ನವದೆಹಲಿ: ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಾನು ಬಹಳಷ್ಟು ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಪಡೆಯಬೇಕೆಂದು ಬಯಸುತ್ತಾನೆ. ಆದರೆ, ಎಲ್ಲರ ಆಸೆಯೂ ಈಡೇರುವುದಿಲ್ಲ. ಇದರ ಹಿಂದೆ ಅವರ ಶ್ರಮ ಮತ್ತು ಅದೃಷ್ಟ ಎರಡೂ ಇರುತ್ತದೆ. ಈ ಎರಡರಲ್ಲಿ ಒಂದು ಕೈಕೊಟ್ಟರೂ ಮನುಷ್ಯನಿಗೆ ಯಶಸ್ಸು ಸಿಗುವುದಿಲ್ಲ. ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ನಿಮ್ಮ ಮೇಲಿರಬೇಕೆಂದರೆ ನೀವು ಬೆಳಿಗ್ಗೆ ಎದ್ದ ತಕ್ಷಣ ಕೆಲವು ಕೆಲಸಗಳನ್ನು ಮಾಡಬೇಕು. ಈ ವಾಸ್ತು ಸಲಹೆಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಭೂಮಿ ತಾಯಿಗೆ ನಮಿಸಿ


ಮುಂಜಾನೆ ಕಣ್ಣು ತೆರೆದ ಕೂಡಲೇ ಮೊದಲು ಭೂತಾಯಿಗೆ ನಮಸ್ಕರಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿ ಭೂಮಿ ತಾಯಿಗೆ ಸಮಾನ ಎಂದು ಹೇಳಲಾಗಿದೆ. ಆದ್ದರಿಂದ ಅದನ್ನು ಗೌರವಿಸುವುದು ಮಾತ್ರವಲ್ಲದೆ ಪೂಜಿಸಬೇಕು. ಹೀಗೆ ಮಾಡುವುದರಿಂದ ದೇವತೆಗಳು ಸಂತುಷ್ಟರಾಗುತ್ತಾರೆ ಮತ್ತು ತಮ್ಮ ಕೃಪೆಯನ್ನು ವ್ಯಕ್ತಿಯ ಮೇಲೆ ಧಾರೆಯೆರೆಯುತ್ತಾರೆಂಬ ನಂಬಿಕೆ ಇದೆ.  


ಇದನ್ನೂ ಓದಿ: ರಾಶಿ ಬದಲಿಸಲಿರುವ ಬುಧ ಬದಲಿಸಲಿದ್ದಾನೆ ಈ ರಾಶಿಯವರ ಅದೃಷ್ಟ ..!


ಎರಡೂ ಕೈಜೋಡಿಸಿ ಭಗವಂತನಿಗೆ ನಮಿಸಿ


ಭೂಮಿ ತಾಯಿಗೆ ನಮಸ್ಕರಿಸುವುದರೊಂದಿಗೆ ಎರಡೂ ಕೈಗಳನ್ನು ಜೋಡಿಸಿ ಭಗವಂತನಿಗೆ ನಮಿಸಬೇಕು. ಇದಾದ ನಂತರ ಸ್ವಲ್ಪ ಸಮಯ ಎರಡೂ ಅಂಗೈಗಳನ್ನು ಜೋಡಿಸಿ ನೋಡಿಕೊಳ್ಳಿರಿ. ಈ ಸಮಯದಲ್ಲಿ ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವನ್ನು ಸ್ತುತಿಸಲು ಕೆಲವು ಮಂತ್ರಗಳನ್ನು ಪಠಿಸಿ. ಬೆಳಿಗ್ಗೆ ಶುದ್ಧ ಹೃದಯದಿಂದ ಮಾಡಿದ ನಿಮ್ಮ ಈ ಪ್ರಾರ್ಥನೆ ಖಂಡಿತ ದೇವರನ್ನು ತಲುಪುತ್ತದೆ ಮತ್ತು ವ್ಯಕ್ತಿಯು ಅದರ ಫಲವನ್ನು ಸಹ ಪಡೆಯುತ್ತಾನೆ.


ಪೋಷಕರ ಪಾದಗಳನ್ನು ಸ್ಪರ್ಶಿಸಲು ಮರೆಯದಿರಿ


ಹಾಸಿಗೆಯಿಂದ ಎದ್ದ ನಂತರ ಮನೆಯಲ್ಲಿರುವ ಪೋಷಕರು ಮತ್ತು ಇತರ ಹಿರಿಯರ ಪಾದಗಳನ್ನು ಸ್ಪರ್ಶಿಸಬೇಕು. ಜಗತ್ತಿನಲ್ಲಿ ಎಲ್ಲಿಯಾದರೂ ಸ್ವರ್ಗವಿದ್ದರೆ ಅದು ಪೋಷಕರ ಪಾದದಲ್ಲಿದೆ ಎಂದು ಭಾರತೀಯ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ತಂದೆ-ತಾಯಿ ಮತ್ತು ಹಿರಿಯರ ಆಶೀರ್ವಾದವು ದೊಡ್ಡ ತೊಂದರೆಗಳನ್ನು ಸಹ ನಿವಾರಿಸುತ್ತದೆ. ಜೀವನದಲ್ಲಿ ಹಿರಿಯರನ್ನು ಗೌರವಿಸುವವರ ಪ್ರತಿಷ್ಠೆಯೂ ಹೆಚ್ಚುತ್ತದೆ.


ಇದನ್ನೂ ಓದಿ: Horoscope Today: ಈ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು


ಸೂರ್ಯೋದಯವಾದಾಗ ನೀರು ಕೊಡಿ


ಸೂರ್ಯನನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಸೂರ್ಯ ದೇವನು ಉದಯಿಸದಿದ್ದಾಗ ಜೀವನದಲ್ಲಿ ಕತ್ತಲೆ ಮತ್ತು ಹತಾಶೆಯ ಭಾವನೆ ಇರುತ್ತದೆ. ಸೂರ್ಯೋದಯದ ನಂತರ ಸೂರ್ಯ ದೇವರಿಗೆ ನಿಯಮಿತವಾಗಿ ನೀರನ್ನು ಅರ್ಪಿಸಿ ಮತ್ತು ಅವನ ಆಶೀರ್ವಾದ ಪಡೆಯಲು ಕೈ ಜೋಡಿಸಿ ನಮಿಸಬೇಕು. ಶಾಸ್ತ್ರಗಳ ಪ್ರಕಾರ ಹೀಗೆ ಮಾಡುವುದರಿಂದ ಜೀವನದಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ. ಅದೇ ರೀತಿ ಮನೆಯು ಸಂತೋಷದಿಂದ ತುಂಬಿರುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.