Budhaditya Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಒಂದು ನಿರ್ದಿಷ್ಟ ಕಾಲಾಂತರದಲ್ಲಿ ತನ್ನ ಸ್ಥಾನ ಪಲ್ಲಟ ಮಾಡುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಅವುಗಳ ಪರಿಣಾಮವು ಮಾನವ ಜೀವನ ಮತ್ತು ಭೂಮಿಯ ಮೇಲೆ ಇರುವ ಜೀವ ಸಂಕುಲದ ಮೇಲೆ ಕಂಡು ಬರುತ್ತವೆ. ಪ್ರಸ್ತುತ ಸೂರ್ಯ ದೇವನು ಮಕರ ರಾಶಿಯಲ್ಲಿ ನೆಲೆಸಿದ್ದಾನೆ ಮತ್ತು ನಂತರ ಬುಧನು ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ಮಕರ ರಾಶಿಯಲ್ಲಿ ಪವರ್ಫುಲ್ ಬುಧಾದಿತ್ಯ ರಾಜಯೋಗ ರಚನೆಯಾಗಿದೆ. ಎಲ್ಲಾ ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಗೋಚರಿಸಲಿದೆ. ಆದರೆ ಬುಧಾದಿತ್ಯ ರಾಜಯೋಗದ ರಚನೆಯಿಂದ 4 ರಾಶಿಗಳ ಜನರಿಗೆ ವಿಶೇಷ ಆರ್ಥಿಕ ಲಾಭಗಳು ಸಿಗಲಿವೆ. ಆ ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ವೃಷಭ ರಾಶಿ
ಬುಧಾದಿತ್ಯ ರಾಜಯೋಗವು ನಿಮಗೆ ಅತ್ಯಂತ ಶುಭಕರ ಮತ್ತು ಫಲಪ್ರದ ಸಾಬೀತಾಗಲಿದೆ ಮತ್ತೊಂದೆಡೆ, ನಿಮ್ಮ ಸಂಕ್ರಮಣ ಜಾತಕದಲ್ಲಿ ಬುಧ ಮತ್ತು ಮಂಗಳನ ನವಪಂಚಮ ಯೋಗವು ರೂಪುಗೊಳ್ಳುತ್ತಿದೆ. ಇದರಲ್ಲಿ ಬುಧನು ನಿಮ್ಮ ಸಂಪತ್ತು ಮತ್ತು ಶಿಕ್ಷಣಕ್ಕೆ ಭಾವದಲ್ಲಿದ್ದರೆ. ಮಂಗಳ ದೇವ ನಿಮ್ಮ ವಿವಾಹಭಾವದಲ್ಲಿ ನೆಲೆಸಿದ್ದಾರೆ. ನಿಮ್ಮ ಜಾತಕದ ನವಮ ಭಾವದಲ್ಲಿ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ. ಇದರೊಂದಿಗೆ ನೀವು ಸಾಕಷ್ಟು ಅದೃಷ್ಟವನ್ನು ಪಡೆಯಬಹುದು. ಅಲ್ಲದೆ, ಈ ಅವಧಿಯಲ್ಲಿ, ನೀವು ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಈ ಸಮಯವು ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಮಂಗಳಕರವಾಗಿದೆ. ಅಂದರೆ ನೀವು ಯಾವುದೇ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು ಎಂದರ್ಥ.
ಕನ್ಯಾ ರಾಶಿ
ಬುಧಾದಿತ್ಯ ರಾಜಯೋಗವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯ ಪಂಚಮ ಭಾವದಲ್ಲಿ ರೂಪುಗೊಳ್ಳಲಿದೆ. ಇದು ಸಂತಾನ, ಉನ್ನತ ಶಿಕ್ಷಣ ಮತ್ತು ಸಂತಾನ ಪ್ರಜ್ಞೆಯ ಸ್ಥಾನ ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ಉದ್ಯೋಗಸ್ಥರು ತಮ್ಮ ಕೆಲಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ, ಅವರಿಗೆ ಅವರ ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಅಲ್ಲದೆ, ಈ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದೇ ಉನ್ನತ ಸಂಸ್ಥೆಯಲ್ಲಿ ಪ್ರವೇಶ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಈ ಸಮಯದಲ್ಲಿ ಸಂತಾನ ಪ್ರಾಪ್ತಿ ಮಾಡಲು ಬಯಸುವವರಿಗೆ ಸಂತಾನ ಸುಖ ಪ್ರಾಪ್ತಿಯಾಗಬಹುದು. ಇದರೊಂದಿಗೆ ಪ್ರೇಮ ವಿವಾಹದಲ್ಲೂ ಒಬ್ಬರು ಯಶಸ್ಸನ್ನು ಪಡೆಯಬಹುದು.
