Garuda Purana Life Lessons: ಯಾವುದೇ ಓರ್ವ ವ್ಯಕ್ತಿ ತನ್ನ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳಿಗೆ ತಕ್ಕಂತೆ ಫಲವನ್ನು ಪಡೆಯುತ್ತಾನೆ. ಇದನ್ನು ಗರುಡ ಪುರಾಣದಲ್ಲಿ (Garud Puran Path) ಉಲ್ಲೇಖಿಸಲಾಗಿದೆ. ಗರುಡ ಪುರಾಣದಲ್ಲಿ ಉಲ್ಲೇಖಿಸಲಾದ 19 ಸಾವಿರಕ್ಕೂ ಹೆಚ್ಚು ಶ್ಲೋಕಗಳು ಪುಣ್ಯ ಮತ್ತು ಪಾಪ ಕಾರ್ಯಗಳ ಬಗ್ಗೆ ಹೇಳುತ್ತವೆ. ವಾಸ್ತವದಲ್ಲಿ ಒಮ್ಮೆ, ಮಹರ್ಷಿ ಕಶ್ಯಪ್ ಅವರ ಮಗ ಪಕ್ಷಿರಾಜ್ ಗರುಡನು (Garud Path) ಶ್ರೀ ವಿಷ್ಣುವನ್ನು ಜೀವಿಗಳ ಮರಣದ ನಂತರದ ಪರಿಸ್ಥಿತಿಗಳ ಬಗ್ಗೆ ಪ್ರಶ್ನಿಸುತ್ತಾನೆ. ಗರುಡನ ಕುತೂಹಲವನ್ನು ಪರಿಹರಿಸಲು ವಿಷ್ಣು ಏನು ಹೇಳಿದ್ದಾನೋ ಅದನ್ನು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಗರುಡ ಪುರಾಣದಲ್ಲಿ (Garud Purana Teachings) ಮಹಿಳೆಯರು ಎರಡು ಪ್ರಮುಖ ಕೆಲಸಗಳನ್ನು ಮಾಡುವಾಗ ಪುರುಷರು ನೋಡಬಾರದು ಎಂದು ಹೇಳಲಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Dream Interpretation: ನಿಮ್ಮ ಕನಸಿನಲ್ಲಿ ಪೂರ್ವಜರು ಈ ರೂಪದಲ್ಲಿ ಕಾಣಿಸಿಕೊಂಡರೆ ಏನರ್ಥ..?


1. ಸ್ನಾನ ಮಾಡುವಾಗ
ಗರುಡ ಪುರಾಣದ (Teachings Of Garud Puran) ಪ್ರಕಾರ, ಮಹಿಳೆಯು ಬಟ್ಟೆ ಇಲ್ಲದೆ ಸ್ನಾನ ಮಾಡುವಾಗ, ಪುರುಷನು ಅವಳನ್ನು ನೋಡಬಾರದು. ಈ ಪರಿಸ್ಥಿತಿಯಲ್ಲಿ, ಒಬ್ಬ ಪುರುಷನು ಮಹಿಳೆಯನ್ನು ನೋಡಿದರೆ, ಅವನು ಪಾಪದ ಬಾಗಿಯಾಗುತ್ತಾನೆ. ಇದರಿಂದ ಅವನ ಎಲ್ಲಾ ಪುಣ್ಯಕರ್ಮಗಳು ನಾಶವಾಗುತ್ತವೆ. ಅಷ್ಟೇ ಅಲ್ಲ, ಇಂತಹ ಪುರುಷರಿಗೆ ನರಕದಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದೂ ಕೂಡ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ-Makar Sankranti 2022: Big Decision - ಕೊರೊನಾ ಪ್ರಕೋಪದ ಹಿನ್ನೆಲೆ ಈ ಬಾರಿ ಹರಿದ್ವಾರದಲ್ಲಿ ನಡೆಯಲ್ಲ ಗಂಗಾ ಸ್ನಾನ


2. ಹಾಲುಣಿಸುವ ಸಮಯದಲ್ಲಿ
ಮಹಿಳೆಯರು ತಮ್ಮ ಶಿಶುಗಳಿಗೆ ಎದೆಹಾಲಿನ ಮೂಲಕ ಆಹಾರವನ್ನು ನೀಡುತ್ತಾರೆ. ಆಹಾರ ತೆಗೆದುಕೊಳ್ಳುವಾಗ, ಮಗು ಮುಗ್ಧ ಮತ್ತು ಅಭೋದವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹಾಲುಣಿಸುವಾಗ ಮಹಿಳೆಯರ ಸ್ತನವನ್ನು ಎಂದಿಗೂ ನೋಡಬಾರದು. ಒಬ್ಬ ಮನುಷ್ಯನು ಗರುಡ ಪುರಾಣದ ಈ ನಿಯಮವನ್ನು ಉಲ್ಲಂಘಿಸಿ, ಕೆಟ್ಟ ಉದ್ದೇಶದಿಂದ ನೋಡಿದರೆ, ಅವನು ಮಹಾಪಾಪದಲ್ಲಿ ಭಾಗಿಯಾಗುತ್ತಾನೆ. ಇಂತಹ ಪಾಪಿಯು ಮರಣಾನಂತರ ನರಕದಲ್ಲಿ ತೀವ್ರವಾದ ಚಿತ್ರಹಿಂಸೆಯನ್ನು ಅನುಭವಿಸಬೇಕಾಗುತ್ತದೆ.


ಇದನ್ನೂ ಓದಿ-Numerology: ಶನಿಯೊಂದಿಗೆ ನೇರ ಸಂಬಂಧವನ್ನು ಹೊಂದಿದ್ದಾರೆ ಈ ದಿನಾಂಕಗಳಲ್ಲಿ ಜನಿಸಿದ ಜನ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ )


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.