Makar Sankranti 2022: Big Decision - ಕೊರೊನಾ ಪ್ರಕೋಪದ ಹಿನ್ನೆಲೆ ಈ ಬಾರಿ ಹರಿದ್ವಾರದಲ್ಲಿ ನಡೆಯಲ್ಲ ಗಂಗಾ ಸ್ನಾನ

Makar Sankranti 2022: ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದಂದು ಹರಿದ್ವಾರದಲ್ಲಿ (Haridwar) ಭಕ್ತರು ಗಂಗಾಸ್ನಾನ ಮಾಡುವಂತಿಲ್ಲ. ಹೆಚ್ಚಾಗುತ್ತಿರುವ ಕೊರೊನಾ ಮತ್ತು ಒಮಿಕ್ರೋನ್ ಪ್ರಕರಣಗಳ ಹಿನ್ನೆಲೆ ಜಿಲ್ಲಾಡಳಿತ ಗಂಗಾ ಸ್ನಾನದ ಮೇಲೆ ನಿಷೇಧ ವಿಧಿಸಿದೆ.

Written by - Nitin Tabib | Last Updated : Jan 11, 2022, 02:21 PM IST
  • ಮಕರ ಸಂಕ್ರಾಂತಿ ಅಂಗವಾಗಿ ಮಹತ್ವದ ನಿರ್ಧಾರ ಕೈಗೊಂಡ ಜಿಲ್ಲಾದಲಿದೆ.
  • ಗಂಗಾ ಘಾಟ್ ಗಳಲ್ಲಿ ಗಂಗಾ ಸ್ಥಾನದ ಮೇಲೆ ನಿಷೇಧ
  • ಹರಿದ್ವಾರ್, ಹೃಷಿಕೇಶ್ ಗಳಲ್ಲಿ ಸ್ಥಳಿಯರಿಗೂ ಕೂಡ ಸ್ನಾನಕ್ಕೆ ನಿಷೇಧ.
Makar Sankranti 2022: Big Decision - ಕೊರೊನಾ ಪ್ರಕೋಪದ ಹಿನ್ನೆಲೆ ಈ ಬಾರಿ ಹರಿದ್ವಾರದಲ್ಲಿ ನಡೆಯಲ್ಲ ಗಂಗಾ ಸ್ನಾನ title=
Makar Sankranti 2022 (Representational Image)

Makar Sankranti : ಕೊರೊನಾ ಬಿಕ್ಕಟ್ಟಿನ (Covid-19 Crisis) ಮಧ್ಯೆ ದೇಶದಲ್ಲಿ ಇದೇ 14ರಂದು ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಈ ದಿನದಂದು ಗಂಗಾನದಿಯಲ್ಲಿ (Ganges) ಸ್ನಾನ ಮಾಡುವುದು ಬಹಳ ವಾಡಿಕೆ ಇದೆ. ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಲು ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಹರಿದ್ವಾರಕ್ಕೆ ಆಗಮಿಸುತ್ತಾರೆ. ಆದರೆ ಈ ಬಾರಿ ಕರೋನಾದ ಮೂರನೇ ಅಲೆಯು ವಿನಾಶವನ್ನುಂಟು ಮಾಡುತ್ತಿದೆ. ಯಾತ್ರಾ ಸ್ಥಳವಾದ ಹರಿದ್ವಾರದಲ್ಲಿ ಕರೋನಾ (Coronavirus) ಮತ್ತು ಒಮಿಕ್ರಾನ್ (Omicron) ಹೊಸ ರೂಪಾಂತರಿಯ ಅಪಾಯ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಜನವರಿ 14 ರಂದು, ಮಕರ ಸಂಕ್ರಾಂತಿ ಹಬ್ಬದಂದು ಹರಿದ್ವಾರದಲ್ಲಿ ಗಂಗಾ ಸ್ನಾನವನ್ನು ನಿಷೇಧಿಸಲಾಗಿದೆ. 

ಇದನ್ನೂ ಓದಿ-Arvind Kejriwal: ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ನಡುವೆ ದೆಹಲಿ ಸಿಎಂ ಮಹತ್ವದ ಘೋಷಣೆ

ಹರ್ ಕಿ ಪೌಡಿ ಪ್ರದೇಶದಲ್ಲಿ ಭಕ್ತರೊಂದಿಗೆ ಸ್ಥಳೀಯ ಜನರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ವಿನಯ್ ಶಂಕರ್ ಪಾಂಡೆ ಅವರು ಮಕರ ಸಂಕ್ರಾಂತಿ ಹಬ್ಬದಂದು ಗಂಗಾಸ್ನಾನವನ್ನು ನಿಷೇಧಿಸಿದ್ದಾರೆ. ಈ ಆದೇಶದೊಂದಿಗೆ ಹರ್ ಕಿ ಪೌಡಿ ಪ್ರದೇಶದಲ್ಲಿ ಹೊರಗಿನಿಂದ ಬರುವ ಭಕ್ತರು ಹಾಗೂ ಸ್ಥಳೀಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು (Uttarakhand) ಆದೇಶವನ್ನೂ ಹೊರಡಿಸಿದ್ದಾರೆ. ಇದರೊಂದಿಗೆ ಆದೇಶ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಹೇಳಲಾಗಿದೆ.

ಇದನ್ನೂ ಓದಿ-ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೆ Covid ದೃಢ, ICUಗೆ ದಾಖಲು

ಋಷಿಕೇಶದಲ್ಲಿ ಗಂಗಾ ಸ್ನಾನಕ್ಕೆ ನಿಷೇಧ
ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತದಿಂದ ಗಂಗಾ ಸ್ನಾನವನ್ನು  ನಿಷೇಧಿಸಲಾಗಿದೆ. ಹರಿದ್ವಾರದ ಜೊತೆಗೆ ಹೃಷಿಕೇಶ್ (Hrishikesh) ದ ಎಲ್ಲಾ ಘಾಟ್‌ಗಳಲ್ಲಿ ಮಕರ ಸಂಕ್ರಾಂತಿ ಹಬ್ಬದಂದು ಗಂಗಾ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಇಲ್ಲಿಯೂ ಮಕರ ಸಂಕ್ರಾಂತಿಯಂದು  ಭಕ್ತರು ಗಂಗಾಸ್ನಾನ ಮಾಡುವಂತಿಲ್ಲ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಸುವ್ಯವಸ್ಥೆ ಕಾಪಾಡುವುದು ದೊಡ್ಡ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕರ ಸಂಕ್ರಾಂತಿಯಂದು ಗಂಗಾಸ್ನಾನಕ್ಕೆ ಅವಕಾಶ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಘಾಟ್‌ಗಳಿಗೆ ಆಗಮಿಸುವ ನಿರೀಕ್ಷೆ ಇದ್ದು, ಕೊರೊನಾ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗಂಗಾಸ್ನಾನಕ್ಕೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ-Aadhaar card : ನಿಮ್ಮ ಆಧಾರ್ ಕಾರ್ಡ್ ಕಳೆದುಹೋಗಿದೆಯೇ? ಹಾಗಿದ್ರೆ, ಮತ್ತೆ ಪಡೆಯಲು ಹೀಗೆ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News