2022 ರಲ್ಲಿ ಸಂಬಂಧದ ವಿಚಾರದಲ್ಲಿ ಬಹಳ ಜಾಗರೂಕರಾಗಿರಬೇಕು ಈ ರಾಶಿಯವರು, ಜೀವನವೇ ಬುಡ ಮೇಲಾಗಬಹುದು
ತುಲಾ ರಾಶಿಯ ಜನರು ತುಂಬಾ ಸಮತೋಲಿತ ಮನಸ್ಸಿನವರು, ನ್ಯಾಯಯುತ ಮತ್ತು ಆಕರ್ಷಕ ವ್ಯಕ್ತಿತ್ವದವರು. ಈ ರಾಶಿಯವರಿಗೆ 2022 ರ ವರ್ಷವು ತುಂಬಾ ಒಳ್ಳೆಯದಾಗಿರುತ್ತದೆ.
ನವದೆಹಲಿ : 2022 ವರ್ಷವು ಪ್ರಾರಂಭವಾಗುತ್ತಿದೆ. ಪ್ರತಿಯೊಬ್ಬರಿಗೂ ಹೊಸ ವರ್ಷದಲ್ಲಿ ತಮ್ಮ ಭವಿಷ್ಯ ಹೇಗಿರಲಿದೆ ಎಂಬ ಯೋಚನೆ ಇದ್ದೇ ಇರುತ್ತದೆ. ಯಾರು ಯಾವಾಗ ಏನನ್ನು ಪಡೆಯುತ್ತಾರೆ ಎನ್ನುವುದನ್ನು ಕಾಲವೇ ನಿರ್ಧಾರ ಮಾಡುತ್ತದೆ. ಆದರೆ ಜ್ಯೋತಿಷ್ಯದ ಸಹಾಯದಿಂದ ಈ ಬಗ್ಗೆ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.
ತುಲಾ ರಾಶಿ ಭವಿಷ್ಯ 2022 :
ತುಲಾ ರಾಶಿಯ (Libra) ಜನರು ತುಂಬಾ ಸಮತೋಲಿತ ಮನಸ್ಸಿನವರು, ನ್ಯಾಯಯುತ ಮತ್ತು ಆಕರ್ಷಕ ವ್ಯಕ್ತಿತ್ವದವರು. ಈ ರಾಶಿಯವರಿಗೆ 2022 ರ ವರ್ಷವು ತುಂಬಾ ಒಳ್ಳೆಯದಾಗಿರುತ್ತದೆ. ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ ಮತ್ತು ಹಣವನ್ನು ಗಳಿಸುತ್ತಾರೆ. ಆದರೂ ಆರೋಗ್ಯ (Health Horoscope) ಮತ್ತು ಕುಟುಂಬದ ವಿಷಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ : Horoscope 2022 : 2022 ರಲ್ಲಿ ಈ ರಾಶಿಯವರಿಗೆ ವರ್ಷವಿಡೀ ಹಣದ ಸುರಿಮಳೆ : ಲಕ್ಷ್ಮಿ-ಗಣೇಶನ ಆಶೀರ್ವಾದ ನಿಮ್ಮ ಮೇಲಿದೆ
ವೃತ್ತಿ :
ಈ ವರ್ಷ ನೀವು ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭವನ್ನು ಪಡೆಯುತ್ತೀರಿ. ವರ್ಷದ ಆರಂಭದಲ್ಲಿ, ಅದೃಷ್ಟದ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಬಡ್ತಿ (Career Horoscope) ಪಡೆಯಬಹುದು. ಜೂನ್ ನಂತರ ವೃತ್ತಿಯಲ್ಲಿ ಸವಾಲುಗಳು ಎದುರಾಗಲಿವೆ. ಆದ್ದರಿಂದ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಇರಿಸಿಕೊಳ್ಳಿ. ಏಪ್ರಿಲ್ ನಂತರ, ಕೇತು (Ketu) ನಿಮಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತಾನೆ. ಈ ಕಾರಣದಿಂದಾಗಿ ಕುಟುಂಬದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಉದ್ಯಮಿಗಳಿಗೆ, ಈ ವರ್ಷ 2021 ಕ್ಕಿಂತ ಹೆಚ್ಚು ಆನಂದದಾಯಕವಾಗಿರುತ್ತದೆ.
