Hanuman Janmotsav 2023: ಹನುಮಾನ್ ಜನ್ಮೋತ್ಸವದ ದಿನ ಹನುಮನಿಗೆ ವಿಶೇಷ ಪೂಜೆ ಮಾಡುವ ಪರಿಪಾಠ ಯುಗಯುಗಾಂತರದಿಂದ ನಡೆದುಕೊಂಡು ಬಂದಿದೆ. ಈ ರೀತಿ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. ಈ ದಿನ ವಿಭಿನ್ನ ಪ್ರಯೋಗಗಳ ಮೂಲಕ ಗ್ರಹಗಳಿಗೆ ಶಾಂತಿಯನ್ನು ಸಹ ಮಾಡಿಸಲಾಗುತ್ತದೆ. ಈ ಬಾರಿಯ ಹನುಮಾನ್ ಜಯಂತಿ ಯಾವ ರಾಶಿಗಳ ಪಾಲಿಗೆ ಶುಭವಾಗಿರಲಿದೆ ತಿಳಿದುಕೊಳ್ಳೋಣ ಬನ್ನಿ,
Hanuman Janmotsav 2023 Lucky Zodiac Signs: ಪ್ರತಿ ವರ್ಷದ ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯಂದು ದೇಶಾದ್ಯಂತ ಹನುಮಾನ ಜನ್ಮೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಈ ಬಾರಿ ಹನುಮ ಜಯಂತಿಯನ್ನು ಏಪ್ರಿಲ್ 6, 2023 ರಂದು ಅಂದರೆ ಗುರುವಾರದ ದಿನ ಆಚರಿಸಲಾಗುತ್ತಿದೆ. ಶ್ರೀ ಆಂಜನೇಯನ ಜನುಮ ದಿನವನ್ನು ಹನುಮಾನ್ ಜನ್ಮೋತ್ಸವವಾಗಿ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಹನುಮ ಶ್ರೀರಾಮನ ಪರಮ ಭಕ್ತ ಎಂದು ಭಾವಿಸಲಾಗುತ್ತದೆ, ಇದಕ್ಕೆ ಪೂರಕ ಎಂಬಂತೆ ಹಲವು ಕಥೆಗಳು ಕೂಡ ಇಂದಿಗೂ ಕೂಡ ಪ್ರಚಲಿತದಲ್ಲಿವೆ.
ಇದನ್ನೂ ಓದಿ-ಒಂದು ವರ್ಷದ ಬಳಿಕ ತನ್ನ ಉಚ್ಛ ರಾಶಿಯನ್ನು ಪ್ರವೇಶಿಸಲಿರುವ ಸೂರ್ಯ, ಈ ಜನರಿಗೆ ಭಾರಿ ಧನಲಾಭ!
ಶ್ರೀಆಂಜನೇಯನ ಭಕ್ತರಲ್ಲಿ ಹನುಮ ಜಯಂತಿಗೆ ಸಂಬಂಧಿಸಿದಂತೆ ವಿಶೇಷ ಉತ್ಸಾಹವಿರುತ್ತದೆ. ಈ ಪಾವನ ದಿನದಂದು ಹನುಮಾನ ಚಾಲಿಸಾ ಹಾಗೂ ಸುಂದರ ಕಾಂಡ ಪಠಿಸುತ್ತ ಕುಟುಂಬದ ಸದಸ್ಯರ ಜೊತೆಗೂಡಿ ಹನುಮನನ್ನು ಆರಾಧಿಸಬೇಕು ಎನ್ನಲಾಗುತ್ತದೆ. ಇದರಿಂದ ಶ್ರೀ ಆಂಜನೇಯ ಎಲ್ಲಾ ಕೆಟ್ಟ ಶಕ್ತಿಗಳನ್ನು ಸರ್ವನಾಶ ಮಾಡಿ ಪ್ರತಿಯೊಂದು ಕೆಲಸದಲ್ಲಿ ಮುಂದುವರೆಯಲು ಸಹಾಯ ಮಾಡುತ್ತಾನೆ ಎನ್ನಲಾಗುತ್ತದೆ. ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದೆ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿಯ ಹನುಮ ಜಯಂತಿಯ ದಿನ ಶುಕ್ರ ರಾಶಿ ಪರಿವರ್ತನೆ ಕೂಡ ಇದೆ. ಇನ್ನೊಂದೆಡೆ ಗುರು-ಶುಕ್ರರ ಮೈತ್ರಿ ಲಕ್ಷ್ಮಿನಾರಾಯಣ ಯೋಗ ಕೂಡ ರಚನೆಯಾಗಲಿದೆ. ಹೀಗಾಗಿ ಈ ಬಾರಿಯ ಹನುಮ ಜಯಂತಿ ತುಂಬಾ ಮಹತ್ವಪಡೆದುಕೊಂಡಿದೆ. ಹಾಗಾದರೆ ಬನ್ನಿ ಈ ವಿಶೇಷ ಕಾಕತಾಳೀಯದ ಕಾರಣ ನಿರ್ಮಾಣಗೊಳ್ಳುತ್ತಿರುವ ಯೋಗದಿಂದ ಯಾವ ರಾಶಿಗಳ ಜನರಿಗೆ ಅತ್ಯಂತ ಲಾಭಕಾರಿ ಹಾಗೂ ಶುಭ ಯೋಗ ಕಾದಿದೆ ತಿಳಿದುಕೊಳ್ಳೋಣ,
