Astrology: ಜೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ 18 ರಂದು ಶುಕ್ರ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಿದೆ. ಆದರೆ ಬುಧ ಗ್ರಹವು ಈಗಾಗಲೇ ವೃಷಭ ರಾಶಿಯಲ್ಲಿಯೇ ವಿರಾಜಮಾನವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧ ಮತ್ತು ಶುಕ್ರ ಗ್ರಹಗಳ ನಡುವೆ ಸ್ನೇಹದ ಭಾವದ ಸಂಬಂಧ ಇದೆ. ಈ ಎರಡು ಗ್ರಹಗಳ ಸಂಯೋಜನೆ ಅನೇಕ ರಾಶಿಗಳ ಜನರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಇದೇ ವೇಳೆ, ಶನಿಯು 30 ವರ್ಷಗಳ ನಂತರ ತನ್ನ ಮೂಲ ರಾಶಿಯಲ್ಲಿ ಬುಧ-ಶುಕ್ರರ ಜೊತೆಗೆ ತ್ರಿಕೋನ ಭಾವದಲ್ಲಿ ವಿರಾಜಮಾನನಾಗಿದ್ದಾನೆ . ಗ್ರಹಗಳ ಈ ಸ್ಥಾನದಿಂದಾಗಿ, ನಾಲ್ಕು ರಾಶಿಗಳ ಜಾತಕದಲ್ಲಿ ಶಶಾ ರಾಜಯೋಗ ಮತ್ತು ಮಾಲವ್ಯ ರಾಜಯೋಗ ಎಂಬ ಇಬ್ಬರು ಮಹಾಪುರುಷರು ರೂಪುಗೊಂಡಿದ್ದಾರೆ. ಈ ಪಂಚ ಮಹಾಪುರುಷ ರಾಜ್ ಯೋಗವು 4 ರಾಶಿಗಳ ಜಾತಕದವರಿಗೆ ತುಂಬಾ ಲಾಭ ತರಲಿದ್ದು, ಅವರ ಎಲ್ಲಾ ಕನಸುಗಳು ಈಡೇರಲಿವೆ. ಈ ಗ್ರಹಗಳ ಸ್ಥಾನ ಪಲ್ಲಟದಿಂದ ಈ ರಾಶಿಗಳ ಜನರ ಚಿನ್ನದಂತಹ ದಿನಗಳು ಆರಂಭಗೊಂಡಿವೆ.
ವೃಷಭ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯವರ ಜಾತಕದಲ್ಲಿ 2 ಮಹಾಪುರುಷ ರಾಜಯೋಗಗಳು ರೂಪುಗೊಂಡಿವೆ. ಇದರಿಂದ, ವೃಷಭ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯಲಿದ್ದಾರೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಶೀಘ್ರದಲ್ಲೇ ಉತ್ತಮ ಕೆಲಸ ಸಿಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಉತ್ತಮ ಇನ್ಕ್ರಿಮೆಂಟ್ ಸಿಗಲಿದೆ. ಈ ಅವಧಿಯಲ್ಲಿ ವೃಷಭ ಜಾತಕದವರಿಗೆ ಸ್ಥಾನಮಾನ, ಹಣ ಮತ್ತು ಪ್ರತಿಷ್ಥೆ ಮೂರೂ ಪ್ರಾಪ್ತಿಯಾಗಲಿವೆ.
ಸಿಂಹ ರಾಶಿ: ಬುಧ-ಶುಕ್ರರ ಸಂಯೋಗದಿಂದ ಸಿಂಹ ರಾಶಿಯವರ ಜಾತಕದಲ್ಲಿ ಶಶ ಮತ್ತು ಮಾಲಬ್ಯ ಎಂಬ 2 ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ. ಈ ಕಾರಣದಿಂದಾಗಿ, ಈ ಜನರು ಹಠಾತ್ ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವಿದೇಶಕ್ಕೆ ಹೋಗಲು ಬಯಸುವವರ ಕನಸು ನನಸಾಗಲಿದೆ. ಆಸ್ತಿಯಲ್ಲಿನ ಹೂಡಿಕೆ ನಿಮಗೆ ಉತ್ತಮ ಲಾಭವನ್ನು ನೀಡಲಿದೆ. ಆಸ್ತಿಗೆ ಸಂಬಂಧಿಸಿದ ವಿಷಯಗಳು ನಿಮ್ಮ ಪರವಾಗಿರುತ್ತವೆ. ಪಾರ್ಟ್ನರ್ಶಿಪ್ ನಲ್ಲಿ ವ್ಯಾಪಾರ ಮಾಡಲು ಇದು ಉತ್ತಮ ಅವಕಾಶವಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು.
ವೃಶ್ಚಿಕ ರಾಶಿ: ಈ ರಾಶಿಯ ಜನರ ಜಾತಕದಲ್ಲಿ ರೂಪುಗೊಂಡ ಎರಡು ಮಹಾನ್ ರಾಜಯೋಗಗಳು ಇವರಿಗೆ ಹೊಸ ಉದ್ಯೋಗಾವಕಾಶಗಳನ್ನು ನೀಡಲಿವೆ. ನೌಕರಿಯಲ್ಲಿರುವವರಿಗೆ ಬಡ್ತಿ ಸಿಗಲಿದೆ. ಸಂಬಳ ಹೆಚ್ಚಳದಿಂದಾಗಿ ಆರ್ಥಿಕ ಪಕ್ಷ ತುಂಬಾ ಬಲಿಷ್ಠವಾಗಿರಲಿದೆ.ಉದ್ಯಮಿಗಳ ದೊಡ್ಡ ವ್ಯಾಪಾರ ಒಪ್ಪಂದ ಕುದುರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ, ಇವರು ಸರ್ವಾಂಗೀಣ ಪ್ರಯೋಜನಗಳನ್ನು ಪಡೆಯುತ್ತಾರೆ.
ಕುಂಭ ರಾಶಿ: ಕುಂಭ ರಾಶಿಯವರ ಜಾತಕದಲ್ಲಿ ಮಹಾಪುರುಷ ರಾಜಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗವು ಈ ಜಾತಕದವರಿಗೆ ಭೌತಿಕ ಸೌಕರ್ಯ ಮತ್ತು ಐಶ್ವರ್ಯವನ್ನು ತರಲಿದೆ. ಹೊಸ ಆರ್ಥಿಕ ಮೂಲಗಳು ತೆರೆದುಕೊಳ್ಳಲಿವೆ. ಮನೆ, ಕಾರು ಖರೀದಿಗೂ ಅವಕಾಶಗಳಿವೆ.
ಇದನ್ನೂ ಓದಿ-ಈ ರಾಶಿಯವರ ಯಶಸ್ಸಿಗೆ ಕಾರಣವಾಗಲಿದ್ದಾನೆ ವಕ್ರಿಯಾಗಲಿರುವ ಗುರು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.