Hanuman Janmotsava 2023: ಸಾಮಾನ್ಯವಾಗಿ ಹನುಮನನ್ನು ಶಿವನ ರೌದ್ರಾವತಾರ ಎಂದು ಭಾವಿಸಲಾಗುತ್ತದೆ. ಶನಿವಾರ ಹಾಗೂ ಮಂಗಳವಾರ ಶ್ರೀ ಆಂಜನೇಯನಿಗೆ ಸಮರ್ಪಿತವಾಗಿವೆ. ಇದಲ್ಲದೆ ಹನುಮ ಜಯಂತಿಯ ದಿನ ವಿಧಿವಿಧಾನದ ಮೂಲಕ ಪೂಜಿಸುವುದರಿಂದ ಹನುಮಾನ ವಿಶೇಷ ಕೃಪೆಗೆ ಪಾತ್ರರಾಗಬಹುದು. ಯಾವ ವ್ಯಕ್ತಿಯ ಮೇಲೆ ಹನುಮಾನ ವಿಶೇಷ ಕೃಪೆ ಇರುತ್ತದೆಯೋ ಆ ವ್ಯಕ್ತಿಗೆ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಎದುರಾಗುವುದಿಲ್ಲ. ಹನುಮನ ಕೃಪೆಯಿಂದ ಅವರ ಜೀವನದಲ್ಲಿ ಎಲ್ಲಾ ರೀತಿಯ ಸಂಕಷ್ಟಗಳು ದೂರಾಗುತ್ತವೆ ಹಾಗೂ ಜೀವನದಲ್ಲಿ ಖುಷಿಗಳ ಆಗಮನವಾಗುತ್ತದೆ. ಹಾಗೆ ನೋಡಿದರೆ ಹನುಮ ತನ್ನ ಎಲ್ಲಾ ಭಕ್ತಾದಿಗಳ ಮೇಲೆ ತನ್ನ ಕೃಪಾವೃಷ್ಟಿ ಬೀರುತ್ತಾನೆ ಎನ್ನಲಾಗುತ್ತದೆ. ಆದರೆ, ಕೆಲ ರಾಶಿಗಳನ್ನು ಹನುಮನ ನೆಚ್ಚಿನ ರಾಶಿಗಳು ಎನ್ನಲಾಗುತ್ತದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಮೇಷ ರಾಶಿ: ಮೇಷ ರಾಶಿಗೆ ಮಂಗಳ ಅಧಿಪತಿ. ಈ ರಾಶಿಯ ಜನರ ಮೇಲೆ ಹನುಮಾನ ವಿಶೇಷ ಕೃಪೆ ಇರುತ್ತದೆ. ಹನುಮನ ಪೂಜೆಯಿಂದ ಮಂಗಳ ದೋಷ ನಿವಾರಣೆಯಾಗುತ್ತದೆ ಮತ್ತು ಆಂಜನೇಯನ ಕೃಪೆಯಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಲಭಿಸಿ, ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಈ ಜನರಿಗೆ ತುಂಬಾ ಕಡಿಮೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಮೇಷ ರಾಶಿಯವರಿಗೆ ಅವರ ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿಯಾಗುತ್ತದೆ.

ಸಿಂಹ ರಾಶಿ:   ಈ ರಾಶಿಯ ಜಾತಕದವರ ಮೇಲೂ ಕೂಡ ಆಂಜನೇಯನ ವಿಶೇಷ ಕೃಪೆ ಇರುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಗೆ ಸೂರ್ಯದೇವ ಅಧಿಪತಿ, ಸೂರ್ಯ ದೇವನ ಹಾಗೂ ಹನುಮನ ನಡುವೆ ಗುರು-ಶಿಷ್ಯರ ಸಂಬಂಧವಿದೆ.  ಹೀಗಾಗಿ ಈ ರಾಶಿಗೆ ಸೇರಿದ ಜಾತಕದವರ ಮೇಲೆ ಸೂರ್ಯನ ವಿಶೇಷ ಕೃಪೆ ಇರುತ್ತದೆ. ಇದರಿಂದ ಈ ಜನರ ಕುಟುಂಬದಲ್ಲಿ ಯಾವಾಗಲೂ ಸುಖ-ಸಮೃದ್ಧಿ ಇರುತ್ತದೆ. ಅತ್ಯಂತ ಕಠಿಣ ಪರಿಸ್ಥಿತಿಯನ್ನು ಕೂಡ ಈ ರಾಶಿಯ ಜನರು ಸುಲಭವಾಗಿ ಜಯಿಸುತ್ತಾರೆ. 

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಗೂ ಕೂಡ ಮಂಗಳ ಅಧಿಪತಿ. ಹೀಗಿರುವಾಗ ಈ ರಾಶಿಯ ಜನರ ಮೇಲೂ ಕೂಡ ಆಂಜನೇಯನ ವಿಶೇಷ ಕೃಪೆ ಇರುತ್ತದೆ. ಇವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಲಭಿಸುತ್ತದೆ. ಜೊತೆಗೆ ಸುಖ ಸಮೃದ್ಧಿ ಕೂಡ ಪ್ರಾಪ್ತಿಯಾಗುತ್ತದೆ. ನೀವು ವಿಧಿ-ವಿಧಾನಗಳ ಮೂಲಕ ಹನುಮನನ್ನು  ಪೂಜೆ ಮಾಡುವುದರಿಂದ ಯಶಸ್ಸಿನ ಜೊತೆಗೆ ಧನ-ಧಾನ್ಯ ಪ್ರಾಪ್ತಿಗಾಗುತ್ತದೆ.


ಇದನ್ನೂ ಓದಿ-Hanuman Jayanti 2023: ಹನುಮ ಜಯಂತಿಯ ದಿನ ನಿರ್ಮಾಣಗೊಳ್ಳುತ್ತಿದೆ ವಿಶೇಷ ಯೋಗ, 4 ರಾಶಿಗಳಿಗೆ ಅಪಾರ ಧನಲಾಭ ಯೋಗ!

ಕುಂಭ ರಾಶಿ: ಈ ರಾಶಿಗೆ ಶನಿ ದೇವ ಅಧಿಪತಿ. ಹೇಗಿರುವಾಗ ಈ ರಾಶಿಯ ಜಾತಕದವರ ಮೇಲೂ ಕೂಡ ಹನುಮ ಅತಿ ಪ್ರಸನ್ನನಾಗಿರುತ್ತಾನೆ. ನೀವು ನೌಕರಿ ಅಥವಾ ಬಿಸ್ನೆಸ್ ಆರಂಭಿಸುವ ಮೂಲಕ ಹನುಮನನ್ನು ಪೂಜಿಸಿ, ಆರಾಧಿಸಿದರೆ ನಿಮಗೆ ಅಪಾರ ಯಶಸ್ಸು ಲಭಿಸುತ್ತದೆ. 


ಇದನ್ನೂ ಓದಿ-Lakshmi Narayana Yog: ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು  ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.