ನಾಗರ ಪಂಚಮಿ ಪೂಜೆಯಲ್ಲಿದ್ದರೆ ಈ ವಸ್ತು ಸಿಗುವುದು ಶಿವನ ವಿಶೇಷ ಆಶೀರ್ವಾದ
ನಾಗರ ಪಂಚಮಿಯ ದಿನ ನಾಗನನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವು ಶಿವನಿಗೆ ಸಮರ್ಪಿತವಾಗಿದೆ.
ಬೆಂಗಳೂರು : ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚಿನ ಮಹತ್ವ ಇದೆ. ಶಿವನ ಆರಾಧನೆಗೆ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಹೇಳಲಾಗುತ್ತದೆ. ಶ್ರಾವಣ ಮಾಸಕ್ಕೂ ನಾಗರ ಪಂಚಮಿಗೂ ವಿಶೇಷ ಮಹತ್ವವಿದೆ. ನಾಗರ ಪಂಚಮಿಯ ದಿನ ನಾಗನನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವು ಶಿವನಿಗೆ ಸಮರ್ಪಿತವಾಗಿದೆ.
ನಾಗರ ಪಂಚಮಿ ದಿನಾಂಕ ಮತ್ತು ಶುಭ ಸಮಯ 2022 :
ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬವನ್ನು ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ನಾಗರ ಪಂಚಮಿಯನ್ನು ಆಗಸ್ಟ್ 2 ರಂದು ಆಚರಿಸಲಾಗುತ್ತದೆ. ಆಗಸ್ಟ್ 2 ರಂದು ಬೆಳಿಗ್ಗೆ 05:14 ರಿಂದ ಪಂಚಮಿ ತಿಥಿ ಪ್ರಾರಂಭವಾಗುತ್ತಿದೆ. ಆಗಸ್ಟ್ 3 ರಂದು ಬೆಳಿಗ್ಗೆ 05:42ರವರೆಗೆ ಪಂಚಮಿ ತಿಥಿ ಇರುತ್ತದೆ.
ಇದನ್ನೂ ಓದಿ : ಈ ಎರಡು ರಾಶಿಯವರನ್ನು ಇದೇ ತಿಂಗಳಿನಿಂದ ಮತ್ತೆ ಕಾಡಲಿದ್ದಾನೆ ಶನಿ ಮಹಾತ್ಮ
ಈ ದಿನದಂದು ನಾಗನನ್ನು ಪೂಜಿಸುವುದರಿಂದ ಕಾಲ ಸರ್ಪ ದೋಷದಿಂದ ಮುಕ್ತಿ ದೊರೆಯುತ್ತದೆ. ಅಲ್ಲದೆ ನಾಗದೇವರ ಆರಾಧನೆಯಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಅಲ್ಲದೆ, ಭಕ್ತರ ಇಚ್ಛೆ ಈಡೇರುವುದು ಎಂದು ಹೇಳಲಾಗುತ್ತದೆ.
ನಾಗರ ಪಂಚಮಿ ಪೂಜಾ ಸಾಮಗ್ರಿ :
ನಾಗರ ಪಂಚಮಿಯಂದು ನಾಗದೇವತೆಯನ್ನು ಪೂಜಿಸಲು, ಪೂಜಾ ಸಾಮಗ್ರಿಯನ್ನು ಮುಂಚಿತವಾಗಿ ತಯಾರಿಸಿಟ್ಟುಕೊಳ್ಳಬೇಕು. ನಾಗರ ಪಂಚಮಿ ಪೂಜೆ ಆರಂಭಿಸುವ ಮೊದಲು ನಾಗದೇವತೆಯ ವಿಗ್ರಹ, ಹಾಲು, ಹೂವುಗಳು, ಜೇನುತುಪ್ಪ, ಗಂಗಾಜಲ, ಪಂಚ ಮಿಠಾಯಿ, ಬಿಲ್ವಪತ್ರೆ, ಐದು ಬಗೆಯ ಹಣ್ಣುಗಳು, ಚಿನ್ನ, ಬೆಳ್ಳಿ, ದಕ್ಷಿಣೆ, ಪೂಜೆಯ ಪಾತ್ರೆಗಳು, ಮೊಸರು, ಶುದ್ಧ ತುಪ್ಪ, ನೀರು, ಪಂಚಾಮೃತ ಸುಗಂಧ, ತುಳಸಿ ದಳ , ಕೇದಗೆ ಹೂವು ಹಸುವಿನ ಹಸಿ ಹಾಲು, ಕರ್ಪೂರ, ಧೂಪ, ಹತ್ತಿ,ಗಳನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ ..
ಇದನ್ನೂ ಓದಿ : Maha Purush Rajyog: 30 ವರ್ಷಗಳ ಬಳಿಕ ತನ್ನ ಮೂಲ ತ್ರಿಕೋನ ರಾಶಿಯಲ್ಲಿ ಈ ಗ್ರಹ, ವಿಶೇಷ ಕಾಕತಾಳೀಯದಿಂದ ಈ ಜನರ ಕನಸು ನನಸು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.