Panchak September 2022: ನಾಳೆಯಿಂದ `ಚೋರ ಪಂಚಕ` ಆರಂಭ, ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ!
Panchak September 2022: `ಪಂಚಕ ಕಾಲ` ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಬಾರಿಯ ಪಂಚಕದ ಹೆಸರು `ಚೋರ ಪಂಚಕ` ಪಂಚಕ ಕಾಲಾವಧಿಯಲ್ಲಿ ಯಾವುದೇ ಶುಭ ಹಾಗೂ ಮಂಗಳ ಕಾರ್ಯಗಳು ನೆರವೇರುವುದಿಲ್ಲ.
Panchak September 2022 in Kannada: ಪಂಚಕ ಕಾಲಾವಧಿ ಎಂದಿನಿಂದ ಆರಂಭಗೊಳ್ಳಲಿದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ, ಈ ಲೇಖನ ವಿಶೇಷವಾಗಿ ನಿಮಗಾಗಿ. ಈ ಬಾರಿ ಸೆಪ್ಟೆಂಬರ್ 9, 2022ರಿಂದ ಪಂಚಕ ಕಾಲಾವಧಿ ಆರಂಭಗೊಳ್ಳುತ್ತಿದೆ. ಪಂಚಕದ ಕಾಲಾವಧಿಯಲ್ಲಿ ಸಾಮಾನ್ಯವಾಗಿ ಶುಭ ಕಾಗೂ ಮಂಗಳ ಕಾರ್ಯಗಳನ್ನು ನೆರವೆರಿಸಬಾರದು ಎಂಬ ಸಲಹೆಯನ್ನು ನೀಡಲಾಗುತ್ತದೆ.
ಶಾಸ್ತ್ರಗಳು ಹಾಗೂ ಪೌರಾಣಿಕ ನಂಬಿಕೆಗಳ ಪ್ರಕಾರ ಪಂಚಕಕ್ಕೆ ವಿಶೇಷ ಮಹತ್ವವಿದೆ. ಶುಭಕಾರ್ಯಗಳನ್ನು ನೆರವೇರಿಸುವ ಮೊದಲು ಹಿಂದೂ ಧರ್ಮದಲ್ಲಿ ಪಂಚಕದ ಕುರಿತು ಕೂಡ ಸಮಾಲೋಚನೆ ನಡೆಸುವ ಪರಂಪರೆ ಇದೆ. ಹೀಗಾಗಿ ನೀವೂ ಕೂಡ ಯಾವುದಾದರೊಂದು ಶುಭಕಾರ್ಯವನ್ನು ನೆರವೇರಿಸಲು ಯೋಜನೆ ರೂಪಿಸುತ್ತಿದ್ದರೆ, ಈ ಪಂಚಕದ ಕಾಲಾವಧಿಯನ್ನು ಒಮ್ಮೆ ಗಮನವಿಟ್ಟು ನೋಡಿಕೊಳ್ಳಿ.
ಜೋತಿಷ್ಯ ಶಾಸ್ತ್ರದಲ್ಲಿ ಪಂಚಕದ ಮಹತ್ವ
ಜೋತಿಷ್ಯ ಶಾಸ್ತ್ರದ ಗ್ರಂಥಗಳ ಪ್ರಕಾರ, ಧನಿಷ್ಥ, ಶತಾಭಿಷ, ಪೂರ್ವ ಭಾದ್ರಪದ, ಉತ್ತರ ಭಾದ್ರಪದ ಹಾಗೂ ರೇವತಿ ನಕ್ಷತ್ರಗಳಲ್ಲಿ ಚಂದ್ರನ ಪರಿವರ್ತನೆಯ ಕಾಲವನ್ನು ಪಂಚಕ ಎಂದು ಉಲ್ಲೇಖಿಸಲಾಗಿದೆ. ಇನ್ನೊಂದೆಡೆ ಚಂದ್ರ ಕುಂಭ ಹಾಗೂ ಮೀನ ರಾಶಿಯಲ್ಲಿನ ತನ್ನ ಸ್ಥಾನ ಪರಿವರ್ತನೆ ನಡೆಸಿದರೆ, ಆ ಕಾಲಾವಧಿಯನ್ನು ಕೂಡ 'ಪಂಚಕ' ಎಂದು ಕರೆಯಲಾಗುತ್ತದೆ.
