Whatsapp Update: WhatsApp ಜಾರಿಗೆ ತರುತ್ತಿದೆ ವಿಭಿನ್ನ ವೈಶಿಷ್ಟ್ಯ!

WhatsApp Emoji Shortcuts: ವಾಟ್ಸಾಪ್ ಇತ್ತೀಚೆಗೆ ಹೊಸ ಅಪ್‌ಡೇಟ್ (WhatsApp Latest Features) ಅನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಎಮೋಜಿಯನ್ನು ಕಳುಹಿಸಲು ನಿಮಗೆ ಹೊಸ ಮಾರ್ಗವನ್ನು ನೀಡಲಾಗುತ್ತಿದೆ. ಈ ನವೀಕರಣದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Feb 18, 2022, 08:54 PM IST
  • ತನ್ನ ಬಳಕೆದಾರರಿಗೆ ಹೊಸ ನವೀಕರಣ ನೀಡಲು ಮುಂದಾದ ವಾಟ್ಸ್ ಆಪ್
  • ಈ ನವೀಕರಣದ ಅದು ಎಮೊಜಿ ಕಳುಹಿಸುವ ಹೊಸ ವಿಧಾನ ಸೂಚಿಸಲಾಗುವುದು
  • ಈ ಬಳಕೆದಾರರಿಗಾಗಿ ಈಗಾಗಲೇ ಈ ವೈಶಿಷ್ಟ್ಯ ಬಿಡುಗಡೆ ಮಾಡಲಾಗಿದೆ.
Whatsapp Update: WhatsApp ಜಾರಿಗೆ ತರುತ್ತಿದೆ ವಿಭಿನ್ನ ವೈಶಿಷ್ಟ್ಯ! title=
WhatsApp Emoji Shortcuts (File Photo)

ನವದೆಹಲಿ: Latest WhatsApp News - ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾದ WhatsApp ಕಾಲಕಾಲಕ್ಕೆ ಹೊಸ ನವೀಕರಣಗಳನ್ನು (WhatsApp Features) ಬಿಡುಗಡೆ ಮಾಡುತ್ತಲೇ ಇರುತ್ತದೆ. ಇಂದು ನಾವು ನಿಮಗೆ ಮುಂಬರುವ WhatsApp ಅಪ್‌ಡೇಟ್ ಕುರಿತು ಮಾಹಿತಿ ನೀಡಲಿದ್ದೇವೆ, ಇದರ ಅಡಿ ನೀವು ಎಮೋಜಿಯನ್ನು ಹಂಚಿಕೊಳ್ಳಲು ವಿಭಿನ್ನ ಮಾರ್ಗವನ್ನು ಪಡೆಯುತ್ತೀರಿ. ಈ ಅಪ್‌ಡೇಟ್‌ನಲ್ಲಿ ನಿಮಗೆ ಎಮೋಜಿ ಶಾರ್ಟ್‌ಕಟ್‌ಗಳನ್ನು (WhatsApp Emojis) ನೀಡಲಾಗುತ್ತದೆ. ಈ ಹೊಸ ಅಪ್‌ಡೇಟ್ ಮತ್ತು ಈ ವೈಶಿಷ್ಟ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ವಾಟ್ಸಾಪ್‌ನಲ್ಲಿ ಎಮೋಜಿಯನ್ನು ಹೇಗೆ ಕಳುಹಿಸಲಾಗುತ್ತದೆ?
ವರದಿಗಳ ಪ್ರಕಾರ, WhatsApp ಹೊಸ ಅಪ್‌ಡೇಟ್‌ನೊಂದಿಗೆ ಬರುತ್ತಿದೆ, ಇದರಲ್ಲಿ ನಿಮಗೆ ಎಮೋಜಿಯನ್ನು ಬಳಸಲು ಹೊಸ ಎಮೋಜಿ ಶಾರ್ಟ್‌ಕಟ್‌ಗಳನ್ನು ನೀಡಲಾಗುತ್ತದೆ. ನೀವು ಕೂಡ ಒಂದು ವೇಳೆ ಎಮೋಜಿಯನ್ನು ಬಳಸುತ್ತಿದ್ದರೆ ಮತ್ತು ನೀವು ಇತ್ತೀಚೆಗೆ ಬಳಸಿದ ಎಮೋಜಿಯಲ್ಲಿಲ್ಲದ ಎಮೋಜಿಯನ್ನು ಬಳಸಿಕೊಂಡು ಯಾರೊಂದಿಗಾದರೂ ಚಾಟ್ ಮಾಡುತ್ತಿದ್ದರೆ, ನೀವು ಸಾಮಾನ್ಯವಾಗಿ ಎಮೋಜಿ ವಿಭಾಗಕ್ಕೆ ಹೋಗಿ ಮತ್ತು ಎಮೋಜಿ ಕೀವರ್ಡ್‌ಗಳನ್ನು ಟೈಪ್ ಮಾಡಬೇಕು ಅಷ್ಟೇ.

