Garuda Purana Importance: ಯಾವುದೇ ವ್ಯಕ್ತಿಯ ಜೀವನದಲ್ಲಿ ಓರ್ವ ವ್ಯಕ್ತಿಯ ಸ್ಥಾನ ಪ್ರಮುಖವಾಗಿರುತ್ತದೆ ಎಂದರೆ ಅದು ಅವನ ಬಾಳ ಸಂಗಾತಿ ಎನ್ನಲಾಗಿದೆ. ಸರಿಯಾದ ಬಾಳಸಂಗಾತಿ ವ್ಯಕ್ತಿಯ ಬದುಕು ಹಸನಾಗಿಸುತ್ತಾರೆ. ಅವರಲ್ಲಿ ಯಾವುದಾದರು ನ್ಯೂನ್ಯತೆಗಳಿದ್ದರೆ ಅದರಿಂದ ವ್ಯಕ್ತಿಯ ಜೀವನವೇ ಹಾಳಾಗುತ್ತದೆ. ಗರುಡ ಪುರಾಣದಲ್ಲಿ, ಒಳ್ಳೆಯ ಮತ್ತು ಕೆಟ್ಟ ಬಾಳ ಸಂಗಾತಿಯ ಬಗ್ಗೆ ಹಲವು ವಿಷಯಗಳನ್ನು ಹೇಳಲಾಗಿದೆ. ಇದರ ಪ್ರಕಾರ, ಪತಿ ಮತ್ತು ಪತ್ನಿಯರ ನಡುವಿನ ಸಂಬಂಧವು ಪ್ರೀತಿ ಮತ್ತು ವಿಶ್ವಾಸದ ಮೇಲೆ ನಿಂತಿರುತ್ತದೆ. ಇಬ್ಬರಲ್ಲಿ ಯಾರಾದರೂ ಅದನ್ನು ಅನುಸರಿಸದಿದ್ದರೆ ಅಥವಾ ಅವುಗಳಿಂದ ದೂರವಿರಲು ಪ್ರಯತ್ನಿಸಿದರೆ, ಆಗ ಇಡೀ ಸಂಸಾರದ ಬಂಡಿಯೇ ಹಳಿ ತಪ್ಪಬಹುದು. ಇಂತಹ ಪರಿಸ್ಥಿತಿಯಲ್ಲಿ ಜೀವನ ಸಂಗಾತಿಯಲ್ಲಿ ಇಂತಹ ಕೆಟ್ಟ ಚಟಗಳಿದ್ದರೆ, ಅವರಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅವಮಾನ
ಪತಿ ಹಾಗೂ ಪತ್ನಿಯರು ಇಬ್ಬರೂ ಪ್ರರಸ್ಪರರನ್ನು ಗೌರವಿಸಬೇಕು. ಇಬ್ಬರಲ್ಲಿ ಯಾರಾದರೂ ಒಬ್ಬರನ್ನೊಬ್ಬರು ಅವಮಾನಿಸಿದರೆ, ಅಂತಹ ಜೀವನ ಸಂಗಾತಿಯಿಂದ ಬೇರೆಯಾಗುವುದು ಉತ್ತಮ. ಅವಮಾನಿಸುವ ಜೀವನ ಸಂಗಾತಿಯಿಂದ ಬೇರ್ಪಡಬೇಕು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ, ಏಕೆಂದರೆ ಅಂತಹ ಸಂಗಾತಿ ನಿಮ್ಮ ಕೆಟ್ಟ ಮತ್ತು ಒಳ್ಳೆಯ ಸಮಯದಲ್ಲಿ ಕ್ಷಣ ಕ್ಷಣಕ್ಕೂ ನಿಮ್ಮನ್ನು ಅವಮಾನಿಸುತ್ತಲೇ ಇರುತ್ತಾರೆ ಎನ್ನಲಾಗಿದೆ.


