ ಯೋಗ ನಿರ್ಮಾಣಗೊಳ್ಳುತ್ತಿದೆ. ಧಾರ್ಮಿಕ ದೃಷ್ಟಿಕೋನದಿಂದ ಆಗಸ್ಟ್ 15ರ ದಿನ ತುಂಬಾ ವಿಶೇಷವಾಗಿದೆ. ಪಂಚಾಂಗದ ಪ್ರಕಾರ ಈ ದಿನ ಏಕೆ ವಿಶೇಷವಾಗಿದೆ ಹಾಗೂ ಗಜಕೇಸರಿಯೋಗದ ಮಹತ್ವ ಮತ್ತು ಲಾಭಗಳೇನು  ತಿಳಿದುಕೊಳ್ಳೋಣ ಬನ್ನಿ,

ಈ ಶುಭಯೋಗದಲ್ಲಿ ಸಂಕಷ್ಟ ಚತುರ್ಥಿ ಆಚರಿಸಲಾಗುವುದು
ಶ್ರಾವಣ ಮಾಸದ ಕೃಷ್ಣಪಕ್ಷದ ಚತುರ್ಥಿ ತಿಥಿ ಆಗಸ್ಟ್ 15 ರಂದು ಬೀಳುತ್ತಿದೆ. ಈ ದಿನ ಶ್ರೀ ಗಣೇಶನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಜನರು ಪೂಜೆ-ಪುನಸ್ಕಾರ ಹಾಗೂ ವ್ರತ ಇತ್ಯಾದಿಗಳನ್ನು ಕೈಗೊಳ್ಳುತ್ತಾರೆ. ಪಂಚಾಂಗದ ಪ್ರಕಾರ ಈ ದಿನ ಧೃತ ಯೋಗ ರಾತ್ರಿ 11:22 ರವರೆಗೆ ಇರಲಿದೆ.


ಈ ರಾಶಿಯ ಜನರಿಗೆ ಲಾಭಕಾರಿ
ಜೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 15ರಂದು ಅಂದರೆ ಸೋಮವಾರದ ದಿನ ಮೀನ ರಾಶಿಯ ಜಾತಕದವರಿಗೆ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ಮೀನ ರಾಶಿಯ ಜನರಿಗೆ ವಿಶೇಷ ಫಲಗಳು ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಪ್ರಸ್ತುತ ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿ ವಿರಾಜಮಾನನಾಗಿದ್ದಾನೆ. ಆಗಸ್ಟ್ 15ರಂದು ಮೀನ ರಾಶಿಯಲ್ಲಿ ಚಂದ್ರನ ಗೋಚರದಿಂದ ಈ ರಾಶಿಯಲ್ಲಿ ಗಜಕೇಸರಿ ಯೋಗ ನಿರ್ಮಾಣಗೊಳ್ಳುತ್ತಿದೆ. ದೇವಗುರು ಬೃಹಸ್ಪತಿ ಹಾಗೂ ಚಂದ್ರನ ಸಂಯೋಜನೆ ಗಜಕೇಸರಿ ಯೋಗವನ್ನು ನಿರ್ಮಿಸುತ್ತದೆ ಮತ್ತು ಇದನ್ನು ಜೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶುಭ ಎಂದು ಭಾವಿಸಲಾಗುತ್ತದೆ. 


ಗಜಕೆಸರಿ ಯೋಗದ ಮಹತ್ವ
ಧಾರ್ಮಿಕ ಗ್ರಂಥಗಳಲ್ಲಿ ಕೆಲ ಅತ್ಯಂತ ಶುಭ ಯೋಗಗಳ ಕುರಿತು ವರ್ಣಿಸಲಾಗಿದೆ. ಅವುಗಳಲ್ಲಿ ಗಜಕೇಸರಿ ಯೋಗ ಕೂಡ ಶಾಮೀಲಾಗಿದೆ. ಗಜ ಇದರ ಅರ್ಥ ಆನೆ ಮತ್ತು ಕೇಸರಿಯ ಅರ್ಥ ಸ್ವರ್ಣ ಎಂದಾಗುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಆನೆ ಎಂದರೆ ಶಕ್ತಿಯ ಸಂಕೇತ ಹಾಗೂ ಸ್ವರ್ಣ ಸಮೃದ್ಧಿಯ ಸಂಕೇತ ಎಂದಾಗುತ್ತದೆ. ಕುಂಡಲಿಯಲ್ಲಿ ಈ ಯೋಗ ನಿರ್ಮಾಣಗೊಂಡಾಗ ಶಕ್ತಿ ಮತ್ತು ಸಮೃದ್ಧಿಯಲ್ಲಿ ಹೆಚ್ಚಳವಾಗುತ್ತದೆ. 


ಇದನ್ನೂ ಓದಿ-Night Vastu Tips: ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ಮಲಗುವ ಮುನ್ನ ಈ ಸಣ್ಣ ಉಪಾಯ ಅನುಸರಿಸಿ


ಗಣಪತಿಯ ಆಶೀರ್ವಾದ ಲಭಿಸುತ್ತದೆ
ಆಗಸ್ಟ್ 15ರಂದು ಚಂದ್ರ ಹಾಗೂ ದೇವಗುರು ಒಟ್ಟಿಗೆ ಬರುವುದರಿಂದ ಗಜಕೇಸರಿ ಯೋಗ ನಿರ್ಮಾಣಗೊಳ್ಳುತ್ತದೆ. ಇದಲ್ಲದೆ ಆಗಸ್ಟ್ 15ರಂದು ಸಂಕಷ್ಟ ಚತುರ್ಥಿ ಕೂಡ ಇದೆ. ಇದರಿಂದ ಶ್ರೀ ಗಜಾನನನ ಆಶೀರ್ವಾದ ಕೂಡ ಲಭಿಸುತ್ತದೆ. ಶ್ರೀ ಏಕದಂತನನ್ನು ಬುದ್ಧಿ ಹಾಗೂ ಸಮೃದ್ಧಿಯ ಪ್ರತೀಕ ಎಂದೂ ಕೂಡ ಭಾವಿಸಲಾಗುತ್ತದೆ. ಏಕಕಾಲಕ್ಕೆ ಈ ದಿನ ಹಲವು ಕಾಕತಾಳೀಯಗಳು ನಿರ್ಮಾಣಗೊಳ್ಳುವ ಕಾರಣ ಈ ದಿನದ ಧಾರ್ಮಿಕ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ. 


ಇದನ್ನೂ ಓದಿ-Kapoor Remedies: ಕರ್ಪೂರದ ಈ ಉಪಾಯ ಅನುಸರಿಸುವುದರಿಂದ ಆರ್ಥಿಕ ಮುಗ್ಗಟ್ಟು ದೂರಾಗುತ್ತದೆ, ಪಿತೃದೋಷದಿಂದ ಕೂಡ ಮುಕ್ತಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.