ಗ್ರಾ. ಪಂ. ಚುನಾವಣೆ: ಅಭ್ಯರ್ಥಿಗಳಿಂದ ಚುನಾವಣೆ ಪ್ರಚಾರಕ್ಕೆ 'ಹೈಟೆಕ್ ಟಚ್'..!

ಮತದಾರರನ್ನು ತಲುಪುವುದಕ್ಕಾಗಿ ಅಭ್ಯರ್ಥಿಗಳು ಡಿಜಿಟಲ್ ವ್ಯವಸ್ಥೆಯ ಮೊರೆಹೋಗಿದ್ದು, ತಾವು ಮಾಡಿರುವ ಕೆಲಸಗಳನ್ನು ಹಾಗೂ ಮತದಾರರನ್ನು ಸೆಳೆಯುವುದಕ್ಕಾಗಿ ಅಗತ್ಯವಿರುವುದನ್ನು ಸೋಶಿಯಲ್ ಮೀಡಿಯಾ ಹಾಗೂ ಸ್ಮಾರ್ಟ್ ಫೋನ್ ಗಳ ಮೂಲಕ ಪ್ರಚಾರ

Last Updated : Dec 10, 2020, 02:44 PM IST
  • ಗ್ರಾಮ ಪಂಚಾಯಿತಿ ಚುನಾವಣೆಯ ಅಭ್ಯರ್ಥಿಗಳು ಪ್ರಚಾರಕ್ಕೆ ಹೈಟೆಕ್ ಟಚ್
  • ಮತದಾರರನ್ನು ತಲುಪುವುದಕ್ಕಾಗಿ ಅಭ್ಯರ್ಥಿಗಳು ಡಿಜಿಟಲ್ ವ್ಯವಸ್ಥೆಯ ಮೊರೆಹೋಗಿದ್ದು, ತಾವು ಮಾಡಿರುವ ಕೆಲಸಗಳನ್ನು ಹಾಗೂ ಮತದಾರರನ್ನು ಸೆಳೆಯುವುದಕ್ಕಾಗಿ ಅಗತ್ಯವಿರುವುದನ್ನು ಸೋಶಿಯಲ್ ಮೀಡಿಯಾ ಹಾಗೂ ಸ್ಮಾರ್ಟ್ ಫೋನ್ ಗಳ ಮೂಲಕ ಪ್ರಚಾರ
  • ಚುನಾವಣಾ ಖರ್ಚು-ವೆಚ್ಚಗಳ ದೃಷ್ಟಿಯಿಂದಲೂ ಡಿಜಿಟಲ್ ಪ್ರಚಾರದ ಮೊರೆ
ಗ್ರಾ. ಪಂ. ಚುನಾವಣೆ: ಅಭ್ಯರ್ಥಿಗಳಿಂದ ಚುನಾವಣೆ ಪ್ರಚಾರಕ್ಕೆ 'ಹೈಟೆಕ್ ಟಚ್'..! title=

ಗದಗ: ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯ ಅಭ್ಯರ್ಥಿಗಳು ಪ್ರಚಾರಕ್ಕೆ ಹೈಟೆಕ್ ಟಚ್ ನೀಡಿದ್ದಾರೆ. ಮತದಾರರನ್ನು ತಲುಪುವುದಕ್ಕಾಗಿ ಅಭ್ಯರ್ಥಿಗಳು ಡಿಜಿಟಲ್ ವ್ಯವಸ್ಥೆಯ ಮೊರೆಹೋಗಿದ್ದು, ತಾವು ಮಾಡಿರುವ ಕೆಲಸಗಳನ್ನು ಹಾಗೂ ಮತದಾರರನ್ನು ಸೆಳೆಯುವುದಕ್ಕಾಗಿ ಅಗತ್ಯವಿರುವುದನ್ನು ಸೋಶಿಯಲ್ ಮೀಡಿಯಾ ಹಾಗೂ ಸ್ಮಾರ್ಟ್ ಫೋನ್ ಗಳ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.