ಇದನ್ನೂ ಓದಿ-ಕೇವಲ 800 ರೂ. ಗೆ ಖರೀದಿಸಿ Motorola ಸ್ಮಾರ್ಟ್ ಫೋನ್

ಎಮೋಜಿ ಶಾರ್ಟ್‌ಕಟ್ ವೈಶಿಷ್ಟ್ಯ
WABetaInfo ನ ವರದಿಯ ಪ್ರಕಾರ ನೀವು ಈಗ ಸಂದೇಶ ಕಳುಹಿಸುವಾಗ ಎಮೋಜಿಯನ್ನು ಹುಡುಕಲು ಬಯಸಿದರೆ, ಅದಕ್ಕಾಗಿ ನೀವು ಎಮೋಜಿ ವಿಭಾಗಕ್ಕೆ ಹೋಗಬೇಕಾಗಿಲ್ಲ. ಈಗ ನೀವು ನಿಮ್ಮ ಸಂದೇಶ ಟೈಪಿಂಗ್ ಬಾಕ್ಸ್‌ನಲ್ಲಿಯೇ ಕೀವರ್ಡ್‌ಗಳನ್ನು ನಮೂದಿಸುವ ಮೂಲಕ ಮತ್ತು ಗೋಚರಿಸುವ ಶಾರ್ಟ್‌ಕಟ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಯ್ಕೆಯ ಎಮೋಜಿಯನ್ನು ನಮೂದಿಸಬಹುದು.

ಇದನ್ನೂ ಓದಿ-Flipkart Sale: Vivo 5G ಫೋನ್ ಮೇಲೆ ಪಡೆಯಿರಿ ಭರ್ಜರಿ 24,000 ರೂ.ಗಳ ರಿಯಾಯಿತಿ

ಈ ವೈಶಿಷ್ಟ್ಯವನ್ನು ಯಾರು ಪಡೆಯಲಿದ್ದಾರೆ?
ವಾಟ್ಸಾಪ್‌ನ ಡೆಸ್ಕ್‌ಟಾಪ್ ಆವೃತ್ತಿ ಅಂದರೆ WhatsApp ವೆಬ್‌ಗಾಗಿ ವಾಟ್ಸಾಪ್ ಕೆಲವು ಸಮಯದ ಹಿಂದೆ ಎಮೋಜಿ ಶಾರ್ಟ್‌ಕಟ್‌ಗಳ ಈ ವೈಶಿಷ್ಟ್ಯವನ್ನು ಬಿಡುಗಡೆ. ಅಲ್ಲದೆ, ಈ ಹೊಸ ನವೀಕರಣವನ್ನು WhatsApp ನ ಎಲ್ಲಾ ಬೀಟಾ ಬಳಕೆದಾರರಿಗೆ ಸಹ ಹೊರತರಲಾಗಿದೆ. ಈ ವೈಶಿಷ್ಟ್ಯವನ್ನು ಬಳಸಲು, ನೀವು WhatsApp ಬೀಟಾವನ್ನು ಹೊಂದಿರಬೇಕು ಮತ್ತು ನಿಮ್ಮ WhatsApp ಬೀಟಾವನ್ನು ಇತ್ತೀಚಿನ ಆವೃತ್ತಿಗೆ ನೀವು ನವೀಕರಿಸಬೇಕು.

ಇದನ್ನೂ ಓದಿ-ಜಿಯೋ, ಏರ್‌ಟೆಲ್‌ನ ನಿದ್ದೆಗೆಡಿಸಿದೆ ವೊಡಾಫೋನ್ ಐಡಿಯಾದ ಈ ಪ್ಲಾನ್, ಗ್ರಾಹಕರಿಗೆ ಸಿಗಲಿದೆ ಭರ್ಜರಿ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News