ಕಾರ್ತಿಕ ಹುಣ್ಣಿಮೆಯ ದಿನ ಏರ್ಪಡಲಿದೆ ಶುಭ ಸಂಯೋಗ, ಈ ಮುಹೂರ್ತದಲ್ಲಿ ಪೂಜೆ ಮಾಡಿದರೆ ಆಗಲಿದೆ ಧನಲಾಭ
ಕಾರ್ತಿಕ ಹುಣ್ಣಿಮೆಯ ದಿನದಂದು ನೆರವೇರಿಸುವ ತುಳಸಿ ಪೂಜೆಗೆ ಹೆಚ್ಚಿನ ಮಹತ್ವವಿದೆ.
ನವದೆಹಲಿ : ಇಂದು ಕಾರ್ತಿಕ ಹುಣ್ಣಮೆ (Kartika Poornima). ಇಂದೇ ವರ್ಷದ ಕೊನೆಯ ಚಂದ್ರಗ್ರಹಣ (Lunar eclipse) ಕೂಡಾ ಸಂಭವಿಸಲಿದೆ. ಆದರೆ ಕಾರ್ತಿಕ ಹುಣ್ಣಿಮೆಯಂದು, ವಿಶೇಷ ಯೋಗ ಕೂಡ ರೂಪುಗೊಳ್ಳುತ್ತಿದೆ. ಇದು ತುಂಬಾ ಮಂಗಳಕರವಾಗಿದೆ. ಹೌದು ಇಂದು ಅಂದರೆ ಕಾರ್ತಿಕ ಹುಣ್ಣಿಮೆಯಂದು ಶಿವಯೋಗವು ರೂಪುಗೊಳ್ಳುತ್ತಿದೆ. ಇದನ್ನು ಜ್ಯೋತಿಷ್ಯದಲ್ಲಿ (Astrology) ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಶಿವಯೋಗದಲ್ಲಿ (Shiva Yoga) ಮಾಡುವ ಪೂಜೆಯೂ ಕೂಡಾ ಹೆಚ್ಚು ಫಲ ನೀಡುತ್ತದೆ. ನಂಬಿಕೆಗಳ ಪ್ರಕಾರ ಕಾರ್ತಿಕ ಹುಣ್ಣಿಮೆಯ ದಿನ ತುಳಸಿ ಪೂಜೆ (Tulsi pooja) ಮಾಡಬೇಕು ಮತ್ತು ದೀಪ ಹಚ್ಚಬೇಕು.
ಈ ದಿನ ತುಳಸಿ ಪೂಜೆ ಮಾಡಬೇಕು :
ಕಾರ್ತಿಕ ಹುಣ್ಣಿಮೆಯ ದಿನದಂದು ನೆರವೇರಿಸುವ ತುಳಸಿ ಪೂಜೆಗೆ (Tulsi pooja) ಹೆಚ್ಚಿನ ಮಹತ್ವವಿದೆ. ಭಗವಾನ್ ವಿಷ್ಣುವು ನಾಲ್ಕು ತಿಂಗಳ ಚಾತುಮಾಸ್ಯದ ನಂತರ ಕಾರ್ತಿಕ ಮಾಸದ ಏಕಾದಶಿಯಂದು ಎಚ್ಚರಗೊಳ್ಳುತ್ತಾನೆ ಎನ್ನುವುದು ನಂಬಿಕೆ. ಇದಾದ ನಂತರ ತುಳಸೀ ಜೊತೆ ವಿಷ್ಣುವಿನ (Lord Vishnu) ವಿವಾಹವಾಗುತ್ತದೆ. ಕಾರ್ತಿಕ ಹುಣ್ಣಿಮೆಯ ದಿನವೇ ತುಳಸಿ ಭೂಮಿಯ ಮೇಲೆ ಅವತರಿಸಿ ಬಂದಿದ್ದಳು ಎಂದು ಕೂಡಾ ಧರ್ಮ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಕಾರಣದಿಂದ ಇಂದು ತುಳಸಿ ಮತ್ತು ವಿಷ್ಣುವನ್ನು ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು (Godess Lakshmi) ಸಂತುಷ್ಟಳಾಗುತ್ತಾಳೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ಹರಸುತ್ತಾಳೆ. ಪುರಾಣಗಳ ಪ್ರಕಾರ ತುಳಸಿ ಲಕ್ಚ್ಮೀ ದೇವಿಯ ರೂಪವಾಗಿದೆ. ಇಂದು ಚಂದ್ರಗ್ರಹಣವಿದ್ದರೂ, ಇದು ಭಾಗಶಃ ಚಂದ್ರಗ್ರಹಣವಾಗಿರುವುದರಿಂದ (Lunar eclipse) ಅದರ ಸೂತಕ ಕಾಲವು ಮಾನ್ಯವಾಗುವುದಿಲ್ಲ. ಹಾಗಾಗಿ ಕಾರ್ತಿಕ ಹುಣ್ಣಿಮೆಯ ಪೂಜೆಯ ಮೇಲೆ ಚಂದ್ರಗ್ರಹಣದ ಪರಿಣಾಮವು ಇರುವುದಿಲ್ಲ.
ಇದನ್ನೂ ಓದಿ : New year 2022: ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರಿಗಿದೆ ವಿವಾಹ ಯೋಗ
ಕಾರ್ತಿಕ ಹುಣ್ಣಿಮೆಯ ಪೂಜೆಗೆ ಶುಭ ಸಮಯ :
ಕಾರ್ತಿಕ ಮಾಸದ ಹುಣ್ಣಿಮೆ ದಿನಾಂಕ ನವೆಂಬರ್ 18 ರಂದು ಮಧ್ಯಾಹ್ನ 12:01 ರಿಂದ ಪ್ರಾರಂಭವಾಗಿದೆ. ನವೆಂಬರ್ 19 ಅಂದರೆ ಇಂದು ಮಧ್ಯಾಹ್ನ 02:28 ರವರೆಗೆ ಇರುತ್ತದೆ. ಇಂದು ಸೂರ್ಯಾಸ್ತದವರೆಗೆ ದಾನದ ಕೆಲಸವನ್ನು ಮಾಡಬಹುದು. ಮಧ್ಯಾಹ್ನದವರೆಗೆ ಪೂಜೆಯ ಶುಭ ಮುಹೂರ್ತ ಇರುತ್ತದೆ. ಮತ್ತೊಂದೆಡೆ, ಈ ದಿನದಂದು ದಾನ ಮಾಡುವುದರಿಂದ ಜೀವನದಲ್ಲಿ ಹಣದ ಕೊರತೆ ಕೊನೆಗೊಳ್ಳುತ್ತದೆ. ಮತ್ತೊಂದೆಡೆ, ತುಳಸಿ ಪೂಜೆಯಿಂದ (Tulsi pooja), ರೋಗಗಳು ಮತ್ತು ತೊಂದರೆಗಳು ದೂರವಾಗುತ್ತವೆ. ಇದರೊಂದಿಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಇದನ್ನೂ ಓದಿ : Budhaditya Yoga: ಈ ಮೂರು ರಾಶಿಯವರಿಗೆ ತುಂಬಾ ಶುಭ ಫಲಗಳನ್ನು ನೀಡಲಿದೆ ಬುಧಾದಿತ್ಯ ಯೋಗ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.