ಕೌಟುಂಬಿಕ ಜೀವನ :
ಈ ವರ್ಷ ನಿಮ್ಮ ಕೌಟುಂಬಿಕ ಜೀವನ ಸಂತೋಷದಿನದ ಕೂಡಿರುವುದಿಲ್ಲ. ಕೆಲಸದ ಕಾರಣದಿಂದಾಗಿ ನೀವು ಕುಟುಂಬದಿಂದ ದೂರ ಹೋಗಬೇಕಾಗಬಹುದು. ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದಿದ್ದರೆ ಕುಟುಂಬವು ಶಾಶ್ವತವಾಗಿ ಛಿದ್ರವಾಗಬಹುದು. ಜುಲೈನಿಂದ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಮತ್ತು ನೀವು ಕುಟುಂಬದ ಪ್ರೀತಿಯನ್ನು ಪಡೆಯುತ್ತೀರಿ.
ಇದನ್ನೂ ಓದಿ: ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ವರ್ಷ ಪೂರ್ತಿ ಇರಲಿದೆ ಲಕ್ಷ್ಮೀ ದೇವಿಯ ಕೃಪೆ, ಹಣಕಾಸಿನ ಸಮಸ್ಯೆ ಎದುರಾಗುವುದೇ ಇಲ್ಲ
ವಿದ್ಯಾರ್ಥಿ ಜೀವನ :
ಈ ವರ್ಷ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಸಂಪೂರ್ಣ ಶ್ರಮ ಹಾಕಿ. ಏಕೆಂದರೆ ಈ ವರ್ಷ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಯಶಸ್ಸನ್ನು ಪಡೆಯುವ ಬಲವಾದ ಅವಕಾಶಗಳಿವೆ. ವಿದೇಶದಲ್ಲಿ ಶಿಕ್ಷಣ ಪಡೆಯಲು ಈ ವರ್ಷ ಸೂಕ್ತವಲ್ಲ. ವಿದೇಶಕ್ಕೆ ಹೋಗುವುದರಿಂದ ರೋಗ, ಸಾಲ ಬಾಧೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಸರ್ಕಾರಿ ಕೆಲಸಕ್ಕೆ (Government job) ತಯಾರಿ ನಡೆಸುತ್ತಿದ್ದರೆ ನಿಮಗೆ ಯಶಸ್ಸು ಸಿಗುತ್ತದೆ.
ಆರೋಗ್ಯ :
ತಾಯಿಯ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಸಣ್ಣ ರೋಗಗಳು ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತವೆ. ವಿಶೇಷವಾಗಿ ಜೀರ್ಣಕ್ರಿಯೆ ಮತ್ತು ಜನನಾಂಗಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ತೊಂದರೆಗೊಳಗಾಗುತ್ತದೆ. ಆಸ್ಪತ್ರೆಗೆ ಭೇಟಿ ನೀಡುವಪರಿಸ್ಥಿತಿ ಕೂಡಾ ಎದುರಾಗಬಹುದು.
ಇದನ್ನೂ ಓದಿ: ಈ ಐದು ಶಕುನಗಳು ಅತ್ಯಂತ ಅಶುಭವಾಗಿರುತ್ತದೆ, ಇದರಿಂದ ಪರಿವಾರದ ಮೇಲೆ ಸಂಕಷ್ಟಗಳೇ ಹೆಚ್ಚು
ತುಲಾ ರಾಶಿಯವರಿಗೆ ಪರಿಹಾರಗಳು:
ಪ್ರತಿದಿನ ಪ್ರಾಣಾಯಾಮ ಮಾಡಿ. ಬ್ರಾಹ್ಮಿ ಸೇವಿಸಿದರೆ ರೋಗಗಳಿಂದ ದೂರವಿರಬಹುದು. ಗಾಯತ್ರಿ ಮಂತ್ರವನ್ನು 11 ಬಾರಿ ಪಠಿಸುವುದರಿಂದ ಹೆಚ್ಚಿನ ಪರಿಹಾರ ಸಿಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.