ನವದೆಹಲಿ : ಕೊರೊನಾವೈರಸ್ (Coronavirus) ಕಾರಣದಿಂದಾಗಿ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ. ಜನರ ವ್ಯಾಪಾರ ವ್ಯವಹಾರ ಸ್ಥಗಿತಗೊಂಡಿದೆ. ಮನೆ ನಡೆಸುವುದು ಕಷ್ಟಕರವಾಗಿದೆ. ಹೀಗಿರುವಾಗ, ಎಲ್ಲೆಡೆ ಋಣಾತ್ಮಕ  (Negativity) ವಾತಾವರಣವೇ ಕಂಡುಬರುತ್ತಿದೆ.  ಅಂತಹ ಪರಿಸ್ಥಿತಿಯಲ್ಲಿ, ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು, ಮನಸ್ಸು, ದೇಹವನ್ನು ಸಕಾರಾತ್ಮಕವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಯು ಸಕಾರಾತ್ಮಕವಾಗಿದ್ದರೆ, ಅದು ಕುಟುಂಬದ ಉಳಿದ ಸದಸ್ಯರ ಮೇಲೂ ಪರಿಣಾಮ ಬೀರುತ್ತದೆ. 


COMMERCIAL BREAK
SCROLL TO CONTINUE READING

ಬಿಕ್ಕಟ್ಟಿನ ಸಮಯದಲ್ಲಿ  ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ? 
ಏನೇ ಬಿಕ್ಕಟ್ಟಿನ ಸಮಯವಾಗಿರಲಿ ಸಕಾರಾತ್ಮಕವಾಗಿರುವುದು (Positivity) ಬಹಳ ಮುಖ್ಯ. ವಾಸ್ತುವಿನಲ್ಲಿ, ನಕಾರಾತ್ಮಕತೆಯನ್ನು ತೆಗೆದುಹಾಕುವ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ  ಸುಲಭ ಪರಿಹಾರಗಳಿವೆ. 


ಇದನ್ನೂ ಓದಿ :  Vastu Tips: ಸಂತಾನ ಪ್ರಾಪ್ತಿ, ಸುಖ-ಶಾಂತಿಗಾಗಿ ಮನೆಯಲ್ಲಿರಲಿ ಈ ರೀತಿಯ ಚಿತ್ರ


1. ಸೂರ್ಯದೇವ ನಮ್ಮ ಜೀವನದ ಶಕ್ತಿಯ ಮುಖ್ಯ ಮೂಲ. ಸೂರ್ಯನ ಕಿರಣ (Sun) ನಿಮ್ಮ ಮೇಲೆ ನಿಮ್ಮ ಮನೆಯ ಮೇಲೆ ಬೀಳುವಂತಿರಲಿ. ಸೂರ್ಯದೇವನ ಬೆಳಕು ಮನೆಯ ಪ್ರತಿಯೊಂದು ಮೂಲೆಗೂ ತಲುಪುವಂತೆ ನೋಡಿಕೊಳ್ಳಿ.


2. ಪ್ರತಿದಿನ ಸ್ನಾನ (Bath) ಮಾಡಿ ಮತ್ತು ಸ್ನಾನ ಮಾಡಿದ ನಂತರ ದೇಹವನ್ನು ಚೆನ್ನಾಗಿ ಒಣಗಿಸಿ. ಪ್ರತಿದಿನ ಸ್ನಾನ ಮಾಡುವುದರಿಂದ ದೇಹ ಸ್ವಚ್ಛವಾಗಿರುತ್ತದೆ. ಅದರೊಂದಿಗೆ ದೇಹ ಮತ್ತು ಮನಸ್ಸು ಸಹ ಉಲ್ಲಾಸಗೊಳ್ಳುತ್ತದೆ.


3. ಪ್ರತಿದಿನ ಬೆಳಿಗ್ಗೆ ಎದ್ದು ಗಾಯತ್ರಿ ಮಂತ್ರವನ್ನು (Gayatri Mantra) ಪಠಿಸಿ. ಈ ಮಂತ್ರವು ಮನಸ್ಸಿಗೆ ತೃಪ್ತಿ ನೀಡುತ್ತದೆ.  


ಇದನ್ನೂ ಓದಿ :  Watch Vastu Tips: ಯಮರಾಜನ ದಿಕ್ಕಂತೆ ಇದು; ಇಲ್ಲಿ ಗಡಿಯಾರ ಹಾಕುವ ತಪ್ಪು ಮಾಡದಿರಿ


4. ಹಗಲಿನಲ್ಲಿ ಲಘು ಆಹಾರ (Light food) ಸೇವಿಸಿ. ನಿಮಗೆ ಎಷ್ಟು ಹಸಿವೆದೆಯೋ ಅದಕ್ಕಿಂತ ಸ್ವಲ್ಪ ಕಡಿಮೆಯೇ ಆಹಾರ ಸೇವಿಸಿ. ಓವರ್ ಈಟಿಂಗ್ ಯಾವತ್ತಿಗೂ ಬೇಡ. ಆಹಾರ ಸೇವನೆ ನಂತರ, ಸ್ವಲ್ಪ ಹೊತ್ತು ನಡೆದಾಡಿ. ಸಂಜೆ 6 ರಿಂದ 7 ಗಂಟೆಯ ಒಳಗೆ ರಾತ್ರಿ ಭೋಜನ ಮುಗಿಸಲು ಪ್ರಯತ್ನಿಸಿ.


5. ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕಿತ್ತಳೆ ಬಣ್ಣವನ್ನು ಬಳಸಿ. ಈ ಕಾರಣದಿಂದಾಗಿ, ಸಕಾರಾತ್ಮಕ ಶಕ್ತಿಯ (Positive energy) ಸಂಚಾರವಾಗುತ್ತದೆ. ಈ ಬಣ್ಣವು ಕಣ್ಣುಗಳಿಗೆ ಬಹಳ ಪ್ರಿಯವಾಗಿರುತ್ತದೆ. ಮತ್ತು ಮನಸ್ಸಿಗೆ ಆಹ್ಲಾದಕರವಾಗಿರುತ್ತದೆ.


6. ಮನೆಯಲ್ಲಿ ತುಳಸಿ (Tulsi) ಗಿಡವನ್ನು ನೆಡಿ. ಈ ಸಸ್ಯವು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಸಸ್ಯವು ಪೌರಾಣಿಕ ಪ್ರಾಮುಖ್ಯತೆಯನ್ನು ಹೊಂದಿದೆ. ತುಳಸಿಗೆ ವೈದ್ಯಕೀಯ ಮಹತ್ವವೂ ಇದೆ. ಈ ಸಸ್ಯದಿಂದಾಗಿ, ಕೆಲವು ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು (Virus) ಮನೆಗೆ ಪ್ರವೇಶಿಸುವುದಿಲ್ಲ. 


ಇದನ್ನೂ ಓದಿ :  Shukra Rashi Parivartan 2021: ಶುಕ್ರನ ರಾಶಿ ಪರಿವರ್ತನೆಯಿಂದ ದ್ವಾದಶ ರಾಶಿಗಳ ಫಲಾಫಲ


7. ಸಾಸಿವೆ ಎಣ್ಣೆಯಲ್ಲಿ (Mustard oil) ಲವಂಗ ಹಾಕಿ ಸುಡುವುದರಿಂದ ಸಕಾರಾತ್ಮಕತೆ ಹೆಚ್ಚಾಗುತ್ತದೆ ಎನ್ನಲಾಗಿದೆ. ಈ  ಸುಗಂಧವು ಮನೆಯಲ್ಲಿ ಪಸರಿಸಿದಾಗ, ಮನಸ್ಸಿಗೆ ಸಂತೋಷ ಉಂಟು ಮಾಡುತ್ತದೆ. 


9. ಗಾಜಿನ ಪಾತ್ರೆಯಲ್ಲಿ ಉಪ್ಪು (Salt) ಹಾಕಿ ಮನೆಯ ಯಾವುದಾದರೂ ಮೂಲೆಯಲ್ಲಿ ಇರಿಸಿ. ಇನ್ನು ಪರಿಮಳಯುಕ್ತ ಧೂಪವನ್ನು ಹಾಕಿ ಮನೆಯ ಎಲ್ಲಾ ಮೂಲೆ ಮೂಲೆಗಳಿಗೂ ಆ ಧೂಪವನ್ನು ಹಿಡಿಯಬೇಕು. 


10. ಕಾಲಕಾಲಕ್ಕೆ ಮನೆಯ ಪ್ರತಿಯೊಂದು ಮೂಲೆಗೂ ಗಂಗಾ ನೀರನ್ನು (Ganga water) ಸಿಂಪಡಿಸಿ. ಗಂಗಾ ನೀರು ಪವಿತ್ರ ಮತ್ತು ವೈದ್ಯಕೀಯ ಗುಣಗಳಿಂದ ಕೂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಗಂಗಾ ನೀರನ್ನು ಸಿಂಪಡಿಸುವ ಮೂಲಕ, ದುಷ್ಟ ಶಕ್ತಿಗಳು ಕೊನೆಗೊಳ್ಳುತ್ತವೆ ಎನ್ನಲಾಗಿದೆ. 


ಇದನ್ನೂ ಓದಿ :  Vishnu Rekha : ಕೈಯಲ್ಲಿರುವ ವಿಷ್ಣು ರೇಖೆಯಿಂದ ನಿಮಗೆ ಒಲಿಯಲಿದೆ ಅದೃಷ್ಟ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.