ಈ ಬಾರಿಯ ಪಂಚಕ 'ಚೋರ ಪಂಚಕ'
ಮತ್ತೊಂದೆಡೆ ದಿನಗಳಿಗೂ ಕೂಡ ಪಂಚಕ ಆಳವಾದ ಸಂಬಂಧವನ್ನು ಹೊಂದಿದೆ. ದಿನದ ಆಧಾರದ ಮೇಲೆ ಆ ಪಂಚಕದ ಹೆಸರನ್ನು ನಿರ್ಧರಿಸಲಾಗುತ್ತದೆ. ಈ ಬಾರಿಯ ಪಂಚಕ ಶುಕ್ರವಾರ ಆರಂಭಗೊಳ್ಳುತ್ತಿರುವ ಕಾರಣ ಇದನ್ನು ಚೋರ ಪಂಚಕ ಎಂದು ಕರೆಯಲಾಗಿದೆ. ಚೋರ ಪಂಚಕದ ಕಾಲಾವಧಿಯಲ್ಲಿ ಹಣಕಾಸಿಗೆ ಸಂಬಂಧಿಸಿದ ವಿಚಾರದಲ್ಲಿ ತುಂಬಾ ಎಚ್ಚರಿಕೆಯನ್ನು ವಹಿಸಬೇಕು. ಹಣಕಾಸಿನ ವಹಿವಾಟು, ಹೊಸ ವಹಿವಾಟು ಹಾಗೂ ಯಾತ್ರೆಗೆ ಸಂಬಂಧಿಸಿದಂತೆ ತುಂಬಾ ಜಾಗ್ರತೆಯನ್ನು ವಹಿಸುವ ಅವಶ್ಯಕತೆ ಇದೆ. ಈ ಅವಧಿಯಲ್ಲಿ ಹಣವನ್ನು ರಕ್ಷಿಸಬೇಕಾದ ಅವಶ್ಯಕತೆ ಇದೆ.
ಇದನ್ನೂ ಓದಿ-Dream Predictions: ಈ ರೀತಿಯ ಕನಸು ಬಿದ್ದರೆ, ಪ್ರಮೋಶನ, ಘನತೆ-ಗೌರವ ವೃದ್ಧಿ ಗ್ಯಾರಂಟಿ!
ಈ ಬಾರಿಯ ಪಂಚಕದ ಕಾಲಾವಧಿ ಏನು?
ಹಿಂದೂ ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 9, 2022, ಅಂದರೆ ಶುಕ್ರವಾರ ಬೆಳಗಿನ ಜಾವ 00:39 ರಿಂದ ಪಂಚಕ ಕಾಲ ಆರಂಭಗೊಳ್ಳುತ್ತಿದ್ದು, ಸೆಪ್ಟೆಂಬರ್ 13, 2022 ಮಂಗಳವಾರದಂದು ಪ್ರಾತಃಕಾಲ 6:36 ರವರೆಗೆ ಇರಲಿದೆ.
ಇದನ್ನೂ ಓದಿ-Best Baby Boy Names: ಈ ಮಕ್ಕಳ ಹೆಸರುಗಳು ತುಂಬಾ ಯುನೀಕ್ ಆಗಿವೆ, ಅಕ್ಕ-ಪಕ್ಕದಲ್ಲಿ ಯಾರಿಗೂ ಗೊತ್ತಿರಲಿಕ್ಕಿಲ್ಲ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.