ನೀವು ಬಳಸುವ ಅಡುಗೆ ಎಣ್ಣೆ ಶುದ್ದ ತೈಲವೋ ಕಲಬೆರಕೆಯೋ ಮನೆಯಲ್ಲಿಯೇ ಸುಲಭವಾಗಿ ಪರೀಕ್ಷಿಸಿಕೊಳ್ಳಿ

ಅಡುಗೆ ಎಣ್ಣೆಯಲ್ಲಿ ಕಲಬೆರಕೆಯನ್ನು ವಿರೋಧಿಸಿ,  ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಡಿಟೆಕ್ಟಿಂಗ್ ಫುಡ್ ಅಡ್ಲ್ಟೆರಂಟ್ಸ್ ಎಂಬ ಅಭಿಯಾನವನ್ನು ಆರಂಭಿಸಿದೆ. 

Written by - Ranjitha R K | Last Updated : Sep 12, 2021, 08:29 AM IST
  • ಕಲಬೆರಕೆ ವಿರುದ್ಧ FSSAI ಅಭಿಯಾನ
  • ಕಲಬೆರಕೆಯನ್ನು ಹೇಗೆ ಪರಿಶೀಲಿಸುವುದು ತಿಳಿಯಿರಿ
  • ಮನೆಯಲ್ಲಿ ಸುಲಭವಾಗಿ ಪರಿಶೀಲಿಸಿ ಎಣ್ಣೆ ಅಸಲಿಯೋ ನಕಲಿಯೋ?
ನೀವು ಬಳಸುವ ಅಡುಗೆ ಎಣ್ಣೆ ಶುದ್ದ ತೈಲವೋ ಕಲಬೆರಕೆಯೋ ಮನೆಯಲ್ಲಿಯೇ ಸುಲಭವಾಗಿ ಪರೀಕ್ಷಿಸಿಕೊಳ್ಳಿ  title=
ಕಲಬೆರಕೆ ವಿರುದ್ಧ FSSAI ಅಭಿಯಾನ (photo zee news)

ನವದೆಹಲಿ :  ಹಬ್ಬದ ಸೀಸನ್ ಆರಂಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಎಣ್ಣೆಯ ಬಳಕೆ ಹೆಚ್ಚಾಗುತ್ತಿದೆ. ಆದರೆ ಎಣ್ಣೆಯಲ್ಲಿ ಕಲಬೆರಕೆಯ ದೂರುಗಳು ಕೂಡಾ ಹೆಚ್ಚಾಗುತ್ತಿವೆ. ಎಣ್ಣೆಯ ಬಣ್ಣವನ್ನು ಹಳದಿಯಾಗಿಸಲು (yellow Adulteration in Oil) ಅಪಾಯಕಾರಿ ಮೆಟಾನಿಲ್ ಹಳದಿಯನ್ನು ಇದಕ್ಕೆ ಸೇರಿಸಲಾಗುತ್ತದೆ. ಅದು ಆರೋಗ್ಯಕ್ಕೆ ಮಾರಕವಾಗಿದೆ.  ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಿಂದ ಖರೀದಿಸುವ ತೈಲ ಶುದ್ದ ತೈಲವೋ ಅಥವಾ ಕಲಬೆರಕೆಯೋ ಎನ್ನುವುದನ್ನು ಸುಲಭವಾಗಿ ಪತ್ತೆಹಚ್ಚಬಹುದು. 

 ಅಡುಗೆ ಎಣ್ಣೆಯಲ್ಲಿ ಕಲಬೆರಕೆಯನ್ನು ವಿರೋಧಿಸಿ,  ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)  ಡಿಟೆಕ್ಟಿಂಗ್ ಫುಡ್ ಅಡ್ಲ್ಟೆರಂಟ್ಸ್ (Detecting Food Adulterants)ಎಂಬ ಅಭಿಯಾನವನ್ನು ಆರಂಭಿಸಿದೆ. ಕಲಬೆರಕೆ ಎಣ್ಣೆಯನ್ನು ದೀರ್ಘಕಾಲದವರೆಗೆ ತಿನ್ನುವುದು ಆರೋಗ್ಯಕ್ಕೆ ಮಾರಕವಾಗಬಹುದು.  ಈ ಅಭಿಯಾನದ ಅಡಿಯಲ್ಲಿ ಕಲಬೆರಕೆಯನ್ನು ಗುರುತಿಸುವುದು ಹೇಗೆ ಎನ್ನುವುದನ್ನು FSSAI ಹೇಳುತ್ತಿದೆ.