ಇದನ್ನೂ ಓದಿ-Valentine's Day 2023: ಸಂಗಾತಿಗೆ ಮರೆತೂ ಕೂಡ ಈ 5 ಉಡುಗೊರೆಗಳನ್ನು ಕೊಡಬೇಡಿ, ಇಲ್ದಿದ್ರೆ ಸಂಬಂಧದಲ್ಲಿ ಬಿರುಕು ತಪ್ಪಿದ್ದಲ್ಲ!


ಅತ್ತೆ ಮನೆ 
ಯಾವುದೇ ವ್ಯಕ್ತಿ, ಪುರುಷನಾಗಿರಲಿ ಅಥವಾ ಮಹಿಳೆಯಾಗಿರಲಿ. ಇಬ್ಬರೂ ಪರಸ್ಪರರ ಕುಟುಂಬ ಸದಸ್ಯರನ್ನು ಗೌರವಿಸಬೇಕು. ತನ್ನ ಅತ್ತೆಯನ್ನು ಅವಮಾನಿಸುವ ಅಥವಾ ಪ್ರತಿಯೊಂದು ವಿಷಯದಲ್ಲೂ ಅಸಭ್ಯ ಟೀಕೆಗಳನ್ನು ಮಾಡುವ ವ್ಯಕ್ತಿ. ಅಂತಹ ಪುರುಷ ಅಥವಾ ಮಹಿಳೆಯೊಂದಿಗೆ ಜೀವನವನ್ನು ಕಳೆಯಬಾರದು. ಹೀಗಾದರೆ ಜೀವನ ನರಕಾಗುತ್ತದೆ.


ಇದನ್ನೂ ಓದಿ-ಮಕರ ರಾಶಿಯಲ್ಲಿ ಪವರ್ಫುಲ್ ಬುಧಾದಿತ್ಯ ರಾಜಯೋಗ, 4 ರಾಶಿಗಳ ಜನರಿಗೆ ಬಂಪರ್ ಲಾಭ!


ದ್ರೋಹ
ಪತಿ-ಪತ್ನಿಯರ ಸಂಬಂಧ ಬಹಳ ಸೂಕ್ಷ್ಮವಾದುದು. ಅದು ನಂಬಿಕೆ ಎಂಬ ಸೂಕ್ಷ್ಮ ದಾರದಿಂದ ಬಂಧಿತವಾಗಿರುತ್ತದೆ. ಜೀವನದಲ್ಲಿ, ಜೀವನ ಸಂಗಾತಿ ಅಥವಾ ಅವನ/ಆಕೆಯ ಮಾತಿನ ಮೇಲೆ ನಂಬಿಕೆ ಇಲ್ಲದಿದ್ದರೆ, ಅಂತಹ ಸಂಬಂಧವನ್ನು ಉಳಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನಂಬಿಕೆಯಿಲ್ಲದ ಸಂಬಂಧವನ್ನು ಬಲವಂತವಾಗಿ ಎಳೆಯುವುದರಿಂದ ಜೀವನವು ನರಕದಂತೆ ಆಗುತ್ತದೆ. ಗರುಡ ಪುರಾಣದ ಪ್ರಕಾರ, ನಿಮ್ಮ ಸಂಗಾತಿಯು ವಿಶ್ವಾಸದ್ರೋಹಿಯಾಗಿದ್ದರೆ, ಅವರಿಂದ ಬೇರೆಯಾಗುವುದು ಎಂದಿಗೂ ಕೂಡ ಉತ್ತಮ ಎನ್ನಲಾಗಿದೆ.


ಇದನ್ನೂ ಓದಿ-Bruhaspati-Rahu Yuti 2023: ಮೇಷ ರಾಶಿಯಲ್ಲಿ ರಾಹು-ಗುರು ಮೈತ್ರಿ, 3 ರಾಶಿಗಳ ಜನರಿಗೆ ಕಾದಿದೆ ಗಂಡಾಂತರ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.