ಇದನ್ನೂ ಓದಿ-Bruhaspati-Rahu Yuti 2023: ಮೇಷ ರಾಶಿಯಲ್ಲಿ ರಾಹು-ಗುರು ಮೈತ್ರಿ, 3 ರಾಶಿಗಳ ಜನರಿಗೆ ಕಾದಿದೆ ಗಂಡಾಂತರ!
ಮೇಷ ರಾಶಿ
ಬುಧಾದಿತ್ಯ ರಾಜಯೋಗವು ನಿಮಗೆ ಅನುಕೂಲಕರವಾಗಿದೆ. ಏಕೆಂದರೆ ಈ ಯೋಗವು ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದಾಗಿ ನಿರುದ್ಯೋಗಿಗಳು ಈ ಅವಧಿಯಲ್ಲಿ ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಇದರೊಂದಿಗೆ, ಈ ಅವಧಿಯು ವ್ಯಾಪಾರ ವರ್ಗದ ಜನರಿಗೆ ಬಹಳ ಪ್ರಯೋಜನಕಾರಿ ಸಾಬೀತಾಗಲಿದೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ನೀವು ವ್ಯಾಪಾರವನ್ನು ವಿಸ್ತರಿಸಬಹುದು. ಮತ್ತೊಂದೆಡೆ, ಉದ್ಯೋಗಸ್ಥರು ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬಹುದು. ಕೆಲಸದ ವಿಷಯದಲ್ಲಿ ಈ ಅವಧಿಯು ತುಂಬಾ ಉತ್ತಮವಾಗಿರುತ್ತದೆ. ತಮ್ಮ ಸಂಗಾತಿಯ ಹೆಸರಿನಲ್ಲಿ ವ್ಯಾಪಾರ ಮಾಡುವವರಿಗೆ, ಈ ಅವಧಿಯು ತುಂಬಾ ಯಶಸ್ವಿ ಸಾಬೀತಾಗಲಿದೆ. ಇದೇ ವೇಳೆ, ಈ ಅವಧಿಯಲ್ಲಿ ಅವಿವಾಹಿತ ಜನರಿಗೆ ಮದುವೆಯ ಪ್ರಸ್ತಾಪಗಳು ಬರಬಹುದು.
ಇದನ್ನೂ ಓದಿ-Mahashivratri 2023: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಮಹಾಶಿವರಾತ್ರಿಯ ದಿನ ಈ ಉಪಾಯ ಮಾಡಿ!
ಮಕರ ರಾಶಿ
ಬುಧಾದಿತ್ಯ ರಾಜಯೋಗವು ಮಕರ ರಾಶಿಯವರಿಗೆ ಲಾಭದಾಯಕವೆಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯ ಲಗ್ನ ಭಾವದಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯು ಕೆಲಸದ ವಿಷಯದಲ್ಲಿ ತುಂಬಾ ಉತ್ತಮವಾಗಿರುತ್ತದೆ. ತಮ್ಮ ಸಂಗಾತಿಯ ಹೆಸರಿನಲ್ಲಿ ವ್ಯಾಪಾರ ಮಾಡುವವರಿಗೆ ಈ ಸಮಯವು ಬಹಳ ಉತ್ತಮವಾಗಿರಲಿದೆ. ಇದೇ ವೇಳೆ, ನಿಮ್ಮ ಆತ್ಮವಿಶ್ವಾಸದಲ್ಲಿ ಹೆಚ್ಚಳ ಕಂಡುಬರಲಿದೆ. ಅಲ್ಲದೆ, ಈ ಸಮಯದಲ್ಲಿ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಹೆಚ್ಚುವರಿ ಕೆಲಸದ ಹೊರೆ ಪಡೆಯಬಹುದು.
ಇದನ್ನೂ ಓದಿ-ಕಡಿಮೆ ಅವಧಿಯಲ್ಲಿ ಸಿರಿವಂತರಾಗಬೇಕೆ? ನೀಮ್ ಕರೋಲಿ ಬಾಬಾ ಹೇಳಿರುವ ಈ 3 ಸಲಹೆ ಟ್ರೈಮಾಡಿ ನೋಡಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.