Vastu Tips: ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲು ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿಯ ಆಶೀರ್ವಾದದ, ಕುಬೇರನ ಕೃಪೆಯ ಜೊತೆಗೆ ಅದೃಷ್ಟದ ಬೆಂಬಲವೂ ಅಗತ್ಯ. ವಾಸ್ತು ಪ್ರಕಾರ, ಮನೆಯ ದೇವರ ಕೋಣೆಯಲ್ಲಿ ಇಡುವ ಒಂದು ಪವಿತ್ರ ವಸ್ತುವಿನಿಂದ ವ್ಯಕ್ತಿಯ ಮಲಗಿರುವ ಅದೃಷ್ಟವೂ ಎಚ್ಚರಗೊಳ್ಳುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರ ಎರಡಲ್ಲೂ ಮನೆಯ ಪೂಜಾ ಕೋಣೆಗೆ ಬಹಳ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಕೋಣೆಯಲ್ಲಿ ಶಂಖವನ್ನು ಇಡುವುದರಿಂದ ಕುಬೇರನ ಕೃಪೆಯಿಂದ ಮನೆಯಲ್ಲಿ ಸದಾ ಸಂಪತ್ತು ತುಂಬಿರುತ್ತದೆ ಏನು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಧರ್ಮ ಗ್ರಂಥಗಳಲ್ಲಿ ಶಂಖವನ್ನು ಪವಿತ್ರವಾದ ವಸ್ತು ಎಂದು ಪರಿಗಣಿಸಲಾಗಿದೆ. ಹಾಗಾಗಿಯೇ, ಯಾವುದೇ ಪೂಜೆ, ಧಾರ್ಮಿಕ ಆಚರಣೆಗಳಲ್ಲಿ ಶಂಖವನ್ನು ಊದಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಶಂಖವನ್ನು ಊದುವುದರಿಂದ ದುಷ್ಟ ಶಕ್ತಿಗಳು ಮನೆಯಿಂದ ಹೊರಹೋಗುತ್ತವೆ. ಮಾತ್ರವಲ್ಲ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ ಎಂಬ ನಂಬಿಕೆ ಇದೆ. 


ವಾಸ್ತು ಶಾಸ್ತ್ರದ ಪ್ರಕಾರ, ಶಂಖದ ಕೆಲವು ಪರಿಹಾರಗಳು ಅದೃಷ್ಟದ ಜೊತೆಗೆ ಕುಬೇರನ ಆಶೀರ್ವಾದವನ್ನೂ ನೀಡಲಿದೆ ಎಂದು ನಂಬಲಾಗಿದೆ. ಆ ಪರಿಹಾರಗಳು ಯಾವುವುವು ಎಂದು ತಿಳಿಯೋಣ...


ಇದನ್ನೂ ಓದಿ- ಜಾತಕದಲ್ಲಿ ಶನಿ-ರಾಹು-ಕೇತುಗಳನ್ನು ಬಲಪಡಿಸಲು ಸುಲಭ ಪರಿಹಾರ


ಆರ್ಥಿಕ ಮುಗ್ಗಟ್ಟು:
ವಾಸ್ತು ಪ್ರಕಾರ, ಸಾಲ, ಆರ್ಥಿಕ ಸಂಕಷ್ಟ ಮುಂತಾದ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ಪಡೆಯಲು ನಿಯಮಾನುಸಾರ ದೇವರ ಕೋಣೆಯಲ್ಲಿ ದಕ್ಷಿಣಾವರ್ತಿ ಶಂಖವನ್ನು ಸ್ಥಾಪಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದಕ್ಷಿಣಾವರ್ತಿ ಶಂಖ ಇರುವ ಮನೆಯಲ್ಲಿ ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿ ಮತ್ತು ಕುಬೇರ ಇಬ್ಬರೂ ಶಾಶ್ವತವಾಗಿ ನೆಲೆಸುತ್ತಾರೆ ಎಂಬ ನಂಬಿಕೆಯಿದೆ.


ಲಕ್ಷ್ಮಿ ಮತ್ತು ಕುಬೇರನ ಆಶೀರ್ವಾದ ಪಡೆಯಲು:
ಯಾವ ಮನೆಯಲ್ಲಿ ಪೂಜೆಯ ಸಮಯದಲ್ಲಿ ಶಂಖನಾದ ಕೇಳಿ ಬರುತ್ತದೋ ಅಂತಹ ಕುಟುಂಬದ ಮೇಲೆ ಮಾತೇ ಲಕ್ಷ್ಮಿ ಮತ್ತು ಕುಬೇರನ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಲಾಗುತ್ತದ.e 


ಖಜಾನೆ ತುಂಬಲು:
ವಾಸ್ತು ಪ್ರಕಾರ, ಮನೆಯಲ್ಲಿ ಎಂದಿಗೂ ಕೂಡ ಖಾಲಿ ಶಂಖವನ್ನು ಇಡಬಾರದು. ಶಂಖ ಇಡುವ ಸ್ಥಳದಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಶಂಖವನ್ನು ಸ್ಥಾಪಿಸಬೇಕು. ಇದರಿಂದ ನಿಮ್ಮ ಖಜಾನೆ ಸದಾ ತುಂಬಿರುತ್ತದೆ ಎನ್ನಲಾಗುವುದು.


ಇದನ್ನೂ ಓದಿ- ಶುಕ್ರ ಗೋಚರದಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ಸೃಷ್ಟಿ- ತುಂಬಲಿದೆ ಈ ರಾಶಿಯವರ ಖಜಾನೆ


ವಾಸ್ತು ದೋಷ ನಿವಾರಣೆ:
ಮನೆಯಲ್ಲಿ ವಾಸ್ತು ದೋಷ ನಿವಾರಣೆಗಾಗಿ ಶಂಖವನ್ನು ಊದಿದ ನಂತರ ಅದನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದರ ನಂತರ, ಇಡೀ ಮನೆಯಲ್ಲಿ ಪವಿತ್ರ ಜಲವನ್ನು ಸಿಂಪಡಿಸಬೇಕು. ಇದರಿಂದ ವಾಸ್ತು ದೋಷ ನಿವಾರಣೆ ಆಗುವ ಜೊತೆಗೆ ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.