ನವದೆಹಲಿ: ಇತ್ತೀಚಿನ ದಿನಗಳಲ್ಲಿ ಎಲ್ಲರ ಜೀವನದಲ್ಲಿಯೂ ಮೊಬೈಲ್ ಒಂದು ಅಗತ್ಯ ವಸ್ತುವಾಗಿ ಮಾರ್ಪಟ್ಟಿದೆ. ಮೊಬೈಲ್ ಇಲ್ಲದೇ ಇರುವುದನ್ನು ಊಹಿಸಲೂ ಸಾಧ್ಯವಿಲ್ಲ. ಕರೋನಾದಿಂದಾಗಿ ಜಾರಿಗೆ ಬಂದ ವರ್ಕ್ ಫ್ರಮ್ ಹೋಂ ಸಂಸ್ಕೃತಿ ಸೌಲಭ್ಯದಿಂದಾಗಿ, ಹೆಚ್ಚಿನ ಜನರು ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಹೆಚ್ಚು ಬಳಸಲಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಸಹ ವಿರಾಮ ತೆಗೆದುಕೊಳ್ಳದೆ ನಿರಂತರವಾಗಿ ಮೊಬೈಲ್ ಬಳಸುತ್ತಿದ್ದರೆ ಸ್ವಲ್ಪ ಹೊತ್ತು ನಿಲ್ಲಿಸಿ. ಏಕೆಂದರೆ ಅದರಿಂದ ಉಂಟಾಗುವ ಹಾನಿಯು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ನಿಮ್ಮ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಲು ಪ್ರಾರಂಭಿಸಿದರೆ, ನೀವು ಅದನ್ನು ನಿರ್ಲಕ್ಷಿಸಬಾರದು. ಏಕೆಂದರೆ ಅದರಿಂದ ಉಂಟಾಗುವ ಹಾನಿಯು ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದರೆ ಹೆಚ್ಚು ಮೊಬೈಲ್ ಬಳಸುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ತಿಳಿಯೋಣ. 


COMMERCIAL BREAK
SCROLL TO CONTINUE READING

ಕಣ್ಣುಗಳಿಗೆ ಸಾಕಷ್ಟು ಹಾನಿ:
ಅತಿಯಾದ ಮೊಬೈಲ್ ಬಳಕೆಯಿಂದ (Mobile Side Effects) ಕಣ್ಣುಗಳಿಗೆ ಹಾನಿಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಣ್ಣುಗಳು ಬಹಳ ಸೂಕ್ಷ್ಮವಾಗಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀಲಿ ಪರದೆಯು ಕಣ್ಣುಗಳಿಗೆ ಹಾನಿ ಮಾಡುತ್ತದೆ. ಬಿಡುವಿಲ್ಲದೇ ಹೆಚ್ಚು ಮೊಬೈಲ್ ಬಳಸಿದರೆ ಕಣ್ಣು ನೋವು, ತಲೆನೋವು ಕೂಡ ಬರುತ್ತದೆ. ಆದ್ದರಿಂದ ನೀವು ಮೊಬೈಲ್ ಬಳಸುವಾಗ ವಿರಾಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.  


ಇದನ್ನೂ ಓದಿ- Airtel: ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಡೇಟಾ ಪ್ಲಾನ್, Disney+ Hotstar, Amazon Prime ಕೂಡ ಫ್ರೀ


ಮಣಿಕಟ್ಟಿನಲ್ಲಿ ನೋವು ಪ್ರಾರಂಭವಾಗುತ್ತದೆ:
ದೀರ್ಘಕಾಲ ಮೊಬೈಲ್ (Mobile) ಬಳಸುವುದರಿಂದ ನಿಮ್ಮ ಮಣಿಕಟ್ಟು ಕೂಡ ನೋಯಲಾರಂಭಿಸುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ನಿಮ್ಮ ಮಣಿಕಟ್ಟಿನಲ್ಲಿ ಮರಗಟ್ಟುವಿಕೆ ಕಂಡುಬಂದರೆ, ಇದು ಎಚ್ಚರಿಕೆಯ ಗಂಟೆ ಎಂದು ಅರ್ಥಮಾಡಿಕೊಳ್ಳಿ. ಆ ಸಂದರ್ಭದಲ್ಲಿ ನೀವು ಗಮನ ಹರಿಸಬೇಕು. ಏಕೆಂದರೆ ನೀವು ಸಮಯಕ್ಕೆ ಗಮನ ಕೊಡದಿದ್ದರೆ, ನಿಮ್ಮ ತೊಂದರೆ ಹೆಚ್ಚಾಗಬಹುದು.


ಇದನ್ನೂ ಓದಿ- Latest YouTube News: ಬೇರೆಯವರು ತಯಾರಿಸಿದ ವಿಡಿಯೋಗಳನ್ನು ಬಳಸಿ YouTube ಮೇಲೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ ಜನ! ಹೇಗೆ? ನೀವೂ ತಿಳಿದುಕೊಳ್ಳಿ


ಮುಖದ ಮೇಲೆ ಮೊಡವೆ:
ಹೆಚ್ಚು ಮೊಬೈಲ್ ಬಳಸುವುದರಿಂದ ನಿಮ್ಮ ಮುಖದಲ್ಲಿ ಮೊಡವೆಗಳು ಉಂಟಾಗಬಹುದು ಎಂಬುದು ಕೆಲವೇ ಜನರಿಗೆ ತಿಳಿದಿರುತ್ತದೆ. ಮೊಬೈಲ್‌ಗಳು ನಿಮ್ಮ ಚರ್ಮದ ಮೇಲೆ ಬರಬಹುದಾದ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ ಎಂದು ಅನೇಕ ಸಂಶೋಧನೆಗಳಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಎಚ್ಚರದಿಂದಿರಬೇಕು. ಇದಕ್ಕಾಗಿ ಅತಿಯಾಗಿ ಮೊಬೈಲ್ ಬಳಸದೆ ಅಗತ್ಯವಿದ್ದಾಗ ಮಾತ್ರ ಹಿತ, ಮಿತವಾಗಿ ಮೊಬೈಲ್ ಬಳಸಿ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ.


ಸೂಚನೆ:  ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