ಪಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ ! ಮೊಸರು ಬಳಸಿ ಮನೆಯಲ್ಲಿಯೇ ತಯಾರಿಸಿ ಹೇರ್ ಸ್ಟ್ರೈಟ್ ನಿಂಗ್ ಕ್ರೀಂ !

How to make curd hair straightening mask: ಮೊಸರಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಕಂಡುಬರುತ್ತದೆ. ಇದು ನಿಮ್ಮ ಕೂದಲಿಗೆ ಆಂತರಿಕ ಪೋಷಣೆಯನ್ನು ಒದಗಿಸುತ್ತದೆ.  ಮೊಸರು ಕೂದಲನ್ನು ಸದೃಢಗೊಳಿಸುವುದಲ್ಲದೆ, ದಪ್ಪವಾಗಿಸಿ  ಹೊಳೆಯುವಂತೆ ಮಾಡುತ್ತದೆ. 

Written by - Ranjitha R K | Last Updated : Apr 7, 2023, 05:05 PM IST
  • ಕೂದಲು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
  • ಕೂದಲಿನೊಂದಿಗೆ ನಾನಾ ರೀತಿಯ ಎಕ್ಸ್ ಪೆರಿಮೆಂಟ್ ಗಳನ್ನು ಮಾಡುತ್ತಿರುತ್ತಾರೆ.
  • ಹೇರ್ ಸ್ಟ್ರೈಟ್ನಿಂಗ್ ಇದರಲ್ಲಿ ಒಂದು.
ಪಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ ! ಮೊಸರು ಬಳಸಿ ಮನೆಯಲ್ಲಿಯೇ ತಯಾರಿಸಿ ಹೇರ್ ಸ್ಟ್ರೈಟ್ ನಿಂಗ್  ಕ್ರೀಂ ! title=

How to make curd hair straightening mask : ಕೂದಲು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಇಂದಿನ ಕಾಲದಲ್ಲಿ ಜನರು ತಮ್ಮ ಕೂದಲಿನೊಂದಿಗೆ  ನಾನಾ ರೀತಿಯ ಎಕ್ಸ್ ಪೆರಿಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಹೇರ್ ಸ್ಟ್ರೈಟ್ನಿಂಗ್ ಇದರಲ್ಲಿ ಒಂದು. ಮಾರುಕಟ್ಟೆಯಲ್ಲಿ ಹೇರ್ ಸ್ಟ್ರೈಟ್ನಿಂಗ್ ಗಾಗಿ ಅನೇಕ ಉತ್ಪನ್ನಗಳು ಲಭ್ಯವಿವೆ. ಆದರೆ ಇವುಗಳು ದುಬಾರಿಯಾಗಿರುವುದರಿಂದ ಎಲ್ಲರೂ ಇದನ್ನು ಬಳಸುವುದು ಸಾಧ್ಯವಿಲ್ಲ. ಆದರೆ ಮೊಸರು ಬಳಸಿ ಕೂಡಾ ಹೇರ್ ಸ್ಟ್ರೈಟ್ನಿಂಗ್ ಮಾಸ್ಕ್ ಅನ್ನು ತಯಾರಿಸಬಹುದು. 

ಮೊಸರಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಕಂಡುಬರುತ್ತದೆ. ಇದು ನಿಮ್ಮ ಕೂದಲಿಗೆ ಆಂತರಿಕ ಪೋಷಣೆಯನ್ನು ಒದಗಿಸುತ್ತದೆ.  ಮೊಸರು ಕೂದಲನ್ನು ಸದೃಢಗೊಳಿಸುವುದಲ್ಲದೆ, ದಪ್ಪವಾಗಿಸಿ  ಹೊಳೆಯುವಂತೆ ಮಾಡುತ್ತದೆ.  ಮನೆಯಲ್ಲಿ ತಯಾರಿಸಿದ ಈ ಹೇರ್ ಸ್ಟ್ರೈಟ್ನಿಂಗ್ ಮಾಸ್ಕ್ ಅನ್ನು ನಿಮ್ಮ ಕೂದಲಿಗೆ ಬಳಸುವ ಮೂಲಕ ನೈಸರ್ಗಿಕವಾಗಿ ಕೂದಲನ್ನು ಸ್ಟ್ರೈಟ್ನಿಂಗ್ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ,  ದುಬಾರಿ ವೆಚ್ಚವನ್ನು ತಪ್ಪಿಸಬಹುದು ಮಾತ್ರವಲ್ಲ ರಾಸಾಯನಿಕಗಳಿಂದ ಕೂದಲು ಹಾಳಾಗುವುದನ್ನು ಕೂಡಾ ತಪ್ಪಿಸಬಹುದು. 

ಇದನ್ನೂ ಓದಿ : Cancer-Diabetes, BP ಗಳಂತಹ ಹಲವು ಕಾಯಿಲೆಗಳಿಗೆ ರಾಮಬಾಣ ಈ 'ಹಿಮಾಲಯನ್ ಬೆಳ್ಳುಳ್ಳಿ'!

ಮೊಸರು ಕೂದಲು ಸ್ಟ್ರೈಟನಿಂಗ್ ಮಾಸ್ಕ್ ಮಾಡಲು ಬೇಕಾಗುವ ಸಾಮಾಗ್ರಿಗಳು :
ಮೊಸರು 3 ಟೀಸ್ಪೂನ್ 
ಜೇನುತುಪ್ಪ 2 ಟೀಸ್ಪೂನ್ 
ಅಲೋವೆರಾ ಜೆಲ್ 1 ಟೀಸ್ಪೂನ್ 

ಹೇರ್ ಸ್ಟ್ರೈಟ್ನಿಂಗ್  ಮಾಸ್ಕ್ ಮಾಡುವುದು ಹೇಗೆ? 
ಹೇರ್ ಸ್ಟ್ರೈಟ್ನಿಂಗ್  ಮಾಸ್ಕ್ ಮಾಡಲು ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
ನಂತರ ಅದರಲ್ಲಿ 3 ಚಮಚ ಮೊಸರು, 2 ಚಮಚ ಜೇನುತುಪ್ಪ ಮತ್ತು 1 ಚಮಚ ಅಲೋವೆರಾ ಜೆಲ್ ಹಾಕಿ.
 ನಂತರ, ಈ ಮೂರು ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
ಇಷ್ಟಾದ ಮೇಲೆ ಹೇರ್ ಸ್ಟ್ರೈಟ್ನಿಂಗ್  ಮಾಸ್ಕ್  ಸಿದ್ದವಾಗುತ್ತದೆ. 

ಇದನ್ನೂ ಓದಿ : ಬೇವಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

ಹೇರ್ ಸ್ಟ್ರೈಟ್ನಿಂಗ್  ಮಾಸ್ಕ್  ಮಾಸ್ಕ್ ಅನ್ನು ಹೇಗೆ ಬಳಸುವುದು? 
ಹೇರ್ ಸ್ಟ್ರೈಟ್ನಿಂಗ್  ಮಾಸ್ಕ್ ಅನ್ನು ಕೂದಲಿಗೆ ಹಚ್ಚಲು ಬ್ರಷ್ ತೆಗೆದುಕೊಳ್ಳಿ.
 ಈ ಬ್ರಶ್ ಸಹಾಯದಿಂದ ಈ ಮಾಸ್ಕ್ ಅನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ.
 ಈ ಮಾಸ್ಕ್ ಅನ್ನು ಕೂದಲಿನಲ್ಲಿ ಸ್ವಲ್ಪ ಸಮಯದವರೆಗೆ ಬಿಡಿ. 
ನಂತರ ಕೂದಲನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ.
ಇದನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಸ್ವಲ್ಪ ಮಟ್ಟಿಗೆ ನೇರವಾಗುತ್ತದೆ.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News