ಇದನ್ನೂ ಓದಿ-ಮೂರು ಶತಮಾನಗಳ ಬಳಿಕ 'ಪವರ್ಪುಲ್ ನವಪಂಚಮ ರಾಜ ಯೋಗ' ನಿರ್ಮಾಣ, ಚಿನ್ನದಂತೆ ಹೊಳೆಯಲಿದೆ 4 ರಾಶಿಗಳ ಜನರ ಭಾಗ್ಯ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಮೇಷ ರಾಶಿ: ಈ ಬಾರಿಯ ಹನುಮಾನ್ ಜನ್ಮೋತ್ಸವದ ದಿನ ಮೇಷ ರಾಶಿಯ ಜನರಿಗೆ ಆರ್ಥಿಕ ಸಂಕಷ್ಟದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ನಿಮಗೆ ಆಕಸ್ಮಿಕ ಧನಲಾಭದ ಯೋಗವಿದೆ. ವ್ಯಾಪಾರ ಹಾಗೂ ಕಾರ್ಯಕ್ಷೇತ್ರದ ದೃಷ್ಟಿಯಿಂದಲೂ ಕೂಡ ಈ ತಿಂಗಳು ನಿಮಗೆ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಪರಿಶ್ರಮದ ಸಕಾರಾತ್ಮಕ ಫಲಿತಾಂಶಗಳು ನಿಮಗೆ ಪ್ರಾಪ್ತಿಯಾಗಲಿವೆ.
2. ಮಿಥುನ ರಾಶಿ: ಮಿಥುನ ಜಾತಕದವರ ಪಾಲಿಗೆ ಹನುಮಾನ ಜನ್ಮೋತ್ಸವ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಹನುಮಂತನ ಕೃಪೆಯಿಂದ ನಿಮಗೆ ಈ ತಿಗಳು ಅಪಾರ ಧನ ಪ್ರಾಪ್ತಿಯಾಗಲಿದೆ. ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿರುವರಿಗೆ, ನೌಕರಿಯ ಹೊಸ ಅವಕಾಶ ಅಥವಾ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೂ ಕೂಡ ಲಾಭ ಸಿಗಲಿದೆ. ಹೊಸ ಉದ್ಯಮ ಆರಂಭಿಸಲು ಬಯಸುವವರಿಗೆ ಇದು ಸಕಾಲವಾಗಿದೆ ಮತ್ತು ನಿಮಗೆ ಲಾಭ ಕೂಡ ಕಾದಿದೆ.
3. ಸಿಂಹ ರಾಶಿ: ಸಿಂಹ ರಾಶಿಯ ಸ್ಥಳೀಯರಿಗೂ ಕೂಡ ಈ ತಿಂಗಳು ಹನುಮಂತನ ಅಪಾರ ಕೃಪೆ ಲಭಿಸಲಿದೆ. ವೃತ್ತಿಯಲ್ಲಿ ಬಡ್ತಿ ಸಿಗಲಿದೆ ಮತ್ತು ಆರ್ಥಿಕ ಸ್ಥಿತಿ ಮತ್ತಷ್ಟು ಬಲಿಷ್ಠವಾಗಲಿದೆ. ನೈತಿಕ ಕ್ಷಮತೆ ಹೆಚ್ಚಾಗಲಿದೆ ಹಾಗೂ ಪದೋನ್ನತಿ ಕೂಡ ಲಭಿಸಲಿದೆ. ಕಾರ್ಯ ಕ್ಷೇತ್ರದಲ್ಲಿ ಹಲವು ಹೊಸ ಮತ್ತು ಮಹತ್ವದ ಜವಾಬ್ದಾರಿಗಳು ಸಿಗಲಿವೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲ ಕೂಡ ಸಿಗಲಿದೆ. ವ್ಯಾಪಾರದಲ್ಲಿ ವೃದ್ಧಿಯ ಸಂಕೇತವಿದೆ.
4. ವೃಶ್ಚಿಕ ರಾಶಿ: ಹನುಮನ ಕೃಪೆಯಿಂದ ಈ ಬಾರಿ ವೃಶ್ಚಿಕ ರಾಶಿಯ ಜನರ ನಿಂತುಹೋದ ಹಣ ಅವರತ್ತ ಮರಳಲಿದೆ. ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ, ನೌಕರಿಯಲ್ಲಿ ಪದೋನ್ನತಿ ಮತ್ತು ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ಅನ್ಯ ಕ್ಷೇತ್ರಗಳಲ್ಲಿಯೂ ಕೂಡ ಲಾಭ ಸಿಗಲಿದೆ. ಕಾಯಕ್ಷೇತ್ರದಲ್ಲಿ ಪದೋನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದ್ದು, ಎಲ್ಲಾ ರೀತಿಯ ಸಕಾರಾತ್ಮಕ ಪರಿಣಾಮಗಳು ಸಿಗಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)