ಜೂನ್ 27 ರವರೆಗೆ ಅತ್ಯಂತ ಎಚ್ಚರದಿಂದ ಇರಬೇಕು ಈ ನಾಲ್ಕು ರಾಶಿಯವರು , ಮಂಗಳ ನೀಡಲಿದ್ದಾನೆ ಭಾರೀ ಕಷ್ಟ
ಮಂಗಳ ಗ್ರಹವು ಮೇ 17 2022 ರಂದು ಬೆಳಿಗ್ಗೆ 09:52 ಕ್ಕೆ ಮೀನ ರಾಶಿ ಪ್ರವೇಶಿಸಿದ್ದಾನೆ. ಜೂನ್ 27 ರ ಬೆಳಿಗ್ಗೆ 6 ಗಂಟೆವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ. ನಂತರ ಮಂಗಳ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ.
ಬೆಂಗಳೂರು : ಮಂಗಳನ ರಾಶಿಯ ಬದಲಾವಣೆಯು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಮಂಗಳ ಗ್ರಹದ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಚಕ್ರಗಳ ಮೇಲೆ ಬೀರುತ್ತದೆ. ಮಂಗಳ ಗ್ರಹವು ಮೇ 17 2022 ರಂದು ಬೆಳಿಗ್ಗೆ 09:52 ಕ್ಕೆ ಮೀನ ರಾಶಿ ಪ್ರವೇಶಿಸಿದ್ದಾನೆ. ಜೂನ್ 27 ರ ಬೆಳಿಗ್ಗೆ 6 ಗಂಟೆವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ. ನಂತರ ಮಂಗಳ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಮಂಗಳ ಸಂಕ್ರಮಣದ ಅವಧಿಯಲ್ಲಿ ಈ ನಾಲ್ಕು ರಾಶಿಯವರು ಬಹಳ ಜಾಗರೂಕರಾಗಿರಬೇಕು.
ಮೇಷ - ಮಂಗಳನು ಮೇಷ ರಾಶಿಯ 12 ನೇ ಮನೆಯಲ್ಲಿ ಸಾಗಿದ್ದಾನೆ. ಈ ಮನೆಯಲ್ಲಿ ಮಂಗಳ ಸಂಚಾರವು ಮಂಗಳಕರವಾಗಿರುವುದಿಲ್ಲ. ಈ ಸಮಯದಲ್ಲಿ, ನಿಮ್ಮ ಜೀವನದಲ್ಲಿ ಕಾರ್ಯನಿರತತೆ ಹೆಚ್ಚಾಗಬಹುದು. ದೂರ ಪ್ರಯಾಣದ ಸಾಧ್ಯತೆಗಳಿವೆ. ಅನಗತ್ಯ ಹಣ ವ್ಯಯವಾಗಬಹುದು. ಮಾನಸಿಕ ಒತ್ತಡ ಹೆಚ್ಚಾಗಲಿದೆ.
ಇದನ್ನೂ ಓದಿ : Swapan Shastra: ನೀವೂ ಕನಸಿನಲ್ಲಿ ಮಂಗಗಳನ್ನು ವಿಚಿತ್ರ ಭಂಗಿಗಳಲ್ಲಿ ನೋಡುತ್ತೀರಾ?
ಸಿಂಹ - ಮಂಗಳನು ಸಿಂಹ ರಾಶಿಯ ಎಂಟನೇ ಮನೆಯಲ್ಲಿ ಸಾಗುತ್ತಾನೆ. ಈ ಸಮರ್ಭದಲ್ಲಿ ಸಿಂಹ ರಾಶಿಯವರ ಕೋಪ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಜೀವನದಲ್ಲಿ ಹಠಾತ್ ಏರಿಳಿತಗಳು ಉಂಟಾಗಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಕುಟುಂಬ ಸಂಬಂಧಗಳು ಸಹ ಹದಗೆಡಬಹುದು.
ಕನ್ಯಾ ರಾಶಿ - ಕನ್ಯಾ ರಾಶಿಯ ಏಳನೇ ಮನೆಯಲ್ಲಿ ಮಂಗಳ ಸಂಚಾರ ಸಾಗಲಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪಾಲುದಾರಿಕೆ ಕೆಲಸ ಮಾಡುತ್ತಿದ್ದರೆ, ಜಾಗರೂಕರಾಗಿರಬೇಕು. ಉದ್ಯೋಗದಲ್ಲಿ ಮಿಶ್ರ ಫಲ ಸಿಗುತ್ತದೆ.
ಇದನ್ನೂ ಓದಿ : ಶನಿ ಕೋಪದಿಂದ ಪಾರಾಗಲು ಈ ಕೆಲಸಗಳಿಂದ ದೂರವಿರಿ; ಇಲ್ಲದಿದ್ರೆ ಸಮಸ್ಯೆ ತಪ್ಪಿದ್ದಲ್ಲ!
ಮೀನ - ಮಂಗಳ ಗ್ರಹವು ಮೀನ ರಾಶಿಯ ಮೊದಲ ಮನೆಯಲ್ಲಿ ಅಂದರೆ ಲಗ್ನದಲ್ಲಿ ಸಾಗಿದೆ. ಇದರಿಂದಾಗಿ ನಿಮಗೆ ಮಾತು ಮಾತಿಗೂ ಕೋಪ ಬರಬಹುದು. ಸದಾ ಉಗ್ರ ಸ್ವರೂಪದಲ್ಲಿಯೇ ಇರುಂತಾಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.