ಮೆಹಂದಿಗೆ ಈ ವಸ್ತುಗಳನ್ನು ಬೆರೆಸಿ ಹಚ್ಚಿದರೆ ಹೆಚ್ಚುವುದು ಕೂದಲಿನ ಹೊಳಪು ಮತ್ತು ಕಾಂತಿ
Henna for silky hair : ಕೂದಲಿನ ಹಲವಾರು ಸಮಸ್ಯೆಗಳನ್ನು ಮೆಹಂದಿ ಬಹಳ ಸುಲಭವಾಗಿ ನಿವಾರಿಸಬಲ್ಲದು. ಈ ಮೆಹಂದಿಗೆ ಕೆಲವೊಂದು ವಸ್ತುಗಳನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚಾಗುವುದು.
Henna for silky hair : ಕೂದಲು ಮನುಷ್ಯನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿಯೇ ಉದ್ದ ಮತ್ತು ದಪ್ಪ ಕೂದಲು ಹೊಂದುವ ಆಸೆ ಪ್ರತಿಯೊಬ್ಬರದ್ದಾಗಿರುತ್ತದೆ. ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಜನರು ಕೂಡಾ ನಾನಾ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಾರೆ. ಅನೇಕ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಈ ಉತ್ಪನ್ನಗಳು ದುಬಾರಿಯಾಗಿದ್ದು, ಕೂದಲಿಗೆ ಹಾನಿಕಾರಕವಾಗಿರುತ್ತದೆ. ಆದರೆ ಮೆಹಂದಿ ಹಾಗಲ್ಲ. ಇದು ನೈಸರ್ಗಿಕವಾಗಿರುವುದರ ಜೊತೆಗೆ, ಹಲವಾರು ರೀತಿಯ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಇನ್ನು ಬಿಳಿ ಕೂದಲಿನ ಸಮಸ್ಯೆಯನ್ನು ಕೂಡಾ ಮೆಹಂದಿ ನಿವಾರಿಸುತ್ತದೆ.
ಈ ವಸ್ತುಗಳನ್ನು ಮೆಹಂದಿಗೆ ಮಿಶ್ರಣ ಮಾಡಿ ಮತ್ತು ಕೂದಲಿಗೆ ಹಚ್ಚಿ :
ಬಾಳೆಹಣ್ಣು :
ಬಹುತೇಕ ಎಲ್ಲರೂ ಬಾಳೆಹಣ್ಣು ತಿನ್ನಲು ಇಷ್ಟಪಡುತ್ತಾರೆ. ಆದರೆ ಬಾಳೆಹಣ್ಣಿನ ಪೇಸ್ಟ್ ಅನ್ನು ಮೆಹಂದಿಯಲ್ಲಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ರೇಷ್ಮೆಯಂತೆ ಹೊಳೆಯುವ ಬಲಿಷ್ಠ ಕೂದಲು ನಿಮ್ಮದಾಗುತ್ತದೆ. ಬಾಳೆಹಣ್ಣಿನಲ್ಲಿ ತಲೆಹೊಟ್ಟು ಹೋಗಲಾಡಿಸುವ ಗುಣವಿದೆ. ತಲೆಹೊಟ್ಟು ಸಮಸ್ಯೆಯಿಂದ ಕೂದಲಿಗೆ ತೊಂದರೆಯಾಗಿದ್ದರೆ, ಬಾಳೆಹಣ್ಣನ್ನು ಮೆಹಂದಿ ಜೊತೆ ಬೆರೆಸಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ.
ಇದನ್ನೂ ಓದಿ : ಕೇವಲ ಒಂದು ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಲು ಈ ಬೀಜವನ್ನು ಸೇವಿಸಿ
ಆಲಿವ್ ಎಣ್ಣೆ :
ಆಲಿವ್ ಎಣ್ಣೆ ದೇಹಕ್ಕೆ ಪ್ರಯೋಜನಕಾರಿ. ಇದಕ್ಕಾಗಿ ಮೆಹಂದಿಯಲ್ಲಿ ಆಲಿವ್ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಮೃದುವಾಗಿ ಹೊಳೆಯುತ್ತದೆ.
ಮೊಟ್ಟೆ:
ಮೊಟ್ಟೆ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಮೆಹಂದಿಗೆ ಮೊಟ್ಟೆಯನ್ನು ಬೆರೆಸಿ ಹಚ್ಚುವುದರಿಂದ ಕೂದಲು ಹೊಳಪು ಪಡೆಯುವುದರ ಜೊತೆಗೆ ಸ್ಟ್ರಾಂಗ್ ಆಗುತ್ತದೆ. ಆದರೆ ನೆನಪಿರಲಿ ಮೆಹಂದಿ ಜೊತೆ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಕೂದಲಿಗೆ ಹಚ್ಚಬೇಕು.
ಇದನ್ನೂ ಓದಿ : Diabetes: ವಯಸ್ಸಿಗೆ ಅನುಗುಣವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಎಷ್ಟಿರಬೇಕು? ಇಲ್ಲಿ ತಿಳಿದುಕೊಳ್ಳಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.