ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮತ್ತು ಜಗತ್ತಿನ ನಾಲ್ಕನೇ ಅತೀ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ ಅವರು ಅಜ್ಜನಾದ ಸಂಭ್ರಮದಲ್ಲಿದ್ದಾರೆ. ಮುಕೇಶ್​-ನೀತಾ ಅಂಬಾನಿಯವರ ಮಗ ಆಕಾಶ್ ​ಅಂಬಾನಿ ಅವರ ಪತ್ನಿ ಶ್ಲೋಕಾ ಇಂದು  ಗಂಡು ಮಗುವಿಗೆ ತಾಯಿಯಾಗಿದ್ದರೆ.


COMMERCIAL BREAK
SCROLL TO CONTINUE READING

ಇವರ ಮದುವೆ 2019ರ ಮಾರ್ಚ್​ ತಿಂಗಳಲ್ಲಿ ಆಗಿತ್ತು. ಇಂದು ಮಗುವಿಗೆ ಜನ್ಮ ನೀಡಿರುವ ಕುರಿತು ಮುಕೇಶ್(​Mukesh Amban) ದಂಪತಿ ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ. 'ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ' ಎಂದು ತಿಳಿಸಿದ್ದಾರೆ.


ಗ್ರಾ. ಪಂ. ಚುನಾವಣೆ: ಅಭ್ಯರ್ಥಿಗಳಿಂದ ಚುನಾವಣೆ ಪ್ರಚಾರಕ್ಕೆ 'ಹೈಟೆಕ್ ಟಚ್'..!


'ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಮಗು ಜನನವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರ ಜತೆಗೆ, ಧೀರೂಭಾಯ್ ಮತ್ತು ಕೋಕಿಲಾ ಅಂಬಾನಿ ಅವರು ತಮ್ಮ ಮರಿಮೊಮ್ಮಗನನ್ನು ತುಂಬು ಸಂತೋಷದಿಂದ ಸ್ವಾಗತಿಸಿದ್ದಾರೆ. ಈ ನಡುವೆಯೇ, ಜನರಿಗೂ ಒಂದು ಸಂತಸ ಸುದ್ದಿ ನೀಡಿರುವ ಮುಕೇಶ್​ ಅಂಬಾನಿ, 2021ರಲ್ಲಿ ಭಾರತದಲ್ಲಿ ಜಿಯೊ 5G ಸೇವೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.


ನೂತನ ಸಂಸತ್ ಭವನ ಕಟ್ಟಡಕ್ಕೆ 'ಕರ್ನಾಟಕದ ಪುರೋಹಿತರಿಂದ ಭೂಮಿ ಪೂಜೆ' ನೆರವೇರಿಸಿದ ಪ್ರಧಾನಿ ಮೋದಿ


ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಜಿಯೊದ 5G ಸೇವೆ ಒಂದು ಪುರಾವೆಯಾಗಲಿದೆ. ಮುಂದಿನ ವರ್ಷ ದೇಶದಲ್ಲಿ ಜಿಯೊ 5ಜಿ ಸೇವೆಯನ್ನು ತರುವುದು ಮಾತ್ರವಲ್ಲದೆ ಗೂಗಲ್ ಜತೆ ಸೇರಿಕೊಂಡು ಅಂಡ್ರಾಯ್ಡ್ ಫೋನ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಾಮಾನ್ಯ ಜನರ ಕೈಗೆ ಎಟಕುವ ಬೆಲೆಯಲ್ಲಿ ಅದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


'ಕಾಂಗ್ರೆಸ್​​ ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿಕೊಂಡಿದ್ದೇವೆ’