Reason Behind Getting Hell: ಸತ್ತರೂ ಬೆನ್ ಬಿಡಲ್ಲ ಈ ಮಹಾಪಾಪಗಳು, ಇವುಗಳಿಂದ ಪಾರಾಗಿ ಇಲ್ದಿದ್ರೆ ...?

Great Sins - ಕೆಲವು ಕೃತ್ಯಗಳು ಎಷ್ಟೊಂದು ಅಸಹ್ಯಕರವಾಗಿವೆ ಎಂದರೆ ಅವುಗಳನ್ನು ಧರ್ಮಶಾಸ್ತ್ರಗಳಲ್ಲಿ ಮಹಾಪಾಪ ಎಂದು ವರ್ಗೀಕರಿಸಲಾಗಿದೆ. ಈ ಕೆಲಸಗಳನ್ನು ಮಾಡುವ ಜನರು ತಮ್ಮ ಜೀವನದಲ್ಲಿ ಮಾತ್ರವಲ್ಲದೆ ಸಾವಿನ ನಂತರವೂ ಚಿತ್ರಹಿಂಸೆ ಮತ್ತು ಸಂಕಟವನ್ನು (Suffer After Death) ಅನುಭವಿಸುತ್ತಾರೆ.

Written by - Nitin Tabib | Last Updated : Dec 5, 2021, 02:52 PM IST
  • ಇವು ತುಂಬಾ ಹೇಯ ಕೃತ್ಯಗಳಾಗಿವೆ
  • ಈ ಮಹಾಪಾಪಗಳಿಂದ ಬಚಾವಾಗಿ.
  • ನರಕದಲ್ಲಿ ನರಕಯಾತನೆ ಅನುಭವಿಸಬೇಕಾಗುತ್ತದೆ.
Reason Behind Getting Hell: ಸತ್ತರೂ ಬೆನ್ ಬಿಡಲ್ಲ ಈ ಮಹಾಪಾಪಗಳು, ಇವುಗಳಿಂದ ಪಾರಾಗಿ ಇಲ್ದಿದ್ರೆ ...? title=
Garuda Purana Mahapaap (Representational Image)

ನವದೆಹಲಿ: Garuda Purana Mahapaap - ಒಳ್ಳೆಯ ಜೀವನ, ಸುಲಭ ಸಾವು ಮತ್ತು ನಂತರ ಸ್ವರ್ಗವನ್ನು ಪಡೆಯಲು ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಅದಕ್ಕಾಗಿಯೇ ಧರ್ಮ, ಜ್ಯೋತಿಷ್ಯ ಮತ್ತು ವಿಶೇಷವಾಗಿ ಗರುಡ ಪುರಾಣದಲ್ಲಿ, ವ್ಯಕ್ತಿಯ ಯಾವ ರೀತಿಯ ಕಾರ್ಯಗಳು ಅವನನ್ನು ನರಕಕ್ಕೆ (Narak) ಕರೆದೊಯ್ಯುತ್ತವೆ ಮತ್ತು ಯಾವ ಕಾರ್ಯಗಳು ಅವನನ್ನು ಸ್ವರ್ಗಕ್ಕೆ  ಕರೆದೊಯ್ಯುತ್ತವೆ (Soul Journey After Death) ಎಂಬ ಸಂಗತಿಯನ್ನು ವಿವರವಾಗಿ ಹೇಳಲಾಗಿದೆ. ಇದೇ ಕಾರಣಕ್ಕೆ ಗರುಡ ಪುರಾಣವನ್ನು ಮಹಾಪುರಾಣ ಎಂದು ಕರೆಯುತ್ತಾರೆ. ಏಕೆಂದರೆ ಇದು ಜೀವನ, ಮರಣ ಮತ್ತು ಸಾವಿನ ನಂತರದ ಆತ್ಮದ ಪ್ರಯಾಣದ ಬಗ್ಗೆಯೂ ಹೇಳುತ್ತದೆ. ಗರುಡ ಪುರಾಣದಲ್ಲಿ (Garuda Purana) ಮಹಾಪಾಪಗಳ ಸ್ಥಾನಮಾನ ಪಡೆದಿರುವ ಆ ಕಾರ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಸಾವಿನ ನಂತರ ಚಿತ್ರಹಿಂಸೆ ಅನುಭವಿಸಬೇಕಾಗುತ್ತದೆ
ಭ್ರೂಣಹತ್ಯೆ:
ಮಗುವನ್ನು ಗರ್ಭದಲ್ಲಿಯೇ ಕೊಲ್ಲುವುದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ. ಗರುಡ ಪುರಾಣದಲ್ಲಿ ಇದಕ್ಕೆ ಮಹಾಪಾಪದ ಸ್ಥಾನಮಾನ ನೀಡಲಾಗಿದೆ. ಇದನ್ನು ಮಾಡುವವರು ನರಕದಲ್ಲಿ ಯಮಯಾತನೆಯ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಅಪ್ಪಿತಪ್ಪಿಯೂ ಕೂಡ ಈ ತಪ್ಪು ಮಾಡಬೇಡಿ.