 

ಇದನ್ನೂ ಓದಿ : LIC Scheme:LICಯ ಈ ಸೂಪರ್ ಹಿಟ್ ಯೋಜನೆಯಲ್ಲಿ ಸಿಗುತ್ತಿದೆ 1ಕೋಟಿ ರೂ.ಗಳ ಲಾಭ, ಇಲ್ಲಿದೆ ಡಿಟೇಲ್ಸ್

ಈ ವೀಡಿಯೊದಲ್ಲಿ  FSSAI  ಅಡುಗೆ ಎಣ್ಣೆಯಲ್ಲಿ (Cooking oil) ಮೆಟಾನಿಲ್ ಹಳದಿಯಂತಹ ಅಪಾಯಕಾರಿ ಬಣ್ಣವನ್ನು ಪತ್ತೆ ಹಚ್ಚುವ, ಸುಲಭ  ಮಾರ್ಗವನ್ನು ವಿವರಿಸಿದೆ. ಹಾಗಿದ್ದರೆ, ಮನೆಯಲ್ಲಿಯೇ ಎಣ್ಣೆಯಲ್ಲಿ ಕಲಬೆರಕೆ ಇದೆಯೋ ಇಲ್ಲವೋ ಎನ್ನುವುದನ್ನು ಮನೆಯಲ್ಲಿಯೇ ಸುಲಭವಾಗಿ ಪರಿಶೀಲಿಸುವುದು ಹೇಗೆ ನೋಡೋಣ. 

ಎಣ್ಣೆಯಲ್ಲಿ ಕಲಬೆರಕೆಯನ್ನು ಪರಿಶೀಲಿಸುವುದು  ಹೇಗೆ?
1. ಮೊದಲು ಟೆಸ್ಟ್  ಟ್ಯೂಬ್‌ನಲ್ಲಿ 1 ಮಿಲಿ ಎಣ್ಣೆಯ ಮಾದರಿಯನ್ನು ತೆಗೆದುಕೊಳ್ಳಿ.
2. ಈಗ ಅದಕ್ಕೆ 4 ಎಂಎಲ್ ಡಿಸ್ಟಿಲ್ಡ್ ವಾಟರ್ ಸೇರಿಸಿ ಮತ್ತು ಟೆಸ್ಟ್ ಟ್ಯೂಬ್ ಅಲ್ಲಾಡಿಸಿ.
3. ಈ ಮಿಕ್ಸರ್ ನ 2ml ಅನ್ನು ಇನ್ನೊಂದು ಟೆಸ್ಟ್ ಟ್ಯೂಬ್ ನಲ್ಲಿ ತೆಗೆದುಕೊಂಡು 2l ಕಾಂಸೆನ್ ಟ್ರೇಟೆಡ್ HCL ಅನ್ನು ಮಿಕ್ಸರ್ ಗೆ ಸೇರಿಸಿ.
4. ಈಗ  ಎಣ್ಣೆಯ ಮೇಲಿನ ಪದರದಲ್ಲಿ ಬಣ್ಣ ಬದಲಾವಣೆ ಕಾಣದಿದ್ದರೆ, ಆ ಶುದ್ದ ಎಣ್ಣೆ  
5. ಆದರೆ, ಎಣ್ಣೆ ಕಲಬೆರಕೆಯಾಗಿದ್ದರೆ, ಎಣ್ಣೆಯ ಮೇಲಿನ ಪದರದ ಮೇಲೆ ಆಮ್ಲದ ಬಣ್ಣ ಬದಲಾಗುತ್ತದೆ.

ಇದನ್ನೂ ಓದಿ : SBI Alert:ಈ ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗಬಹುದು ಬ್ಯಾಂಕಿಂಗ್ ಸೇವೆ

ಮೆಟಾನಿಲ್ ಹಳದಿ ಅಡ್ಡ ಪರಿಣಾಮಗಳು :
ಮೆಟಾನಿಲ್ ಹಳದಿ ಒಂದು ಆಹಾರ ಬಣ್ಣವಾಗಿದ್ದು ಇದನ್ನು ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಮೆಟಾನಿಲ್ ಹಳದಿ ಮಾನವ ದೇಹಕ್ಕೆ ಅಪಾಯಕಾರಿ. ವಾಸ್ತವವಾಗಿ, ಇದು ನಮ್ಮ ಮೆದುಳಿನ ಕಲಿಯುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News