ಬೆಂಗಳೂರು : ಹಿಂದೂ ಹೊಸ ವರ್ಷ ಅಂದರೆ ಹೊಸ ಸಂವತ್ಸರ ಏಪ್ರಿಲ್ 2 ರಿಂದ ಪ್ರಾರಂಭವಾಗಲಿದೆ ( New Year Horoscope). ಪಂಚಾಂಗದ ಪ್ರಕಾರ ಚೈತ್ರ ಶುಕ್ಲದಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಪೌರಾಣಿಕ ನಂಬಿಕೆಯ ಪ್ರಕಾರ, ಈ ದಿನ ಬ್ರಹ್ಮ ವಿಶ್ವವನ್ನು ಸೃಷ್ಟಿಸಿದನಂತೆ. ಜ್ಯೋತಿಷ್ಯದ ಪ್ರಕಾರ (Astrology), ಈ ಬಾರಿ ಗ್ರಹಗಳ ಅಪರೂಪದ ಸಂಯೋಜನೆಯು ಈ ಸಂವತ್ಸರದ ಆರಂಭದಲ್ಲಿ ನಡೆಯುತ್ತಿದೆ. ಈ ಸಂವತ್ಸರದ ರಾಜ ಶನಿ (Shanideva) ಮಹಾತ್ಮನಾಗಿದ್ದರೆ , ಮಂತ್ರಿ ದೇವಗುರು ಬೃಹಸ್ಪತಿಯಾಗಿರುತ್ತಾನೆ. 


COMMERCIAL BREAK
SCROLL TO CONTINUE READING

ಶನಿ-ಮಂಗಳ ಸಂಯೋಗ :
ಜ್ಯೋತಿಷ್ಯದ ಪ್ರಕಾರ (Astrology), ಮಂಗಳ ಮತ್ತು ರಾಹು-ಕೇತುಗಳು ಸಂವತ್ಸರದ  ಆರಂಭದಲ್ಲಿ ತಮ್ಮ ಉತ್ಕೃಷ್ಟ ಚಿಹ್ನೆಗಳಲ್ಲಿ ಇರುತ್ತಾರೆ. ಅಲ್ಲದೆ, ಶನಿ ದೇವನು (Shani deva) ತನ್ನ ಪ್ರೀತಿಯ ರಾಶಿಚಕ್ರ ಚಿಹ್ನೆ ಮಕರ ರಾಶಿಯಲ್ಲಿಯೇ ಇರುತ್ತಾನೆ.  ಹಿಂದೂ ಹೊಸ ವರ್ಷದ ಪಂಚಾಂಗದಲ್ಲಿ ಶನಿ-ಮಂಗಳ ಸಂಯೋಗವು ನಡೆಯುತ್ತಿದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಿದ್ದಾರೆ (New Year Horoscope). ಇದರಿಂದಾಗಿ ಅದೃಷ್ಟ ಮತ್ತು ಲಾಭ ಅಧಿಕವಾಗಿರುತ್ತದೆ. 


ಇದನ್ನೂ ಓದಿ : Shukra Gochar 2022: ಶುಕ್ರನ ಕುಂಭ ರಾಶಿ ಪ್ರವೇಶ, ಈ ಐದು ರಾಶಿಗಳಿಗೆ ಜಬರ್ದಸ್ತ್ ಲಾಭ


ಈ ಯೋಗದ ಪ್ರಭಾವದಿಂದ ಮಿಥುನ, ಕನ್ಯಾ, ತುಲಾ (Libra), ಧನು ರಾಶಿಯವರಿಗೆ ತುಂಬಾ ಶುಭ ಫಲಗಳು ಸಿಗುತ್ತವೆ. ಹಿಂದೂ ಹೊಸ ವರ್ಷದ ಆರಂಭದಲ್ಲಿ, ರೇವತಿ ನಕ್ಷತ್ರದ ವಿಶೇಷ ಸಂಯೋಗ ರೂಪುಗೊಳ್ಳುತ್ತಿರುವುದರಿಂದ ಇಡೀ ವರ್ಷ ವ್ಯಾಪಾರದ ದೃಷ್ಟಿಯಿಂದ ಲಾಭದಾಯಕವಾಗಿರುತ್ತದೆ. 


