ರಾಶಿ ಬದಲಿಸಲಿರುವ ಬುಧ ಬದಲಿಸಲಿದ್ದಾನೆ ಈ ರಾಶಿಯವರ ಅದೃಷ್ಟ ..!

 ಜ್ಯೋತಿಷ್ಯದ ಪ್ರಕಾರ, ಯಾವುದೇ ರಾಶಿಚಕ್ರದ ಸ್ಥಳ ಬದಲಾವಣೆಯು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜುಲೈ 2 ರಂದು, ಬುಧ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ, ಯಾವ ರಾಶಿಚಕ್ರ ಚಿಹ್ನೆಗಳು ಅದರ ಲಾಭವನ್ನು ಪಡೆಯುತ್ತವೆ ಎಂಬುದನ್ನು ತಿಳಿಯಿರಿ.   

Written by - Ranjitha R K | Last Updated : Jun 24, 2022, 03:26 PM IST
  • ಜುಲೈ 2 ರಂದು, ಬುಧ ಗ್ರಹವು ಮಿಥುನ ರಾಶಿ ಪ್ರವೇಶ
  • ಕೆಲವು ರಾಶಿಯವರು ಆರ್ಥಿಕ ಲಾಭ ಗಳಿಸಲಿದ್ದಾರೆ.
  • ಯಾರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಬುಧ ?
ರಾಶಿ ಬದಲಿಸಲಿರುವ ಬುಧ ಬದಲಿಸಲಿದ್ದಾನೆ ಈ  ರಾಶಿಯವರ ಅದೃಷ್ಟ ..! title=
Mercury transit (file photo)

ಬೆಂಗಳೂರು : ಗ್ರಹಗಳ ರಾಶಿ ಪರಿವರ್ತನೆ ಮತ್ತು ಹಿಮ್ಮುಖ ಚಲನೆ ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜುಲೈ 2 ರಂದು, ಬುಧ ಗ್ರಹ ತನ್ನ ರಾಶಿಚಕ್ರವನ್ನು ಬದಲಾಯಿಸಿ, ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಬುಧಗ್ರಹದ ಈ ಬದಲಾವಣೆಯಿಂದ ಕೆಲವು ರಾಶಿಚಕ್ರದವರು ಶುಭ ಫಲಗಳನ್ನು ಪಡೆಯುತ್ತಾರೆ. ಅದೇ ವೇಳೆ, ಕೆಲವು ರಾಶಿಯವರಿಗೆ ಕಷ್ಟದ ದಿನಗಳು ಆರಂಭವಾಗಲಿದೆ. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜುಲೈ 2, 2022 ರಂದು ಬೆಳಿಗ್ಗೆ 9:40 ಕ್ಕೆ ಬುಧ ಸಂಕ್ರಮಣ ನಡೆಯಲಿದೆ. ಮಿಥುನ ರಾಶಿಯ ಅಧಿಪತಿ ಬುಧ. ಇದೀಗ ಬುಧ ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಬುಧ ಸಂಕ್ರಮಣವು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.  

ಇದನ್ನೂ ಓದಿ  : ಜಾತಕದ ಈ ಮನೆಯಲ್ಲಿ ಶನಿ ಇದ್ದರೆ ವ್ಯಕ್ತಿಯ ಏಳಿಗೆ ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ .!
 
ಕನ್ಯಾ ರಾಶಿ :
ಕನ್ಯಾ ರಾಶಿಯವರು ಈ ಸಮಯದಲ್ಲಿ  ವೃತ್ತಿಜೀವನದಲ್ಲಿ ಸ್ಥಿರತೆಯನ್ನು ಪಡೆಯುವುದು ಮುಖ್ಯವಾಗಿರುತ್ತದೆ. ಈ ರಾಶಿಯ ಜನರು ತಮ್ಮ  ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತಾರೆ. ವ್ಯಾಪಾರಸ್ಥರಿಗೆ ಹೊಸ ವ್ಯವಹಾರ ಮಾಡಲು ಉತ್ತಮ ಅವಕಾಶ ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಹೆಚ್ಚಾಗುತ್ತದೆ. ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. 

ಮಕರ ರಾಶಿ  :  ಬಹಳ ದಿನಗಳಿಂದ ಕಷ್ಟಪಟ್ಟು ದುಡಿಯುತ್ತಿರುವ ಜನರಿಗೆ ಯಶಸ್ಸು ಸಿಗುತ್ತದೆ. ಈ ಅವಧಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಮಕರ ರಾಶಿಯವರಿಗೆ, ಬುಧ ಸಂಕ್ರಮಣವು  ವಿತ್ತೀಯ ಲಾಭ ಕೊಡಿಸುವಲ್ಲಿ ಫಲಪ್ರದವಾಗಲಿದೆ.  ಆರ್ಥಿಕ ಲಾಭ ಹೆಚ್ಚಾಗಲಿದೆ. 

ಇದನ್ನೂ  ಓದಿ :  Shani Effect : ಈ ರಾಶಿಯವರಿಗೆ 3 ವರ್ಷ ಶನಿ ಕಾಟ, ತಡೆಗಟ್ಟುವ ಕ್ರಮಗಳು ಇಲ್ಲಿವೆ!

ಸಿಂಹ : ಸಿಂಹ ರಾಶಿಯವರಿಗೆ ಧನ ಲಾಭವಾಗಲಿದೆ. ಅಷ್ಟೇ ಅಲ್ಲ, ಆಸೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ವ್ಯಕ್ತಿಯ ವೃತ್ತಿಜೀವನದಲ್ಲಿ ಬೆಳವಣಿಗೆಯಾಗಬಹುದು. ಹೊಸ ಅವಕಾಶಗಳು ಎದುರಾಗಬಹುದು. ಈ ಸಮಯದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಬುಧ ಸಂಕ್ರಮಣವು ಸಿಂಹ ರಾಶಿಯವರಿಗೆ ವಿಶೇಷ  ಆರ್ಥಿಕ ಲಾಭವನ್ನು ನೀಡುತ್ತದೆ. 

 (  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News