Latest YouTube News: ಬೇರೆಯವರು ತಯಾರಿಸಿದ ವಿಡಿಯೋಗಳನ್ನು ಬಳಸಿ YouTube ಮೇಲೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ ಜನ! ಹೇಗೆ? ನೀವೂ ತಿಳಿದುಕೊಳ್ಳಿ

Earn Money From YouTube - ಒಂದು ವೇಳೆ ನೀವೂ ಕೂಡ ಮನಯಲ್ಲಿಯೇ ಕುಳಿತು ಲಕ್ಷಾಂತರ ರೂ. ಸಂಪಾದಿಸಲು ಬಯಸುತ್ತಿದ್ದರೆ, ನಿಮ್ಮ ಆಸೆಯನ್ನು ನೀವು ಯೂಟ್ಯೂಬ್ ಮೂಲಕ ಪೂರೈಸಿಕೊಳ್ಳಬಹುದು. ಯೂಟ್ಯೂಬ್ ನಿಂದ ಹಣಗಳಿಕೆ (YouTube Get Paid) ಮಾಡಲು ನೀವು ವಿಡಿಯೋಗಳನ್ನು ಕೂಡ ತಯಾರಿಸಬೇಕಿಲ್ಲ. ಹೌದು, ಅಂತಹ ಒಂದು ಟ್ರಿಕ್ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. 

Written by - Nitin Tabib | Last Updated : Feb 20, 2022, 12:13 PM IST
  • ಯೂಟ್ಯೂಬ್ ನಲ್ಲಿ ನೀವು ಈ ರೀತಿ ಹಣ ಗಳಿಕೆ ಮಾಡಬಹುದು
  • ವಿಡಿಯೋ ತಯಾರಿಸದೆಯೂ ಕೂಡ ನೀವು ಹಣ ಗಳಿಕೆ ಮಾಡಬಹುದು.
  • ಇಲ್ಲಿದೆ ಸುಲಭ ವಿಧಾನ.
Latest YouTube News: ಬೇರೆಯವರು ತಯಾರಿಸಿದ ವಿಡಿಯೋಗಳನ್ನು ಬಳಸಿ YouTube ಮೇಲೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ ಜನ! ಹೇಗೆ? ನೀವೂ ತಿಳಿದುಕೊಳ್ಳಿ title=
Earn Money From YouTube (File Photo)

ನವದೆಹಲಿ: YouTube Earning Source - ಇಂದಿನ ಸಮಯದಲ್ಲಿ ಆನ್ಲೈನ್ ಪ್ಲಾಟ್ಫಾರ್ಮ್ ಮನರಂಜನೆಯ ಜೊತೆಗೆ ಹಣ ಗಳಿಕೆಯ ಸಾಧನವೂ ಆಗಿ ಕೂಡ ಮಾರ್ಪಟ್ಟಿದೆ. ಜನರು ಇನ್ಸ್ಟಾಗ್ರಾಮ್ ನಲ್ಲಿ ಬ್ರಾಂಡ್ ಗಳ ಜೊತೆಗೂಡಿ ಇದೀಗ ಹಣಗಳಿಕೆ ಮಾಡುತ್ತಿದ್ದಾರೆ. ಆದರೆ, ಇದಕ್ಕಿಂತಲೂ ಮುಂಚಿತವಾಗಿಯೇ ಯೂಟ್ಯೂಬ್ ಮೇಲೆ ಜನರು ಹಣಗಳಿಕೆ ಮಾಡುತ್ತಿದ್ದಾರೆ. ಯೂಟ್ಯೂಬ್ ನಲ್ಲಿ (YouTube) ವಿಡಿಯೋಗಳನ್ನು ತಯಾರಿಸಿ, ಅವುಗಳನ್ನು ಅಪ್ಲೋಡ್ ಮಾಡಿ ಜನ ಹಣಗಳಿಕೆ ಮಾಡುತ್ತಿದ್ದಾರೆ. ಇಂದು ನಾವು ನಿಮಗೆ ಹೇಳಲು ಹೊರಟಿರುವ ವಿಧಾನದಲ್ಲಿ ನಾವು ಸ್ವಂತ ವಿಡಿಯೋ (YouTube Videos) ತಯಾರಿಸದೆಯೂ ಕೂಡ ಹಣಗಳಿಕೆ ಮಾಡಬಹುದು. ಹಾಗಾದರೆ ಬನ್ನಿ ಯಾವುದು ಆ ವಿಧಾನ ತಿಳಿದುಕೊಳ್ಳೋಣ.