ಶನಿ ಮಹಾತ್ಮ ರಾಜನಾದರೆ ಗುರು ಬೃಹಸ್ಪತಿ ಮಂತ್ರಿ : 
ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಈ ವರ್ಷದ ಜಾತಕದಲ್ಲಿ ಶನಿ ದೇವ ರಾಜನಾಗಿರುತ್ತಾನೆ (Shani deva). ದೇವಗುರು ಬೃಹಸ್ಪತಿ ಮಂತ್ರಿಯಾಗಿರುತ್ತಾನೆ.  ಇದರಿಂದಾಗಿ ಹೊಸ ವರ್ಷವು ಮಂಗಳಕರವಾಗಿರುತ್ತದೆ. ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿದೇವರು ಈ ವರ್ಷ ನ್ಯಾಯ ದೊರಕಿಸುವಲ್ಲಿ ಸಕಾರಾತ್ಮಕ ಪಾತ್ರ ವಹಿಸಲಿದ್ದಾರೆ. ಅದೇ ಸಮಯದಲ್ಲಿ, ಈ ವರ್ಷದ ಮಂತ್ರಿ ದೇವಗಾರು ಬೃಹಸ್ಪತಿ (Jupiter)ಕೂಡ ಶುಭಫಲವನ್ನೇ ಕರುಣಿಸಲಿದ್ದಾರೆ.  


ಇದನ್ನೂ ಓದಿ: ಈ ರಾಶಿಯವರನ್ನು ಅತಿಯಾಗಿ ಕಾಡಲಿರುವ ರಾಹು ಕೇತು, ಐದು ರಾಶಿಯವರಿಗೆ ಕರುಣಿಸಲಿದ್ದಾರೆ ಅದೃಷ್ಟ


ಎಲ್ಲಾ 9 ಗ್ರಹಗಳು ರಾಶಿಚಕ್ರ ಬದಲಾಯಿಸುತ್ತವೆ :
ಹಿಂದೂ ಹೊಸ ವರ್ಷದ ಆರಂಭದಲ್ಲಿ, ಎಲ್ಲಾ 9 ಗ್ರಹಗಳು ಕೂಡಾ ರಾಶಿಚಕ್ರವನ್ನು (Zodiac Sign) ಬದಲಾಯಿಸುತ್ತವೆ. ಏಪ್ರಿಲ್ 7 ರಂದು, ಮಂಗಳವು ಮಕರ ರಾಶಿ ಪ್ರವೇಶಿಸುತ್ತದೆ. ಏಪ್ರಿಲ್ 8 ರಂದು ಬುಧವು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದಾದ ನಂತರ ಏಪ್ರಿಲ್ 12 ರಂದು ರಾಹು-ಕೇತುಗಳ ಸಂಚಾರ ಬದಲಾಗಲಿದೆ (Rahu Ketu Transit). ಏಪ್ರಿಲ್ 13 ರಂದು ದೇವಗುರು ಗುರು ಮೀನರಾಶಿಗೆ ಪ್ರವೇಶಿಸಲಿದ್ದಾರೆ. ಏಪ್ರಿಲ್ 14 ರಂದು, ಸೂರ್ಯ ಪ್ರವೇಶ ಮೇಷ ರಾಶಿಯಲ್ಲಿ ಆಗಲಿದೆ. ಏಪ್ರಿಲ್ 27 ರಂದು ಶುಕ್ರನು ಮೀನ ರಾಶಿಗೆ  ಸಾಗುತ್ತಾನೆ (Venus transit) . ನಂತರ ಅಂತಿಮವಾಗಿ ಏಪ್ರಿಲ್ 29 ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.