ನವದೆಹಲಿ : ಅರಿಶಿನವನ್ನು ಪುರಾತನ ಸಮಯದಿಂದಲೂ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತಿದೆ. ಅರಿಶಿನ (Turmeric) ಆ್ಯಂಟಿ ಇಂಫ್ಲಮೆಟರಿ ಮತ್ತು ಆ್ಯಂಟಿ ಕಾರ್ಸಿನೋಜೆನಿಕ್ ಗುಣಗಳನ್ನು ಹೊಂದಿದೆ. ಆದರೆ ಇತ್ತೀಚೆಗೆ ಎಲ್ಲಾ ಆಹಾರ ಪದಾರ್ಥಗಳಲ್ಲಿಯೂ ಕಲಬೆರಕೆ ಕಂಡು ಬರುತ್ತಿದೆ. ಈ ಸಮಸ್ಯೆಯಿಂದ ಅರಿಶಿನ ಕೂಡಾ ಹೊರತಾಗಿಲ್ಲ. ಅರಿಶಿನವನ್ನು ನೋಡಿದ  ಕೂಡಲೇ ಇದು ಶುದ್ಧವೋ ಅಥವಾ ಕಲಬೆರಕೆಯಾಗಿದೆಯೋ (Turmeric Adulteration) ಎಂದು ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಯಾಕೆಂದರೆ ಈ ಅರಿಶಿನಕ್ಕೆ ಬಣ್ಣ, ವಿನ್ಯಾಸ ಮತ್ತು ಕೃತಕ ಪರಿಮಳವನ್ನು ಕೂಡಾ ಬೆರೆಸುತ್ತಾರೆ. ಹಾಗಾಗಿ ಮೇಲ್ನೋಟಕ್ಕೆ ಇದು ಶುದ್ಧ ಅರಿಶಿನವೋ ಅಥವಾ ಕಲಬೆರಕೆಯೋ ಎಂದು ಗುರುತಿಸುವುದು ಕಷ್ಟ. ಈ ಕಲಬೆರಕೆ ಅರಿಶಿನವನ್ನು ಸೇವಿಸಿದರೆ, ಆರೋಗ್ಯ ಸಮಸ್ಯೆಗಳು (health problems) ಎದುರಾಗಬಹುದು. ಅಲ್ಲದೆ, ಇದು ಮಾರಕ ರೋಗಗಳಿಗೂ ಕಾರಣವಾಗಬಹುದು. 


COMMERCIAL BREAK
SCROLL TO CONTINUE READING

ನ್ಯೂಸ್ ಮೆಡಿಕಲ್ (News Medical) ಬಾಂಗ್ಲಾದೇಶದಲ್ಲಿ ಬೆಳೆದ ಅರಿಶಿನದ ಬಗ್ಗೆ ಒಂದು ವರದಿಯನ್ನು ಪ್ರಕಟಿಸಿದೆ. ಈ ಅರಿಶಿನವು ಸಾಮಾನ್ಯ ಮಟ್ಟಕ್ಕಿಂತ 500 ಪಟ್ಟು ಹೆಚ್ಚು ವಿಷಕಾರಿ ಹೆವಿ ಮೆಟಲ್ ಅನ್ನು ಹೊಂದಿದೆ ಎಂದು ಅದು ಹೇಳಿದೆ. ವರದಿಯ ಪ್ರಕಾರ, ಒಂಬತ್ತು ಅರಿಶಿನ ಉತ್ಪಾದನಾ ಜಿಲ್ಲೆಗಳ ಪೈಕಿ,  ಏಳು ಜಿಲ್ಲೆಗಳಲ್ಲಿ ಕಲಬೆರಕೆ ಅರಿಶಿನವನ್ನೇ ಬೆಳೆಯಲಾಗುತ್ತದೆಯಂತೆ.  ಈ ಅರಶಿನ (Turmeric) ಗಾಢವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಅಲ್ಲದೆ, ಈ ಅರಿಶಿನದಲ್ಲಿ 'ಕ್ರೋಮೇಟ್' ಎಂಬ ಅಂಶ ಕೂಡಾ ಇರುತ್ತದೆ. 


ಇದನ್ನೂ ಓದಿ  : Men's health: ನಿತ್ಯ ರಾತ್ರಿ ಹಾಲಿನ ಜೊತೆ ಇದನ್ನು ಬೆರೆಸಿ ಕುಡಿದರೆ, ಪುರುಷರಿಗೆ ಸಿಗುತ್ತೆ ಅದ್ಭುತ ಪ್ರಯೋಜನ


ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety & Standards Authority of India) FSSAI ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ.  ಕಲಬೆರಕೆ ಮತ್ತು ಶುದ್ಧ ಅರಿಶಿನದ ನಡುವಿನ ವ್ಯತ್ಯಾಸವನ್ನು ಹೇಗೆ ನಿರ್ಧರಿಸುವುದು ಎನ್ನುವುದನ್ನು ಈ ವಿಡಿಯೋದಲ್ಲಿ (video) ವಿವರವಾಗಿ ತೋರಿಸಲಾಗಿದೆ. 


ಎಚ್ಚರ..! ಮಕ್ಕಳಿಗೆ ಇಷ್ಟ ಎಂದು ನಿತ್ಯ ಟೊಮೆಟೊ ಕೆಚಪ್ ಕೊಡ್ತೀರಾ ? ದೇಹದಲ್ಲಿ ವಿಷದಂತೆ ವರ್ತಿಸಬಹುದು ಇದು


ಹಾಗಿದ್ದರೆ, ನಿಮ್ಮ ಅಡುಗೆಮನೆಯಲ್ಲಿರುವ ಅರಿಶಿನ ಶುದ್ಧವೋ ಅಥವಾ ಕಲಬೆರೆಕೆಯದ್ದೋ ಎನ್ನುವುದನ್ನು ಕೇವಲ ನೀರಿನ ಸಹಾಯದಿಂದ ತಿಳಿದುಕೊಳ್ಳಬಹುದು. ಉತ್ತಮ ಆರೋಗ್ಯ ದೃಷ್ಟಿಯಿಂದ ಅರಶಿನ ಬಳಸುವ ಮುನ್ನ ಈ ರೀತಿ ಪರೀಕ್ಷಿಸಿಕೊಳ್ಳುವುದು ಮುಖ್ಯ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.