Kaal Sarp Dosha ತುಂಬಾ ಅಪಾಯಕಾರಿ, ಸಂಕಷ್ಟದಲ್ಲಿಯೇ ಕಳೆದುಹೋಗುತ್ತೆ ಇಡೀ ಜೀವನ!
Kaal Sarp Dosh: ಜೋತಿಷ್ಯ ಶಾಸ್ತ್ರದಲ್ಲಿ ಕಾಲಸರ್ಪ ದೋಷವನ್ನು ಅತ್ಯಂತ ಅಶುಭ ಫಲಿತಾಂಶಗಳನ್ನು ನೀಡುವ ದೋಷ ಎಂದು ಪರಿಗಣಿಸಲಾಗಿದೆ. ವೃತ್ತಿಜೀವನ, ಬಿಸ್ನೆಸ್, ದಾಂಪತ್ಯ ಜೀವನ ಹಾಗೂ ಪ್ರೇಮ ಸಂಬಂಧಗಳಲ್ಲಿ ಇದು ಭಯಂಕರ ಕಷ್ಟಕ್ಕೆ ಕಾರಣವಾಗುತ್ತದೆ.
Kaal Sarp Dosh: ಯಾವುದೇ ಓರ್ವ ವ್ಯಕ್ತಿಗೆ ಈ ಕಾಲ ಸರ್ಪ ದೋಷ ಹಿಡಿದುಕೊಂಡರೆ. ಆ ವ್ಯಕ್ತಿಯ ಜೀವನವೇ ನರಕಾಗುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಕಾಲ ಸರ್ಪದೋಷದ ಕುರಿತು ಹೇಳಲಾಗಿದೆ. ಇಡೀ ಜೀವನವೇ ಸಂಘರ್ಷದಿಂದ ಕೂಡಿರುತ್ತದೆ ಮತ್ತು ಸರಿಯಾದ ಫಲಗಳು ಕೂಡ ಪ್ರಾಪ್ತಿಯಾಗುವುದಿಲ್ಲ. ವ್ಯಕ್ತಿ ಸದಾ ಯಾವುದಾರೊಂದು ಸಮಸ್ಯೆಗೆ ಸುಳಿಗೆ ಸಿಲುಕಿಕೊಳ್ಳುತ್ತಲೇ ಇರುತ್ತಾನೆ. ಕುಂಡಲಿ ಅಥವಾ ಜನ್ಮ ಜಾತಕದಲ್ಲಿ ಕಾಲ ಸರ್ಪ ದೋಷವಿದ್ದರೆ, ಅದು ದೀರ್ಘಾವಧಿಯವರೆಗೆ ಮುಂದುವರೆಯುತ್ತದೆ ಎನ್ನಲಾಗುತ್ತದೆ. ಪಾಪಿ ಗ್ರಹಗಳೆಂದು ಪರಿಗಣಿಸಲಾಗುವ ರಾಹು ಹಾಗೂ ಕೇತುಗಳಿಂದ ಈ ಕಾಲಸರ್ಪ ದೋಷ ನಿರ್ಮಾಣಗೊಳ್ಳುತ್ತದೆ. ಎಲ್ಲಾ ಗ್ರಹಗಳು ಈ ಎರಡು ಗ್ರಹಗಳ ಮಧ್ಯೆ ಬಂದರೆ, ಕಾಲಸರ್ಪ ದೋಷದ ಯೋಗ ನಿರ್ಮಾಣಗೊಳ್ಳುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ವಿವಿಧ ಬಗೆಯ ಕಾಲಸರ್ಪದೋಷಗಳ ಕುರಿತು ಉಲ್ಲೇಖಿಸಲಾಗಿದೆ.