ಕೋವಿಡ್-19 ಹಿನ್ನೆಲೆ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಇದೇ ಕಾರಣದಿಂದಾಗಿ ಹಲವಾರು ಸ್ಥಳೀಯ ನಾಯಕರೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪರಿಣಾಮ ಈ ಹಿಂದಿನಂತೆ ಚುನಾವಣೆಗೆ ಖರ್ಚು ಮಾಡುವುದಕ್ಕೆ ಹಣದ ಕೊರತೆ ಎದುರಿಸುತ್ತಿದ್ದಾರೆ. ಚುನಾವಣಾ(Election) ಖರ್ಚು-ವೆಚ್ಚಗಳ ದೃಷ್ಟಿಯಿಂದಲೂ ಡಿಜಿಟಲ್ ಪ್ರಚಾರದ ಮೊರೆ ಹೋಗುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ನೂತನ ಸಂಸತ್ ಭವನ ಕಟ್ಟಡಕ್ಕೆ 'ಕರ್ನಾಟಕದ ಪುರೋಹಿತರಿಂದ ಭೂಮಿ ಪೂಜೆ' ನೆರವೇರಿಸಿದ ಪ್ರಧಾನಿ ಮೋದಿ

ಕೋವಿಡ್-19 ನಿಯಮಗಳನ್ನು ಗ್ರಾಮಸ್ಥರು ಕಠಿಣವಾಗಿ ಪಾಲಿಸುತ್ತಿದ್ದು, ಗ್ರಾಮಸ್ಥರ ಮನೆಗಳಿಗೆ ತೆರಳಿ ಪ್ರಚಾರ ಮಾಡುವುದು ಕಷ್ಟಸಾಧ್ಯವಾಗಿದೆ, ಚುನಾವಣೆ ಹತ್ತಿರ ಬಂದಾಗ ಬ್ಯಾನರ್ ಗಳನ್ನು ಹಾಕುತ್ತೇವೆ, ಈಗ ಪ್ರಚಾರಕ್ಕಾಗಿ ಇ-ಬ್ಯಾನರ್ ಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಜನತೆಗೆ ತಲುಪುವಂತೆ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿಯ ಅಭ್ಯರ್ಥಿಯೊಬ್ಬರು ಹೇಳಿದ್ದಾರೆ.

'ಕಾಂಗ್ರೆಸ್​​ ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿಕೊಂಡಿದ್ದೇವೆ’

ಕಳೆದ ಬಾರಿ ಗೆದ್ದಿದ್ದ ಗ್ರಾಮ ಪಂಚಾಯಿತಿ ಸದಸ್ಯರು ಈ ಬಾರಿ ಸೋಶಿಯಲ್ ಮೀಡಿಯಾಗಳಾದ ಫೇಸ್ ಬುಕ್ ಖಾತೆ, ಪೇಜ್, ವಾಟ್ಸ್ ಆಪ್ ಗ್ರೂಪ್ ಗಳನ್ನು ಪ್ರಾರಂಭಿಸಿದ್ದು, ಆ ಮೂಲಕ ತಮ್ಮ ಅಭಿವೃದ್ಧಿ ಕೆಲಸಗಳ ವಿಡಿಯೋ ಮತ್ತು ಫೋಟೋಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಮದ ಮಂದಿಯ ಬಳಿ ಸ್ಮಾರ್ಟ್ ಫೋನ್ ಇದ್ದು, ಮತದಾರರನ್ನು ತಲುಪುವುದೂ ಸುಲಭವಾಗುತ್ತದೆ ಎಂಬುದು ಅಭ್ಯರ್ಥಿಗಳ ಅಭಿಪ್ರಾಯವಾಗಿದೆ.

ಅನ್ನದಾತರ ಮೇಲೆ ಕಿಡಿ ಕಾರಿದ ಹೆಚ್.ಡಿ. ಕುಮಾರಸ್ವಾಮಿ

ಎಲ್ಲಾ ಅಭ್ಯರ್ಥಿಗಳು ಜನರನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಲುಪುತ್ತಿದ್ದು ಮನೆ ಮನೆ ಪ್ರಚಾರ ಬಹುತೇಕ ಅತ್ಯಂಗೊಂಡಿದೆ ಎಂದು ಅಭ್ಯರ್ಥಿಯೊಬ್ಬರು ಹೇಳಿದ್ದಾರೆ.

ರಾಜ್ಯಾದ್ಯಂತ ನಾಳೆ ಖಾಸಗಿ ಆಸ್ಪತ್ರೆಗಳ 'OPD' ಬಂದ್..!

Trending News