ಹೆಣ್ಣನ್ನು ಅವಮಾನಿಸುವುದು: ಸನಾತನ ಧರ್ಮದಲ್ಲಿ ಹೆಣ್ಣನ್ನು ಅವಮಾನಿಸುವುದನ್ನು ಅತ್ಯಂತ ಕೆಟ್ಟದಾಗಿ ಪರಿಗಣಿಸಲಾಗಿದೆ. ಆ ಮೇಲೆ ಅಸಹಾಯಕ, ವಿಧವೆ ಮಹಿಳೆಯನ್ನು ಅವಮಾನಿಸುವವರಿಗೆ ನರಕದಲ್ಲಿಯೂ ಸ್ಥಾನ ಸಿಗುವುದಿಲ್ಲ. ಅಂತಹ ಜನರ ಆತ್ಮವು ಅಲೆದಾಡುತ್ತದೆ ಮತ್ತು ಬಹಳಷ್ಟು ನರಳುತ್ತದೆ.

ಅಸಹಾಯಕರನ್ನು ಅವಮಾನಿಸುವುದು: ಯಾವುದೇ ಅಂಗವಿಕಲರನ್ನು, ವೃದ್ಧರನ್ನು ಅಥವಾ ಅಸಹಾಯಕರನ್ನು ಅವಮಾನಿಸುವುದು, ಗೇಲಿ ಮಾಡುವುದು ಎಂದರೆ ನರಕಕ್ಕೆ (Hell After Death) ಹೋಗುವ ವ್ಯವಸ್ಥೆ ಮಾಡುವುದು ಎಂದರ್ಥ. ಅಂಥವರು ನರಕದಲ್ಲಿ ಸಾಕಷ್ಟು ನರಳಬೇಕಾಗುತ್ತದೆ.

ಧಾರ್ಮಿಕ ಗ್ರಂಥಕ್ಕೆ ಅವಮಾನ: ಗರುಡ ಪುರಾಣದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಧರ್ಮವನ್ನು ಅನುಸರಿಸಬೇಕು ಎಂದು ಹೇಳಲಾಗಿದೆ. ಆದರೆ ಅವರು ಯಾವುದೇ ಧರ್ಮ ಅಥವಾ ಇತರೆ ಧರ್ಮವನ್ನು ಅಪ್ಪಿತಪ್ಪಿಯೂ ಕೂಡ ಅವಮಾನಿಸಬಾರದು. ಹೀಗೆ ಮಾಡಿದರೆ ಸಾಕು ಅವರಿಗೆ ನರಕದಲ್ಲಿ ಸ್ಥಾನ ಸಿಗುತ್ತದೆ.

ಇದನ್ನೂ ಓದಿ-ನಿಮ್ಮ ಬಳಿ ಯಾರಾದರೂ ಸುಳ್ಳು ಹೇಳುತ್ತಿದ್ದಾರೆಯೇ? ಈ ಮಾರ್ಗಗಳಿಂದ ಈಗಲೇ ಪತ್ತೆಹಚ್ಚಿ.!

ಪರಸ್ತ್ರಿಯನ್ನು ಕೆಟ್ಟ ಕಣ್ಣಿನಿಂದ ನೋಡುವುದು: ಪರಸ್ತ್ರಿಯನ್ನು ಕೆಟ್ಟ ಕಣ್ಣಿನಿಂದ ನೋಡುವುದು ಮಹಾಪಾಪ, ಅವಳನ್ನು ಬಲವಂತಪಡಿಸುವುದು, ಇದು ಆ ಮಹಿಳೆಗೆ ಮಾಡಿದ ಅವಮಾನ. ಇದನ್ನು ಮಾಡುವ ಜನರು ನರಕದಲ್ಲಿ ಸಾಕಷ್ಟು ಚಿತ್ರಹಿಂಸೆಗೆ ಒಳಗಾಗುತ್ತಾರೆ.

ಇದನ್ನೂ ಓದಿ-ಗ್ರಹಣ 2022: ಯಾವಾಗ ಗೋಚರಿಸುತ್ತದೆ ಮುಂದಿನ ಗ್ರಹಣ?, ಯಾವ ರಾಶಿಗಳಿಗೆ ಹೆಚ್ಚು ಪರಿಣಾಮ!

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Personality by Zodiac Sign: ಈ 4 ರಾಶಿಯ ಹುಡುಗಿಯರು ಹುಡುಗರಿಗೆ ಅತ್ಯಂತ ಆಕರ್ಷಣೆಯಾಗಿರುತ್ತಾರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News