ನವದೆಹಲಿ : Tomato Ketchup Side effects : ಟೊಮೆಟೊ ಕೆಚಪ್ ಅನ್ನು ಇಷ್ಟಪಡದ ಮಕ್ಕಳು ಯಾರೂ ಇರಲಿಕ್ಕಿಲ್ಲ. ಈಗಂತೂ ಮಕ್ಕಳು ಏನೀ ತಿನ್ನಬೇಕಾದರೂ ಚಟ್ನಿ ಬದಲು, ಟೊಮೆಟೊ ಕೆಚಪ್ ಅನ್ನೇ ಸೇವಿಸುತ್ತಾರೆ. ದೋಸೆ ಇರಲಿ, ಇಡ್ಲಿ, ಚಪಾತಿ ಹೀಗೆ ಏನೇ ಇರಲಿ ಅದನ್ನು ತಿನ್ನಲು ಕೆಚಪ್ (Tomato Ketchup) ಬೇಕೇ ಬೇಕು. ಕೆಚಪ್ ಜೊತೆ ಮಕ್ಕಳು ಸುಲಭವಾಗಿ ತಿಂಡಿ ತಿಂದು ಮುಗಿಸಿ ಬಿಡುತ್ತಾರೆ ನಿಜ. ಆದರೆ, ಇದು ಆರೋಗ್ಯಕ್ಕೆ ಬಹಳ ಮಾರಕವಾಗಿರುತ್ತದೆ. ಟೊಮೆಟೊ ಕೆಚಪ್ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ (Side effects of Tomato Ketchup) ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಹಾಗಿದ್ದರೆ ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ನೋಡೋಣ.
ಬೊಜ್ಜು:
ಟೊಮೆಟೊ ಕೆಚಪ್ ನಲ್ಲಿ (Tomato Ketchup) ಹೆಚ್ಚು ಫ್ರಕ್ಟೋಸ್ ಅಂಶ ಇರುತ್ತದೆ. ಈ ಕಾರಣದಿಂದಾಗಿ ಇದು ಸ್ಥೂಲಕಾಯದ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೆ, ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದು ಬಹಳ ಅಪಾಯಕಾರಿಯಾಗಿರುತ್ತದೆ.
ಇದನ್ನೂ ಓದಿ : Pomegranate For Diabetes: ಮಧು ಮೇಹ ಇರುವ ರೋಗಿಗಳು ನಿತ್ಯ ಸೇವಿಸಿ ಈ ಹಣ್ಣು, ನಿಯಂತ್ರಣದಲ್ಲಿರುತ್ತದೆ ಶುಗರ್ ಲೆವೆಲ್
ಮೂತ್ರಪಿಂಡದ ಸಮಸ್ಯೆ:
ಟೊಮೆಟೊ ಕೆಚಪ್ ಅನ್ನು ಹೆಚ್ಚು ಸೇವಿಸುವುದರಿಂದ ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಮೂತ್ರ ಪಿಂಡದ ಕಲ್ಲಿನ ಸಮಸ್ಯೆಗಳನ್ನು (Kidney stone)ಉಂಟುಮಾಡಬಹುದು.
ಆಸಿಡಿಟಿ :
ಟೊಮೆಟೊ ಕೆಚಪ್ ಸೇವನೆಯಿಂದ ಆಸಿಡಿಟಿ (Accidity) ಸಮಸ್ಯೆ ಕಾಣಿಸುತ್ತದೆ. ಹೀಗಾಗಿ ಟೊಮೆಟೊ ಕೆಚಪ್ ಸೇವಿಸಿದರೆ, ಎದೆಯುರಿ, ಹೊತ್ತೆಯಲ್ಲಿ ಉರಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಅಲರ್ಜಿಗಳು :
ಟೊಮೆಟೊ ಕೆಚಪ್ ಅನ್ನು ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಅಲರ್ಜಿ (Allergy) ಉಂಟಾಗಬಹುದು. ಏಕೆಂದರೆ ಕೆಚಪ್ ನಲ್ಲಿ ಹಿಸ್ಟಮೈನ್ಸ್ ರಾಸಾಯನಿಕದ ಪ್ರಮಾಣ ಹೆಚ್ಚಿರುತ್ತದೆ. ಇದು ದೇಹದ ಅಲರ್ಜಿಗೆ ಕಾರಣವಾಗಬಹುದು.
ಇದನ್ನೂ ಓದಿ : ನೀವು ಎಂದಾದರೂ ತಿಂದಿದ್ದೀರಾ ಒಣಗಿದ ಪಪ್ಪಾಯ ? ಅದರ ಪ್ರಯೋಜನಗಳನ್ನು ತಿಳಿಯಿರಿ
ಈ ಎಲ್ಲಾ ಕಾರಣದಿಂದಾಗಿ ಮಕ್ಕಳಿಗೆ ಟೊಮೆಟೊ ಕೆಚಪ್ ನೀಡುವುದನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು. ಇದರ ಬದಲಾಗಿ ಮನೆಯಲ್ಲಿಯೇ ತಯಾರಿಸಿದ ಚಟ್ನಿಗಳ (chutney) ಬಳಕೆ ಸೂಕ್ತ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.