ಕಾಲಸರ್ಪ ದೋಷದ ಪ್ರಕಾರಗಳು
1. ಅನಂತ ಕಾಲಸರ್ಪ ದೋಷ
2. ಕುಲಿಕ ಕಾಲಸರ್ಪ ದೋಷ
3. ವಾಸುಕಿ ಕಾಲಸರ್ಪ ದೋಷ
4. ಶಂಖಪಾಲ ಕಾಲಸರ್ಪ ದೋಷ
5. ಪದಮ ಕಾಲಸರ್ಪ ದೋಷ
6. ಮಹಾಪದಮ ಕಾಲಸರ್ಪ ದೋಷ
7. ತಕ್ಷಕ ಕಾಲಸರ್ಪ ದೋಷ
8. ಕಕರೋಟ ಕಾಲಸರ್ಪ ದೋಷ
9. ಶಂಖಚೂಡ ಕಾಲಸರ್ಪ ದೋಷ
10. ಘಾತಕ ಕಾಲಸರ್ಪ ದೋಷ
11. ವಿಷಧರ ಕಾಲಸರ್ಪ ದೋಷ
12..ಶೇಷನಾಗ ಕಾಲಸರ್ಪ ದೋಷ
ಕಾಲಸರ್ಪ ದೋಷದ ಲಕ್ಷಣಗಳು ಮತ್ತು ಅದರ ಉಪಾಯಗಳು
ಜನ್ಮ ಜಾತಕದಲ್ಲಿರುವ ಕಾಲ ಸರ್ಪದೋಷವನ್ನು ಸುಲಭವಾಗಿ ಪತ್ತೆಹಚ್ಚಬಹುದು. ಒಂದೊಮ್ಮೆ ಇದು ಪತ್ತೆಯಾದರೆ ತಕ್ಷಣವೇ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.
>> ಶಿಕ್ಷಣದಲ್ಲಿ ಅಡಚಣೆ
>> ಕೆಲಸ ಸಿಗುವುದಿಲ್ಲ
>> ಕಷ್ಟಪಟ್ಟು ದುಡಿದರು ಕೂಡ ವ್ಯಾಪಾರದಲ್ಲಿ ನಷ್ಟ
>> ಮನೆಯಲ್ಲಿ ತಂದೆ-ತಾಯಿ ಮತ್ತು ಹಿರಿಯರೊಂದಿಗೆ ವೈಮನಸ್ಸು
>> ತಪ್ಪು ಜನರೊಂದಿಗೆ ಸ್ನೇಹ
>> ಮನಸ್ಸಿನಲ್ಲಿ ಯಾವಾಗಲೂ ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವುದು
>> ನಿಮ್ಮನ್ನು ನೀವೇ ವಿಫಲ ಎಂದು ಪರಿಗಣಿಸುವುದು
>> ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿರುವುದು
>> ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮತ್ತು ಒತ್ತಡ
>> ಸಂತಾತೊತ್ಪತ್ತಿಯಲ್ಲಿ ಅಡಚಣೆ
>> ಪ್ರೇಮ ಸಂಬಂಧಗಳಲ್ಲಿ ಅಡೆತಡೆಗಳು ಮತ್ತು ತೊಂದರೆಗಳು
ಇದನ್ನೂ ಓದಿ-ಜೀವನದಲ್ಲಿನ ಕೆಟ್ಟ ದಿನಗಳು ಆರಂಭದ ಮುನ್ಸೂಚನೆ ನೀಡುತ್ತವೆ ಈ ಘಟನೆಗಳು!
ಕಾಲಸರ್ಪ ದೋಷವನ್ನು ಹೇಗೆ ನಿವಾರಿಸಬೇಕು
ಒಂದೊಮ್ಮೆ ಇದು ಕುಂಡಲಿಯಲ್ಲಿದೆ ಎಂದು ಪತ್ತೆಯಾದರೆ, ಅದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ದೇವಾಧಿದೇವ ಮಹಾದೇವನಿಗೆ ಪೂಜೆ ಸಲ್ಲಿಸಿದರೆ ಈ ದೋಷದ ಪ್ರಭಾವ ಕಡಿಮೆಯಾಗುತ್ತದೆ. ಈ ದೋಷದಿಂದ ಪಾರಾಗಲು ಶ್ರಾವಣಮಾಸದ ಪ್ರತಿಯೊಂದು ಸೋಮವಾರ ಶಿವನಿಗೆ ಜಲಾಭಿಷೇಕ ಮಾಡಬೇಕು ಹಾಗೂ ಕೆಳಗೆ ನೀಡಲಾಗಿರುವ ಮಂತ್ರವನ್ನು ಪಠಿಸಬೇಕು.
ಇದನ್ನೂ ಓದಿ-ಜೀವನದಲ್ಲಿ ಕಷ್ಟಗಳು ನಿವಾರಣೆಯಾಗಿ ಸಿರಿ-ಸಂಪತ್ತು ನಿಮ್ಮದಾಗಬೇಕೆ? ಇಲ್ಲಿವೆ ಟಿಪ್ಸ್!
1. ಓಂ ನಮಃ ಶಿವಾಯ
2. ಓಂ ನವಕುಲಾಯ ವಿಘ್ಮಯೇ ವಿಷದಂತಾಯ ಧೀಮಹಿ, ತನ್ನೋ ಸರ್ಪ ಪ್ರಚೋದಯಾತ್
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.