ಯೂಟ್ಯೂಬ್-ಹಣಗಳಿಕೆಯ ಒಂದು ಮಾಧ್ಯಮ  (YouTube Tips)
ಕಳೆದ ಹಲವಾರು ವರ್ಷಗಳಿಂದ ಯೂಟ್ಯೂಬ್ ಒಂದು ಹಣಗಳಿಕೆಯ ಜನಪ್ರಿಯ ಮಾಧ್ಯಮವಾಗಿದೆ ಎಂಬುದು ನಿಮಗೆ ತಿಳಿದಿರಬೇಕು. ಯೂಟ್ಯೂಬ್ ನಲ್ಲಿ ಹಣ ಸಂಪಾದಿಸಲು ನೀವು ಉಚಿತವಾಗಿ ಚಾನೆಲ್ ರಚಿಸಬೇಕು. ಇದರ ನಂತರ ವಿಡಿಯೋಗಳನ್ನು (YouTube Updating Videos) ನೀವು ನಿಮ್ಮ ಚಾನಲ್ ಗೆ ಅಪ್ಲೋಡ್ ಮಾಡಬೇಕು. ನೀವು ಅಪ್ಲೋಡ್ ಮಾಡಿರುವ ವಿಡಿಯೋಗಳನ್ನು ಎಷ್ಟು ಜನ ವೀಕ್ಷಿಸುತ್ತಿದ್ದಾರೆ, ಎಷ್ಟು ಜನ ಲೈಕ್ ಮಾಡುತ್ತಿದ್ದಾರೆ ಮತ್ತು ಎಷ್ಟು ಜನ ಲೈಕ್ ಮಾಡುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಯೂಟ್ಯೂಬ್ ನಿಮಗೆ ಹಣ ಪಾವತಿಸುತ್ತದೆ. ಹೀಗಾಗಿ ಪ್ರತಿ ತಿಂಗಳು ಲಕ್ಷಾಂತರ ರೂ. ಸಂಪಾದಿಸುವ ಅವಕಾಶ ನಿಮಗಿರುತ್ತದೆ.

ಇದನ್ನೂ ಓದಿ -SIM Swapping Scam: ಈ ಅಪಾಯಕಾರಿ ಸಿಮ್ ಕಾರ್ಡ್ ಹಗರಣದ ಬಗ್ಗೆ ಎಚ್ಚರದಿಂದಿರಿ! ಚಿಟಿಕೆಯಲ್ಲಿ ಕೈ ಖಾಲಿಯಾಗಬಹುದು!

ವಿಡಿಯೋ ತಯಾರಿಸದೆಯೇ ಹಣ ಹೇಗೆ ಸಂಪಾದಿಸಬೇಕು?
ಯೂಟ್ಯೂಬ್ (YouTube) ಮೇಲೆ ಹಣಗಳಿಕೆ ಮಾಡುವ ವಿಶಿಷ್ಟ ವಿಧಾನವೊಂದರ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ವಿಧಾನವನ್ನು ಬಳಸಿ ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಜನರು ಯೂಟ್ಯೂಬ್ ಮೇಲೆ ಹಣ ಸಂಪಾದನೆ ಮಾಡುತ್ತಿದ್ದಾರೆ. ಹಲವು ಜನರು ಇತರರು ತಯಾರಿಸಿದ ವಿಡಿಯೋಗಳನ್ನು ಬಳಸಿ ಅದರ ಬ್ಯಾಕ್ ಗ್ರೌಂಡ್ ಧ್ವನಿ ಮತ್ತು ಸಂಗೀತವನ್ನು ತೆಗೆದು, ಅದರ ಜಾಗಕ್ಕೆ ಬೇರೆ ಧ್ವನಿ ಹಾಗೂ ಸಂಗೀತ ಬಳಸಿ ತಮ್ಮ ಚಾನೆಲ್ ಗೆ ಅಪ್ಲೋಡ್ ಮಾಡುತ್ತಾರೆ. ಈ ರೀತಿ ಮಾಡಿದ ವಿಡಿಯೋಗಳನ್ನು ಯೂಟ್ಯೂಬ್ ಒರಿಜಿನಲ್ ವಿಡಿಯೋ ಅಂತಾನೆ ಪರಿಗಣಿಸುತ್ತದೆ ಹಾಗೂ ಈ ವಿಡಿಯೋ ಹಣಗಳಿಕೆಯ ಒಂದು ಮಾಧ್ಯಮವಾಗುತ್ತದೆ.

ಇದನ್ನೂ ಓದಿ-Instagram ನಲ್ಲಿ ಬರುತ್ತಿದೆ ಅದ್ಭುತ ವೈಶಿಷ್ಟ್ಯ! ಇಲ್ಲಿದೆ ಹೊಸ ಫೀಚರ್ ಬಗ್ಗೆ ಸಂಪೂರ್ಣ ಮಾಹಿತಿ

ನೀವೂ ಕೂಡ ಈ ರೀತಿಯ ವಿಡಿಯೋಗಳನ್ನು ತಯಾರಿಸಿ ಅವುಗಳನ್ನು ನಿಮ್ಮ ಚಾನೆಲ್ ಗೆ  ಅಪ್ಲೋಡ್ ಮಾಡಬಹುದು ಹಾಗೂ ನಿಧಾನಕ್ಕೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣಗಳಿಕೆ ಮಾಡಬಹುದು.

ಇದನ್ನೂ ಓದಿ-Itel: ಉತ್ತಮ ವೈಶಿಷ್ಟ್ಯಗಳೊಂದಿಗೆ 6ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ Itel ಸ್ಮಾರ್ಟ್‌ಫೋನ್ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News