Pregnant Woman Exercise: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಫಿಟ್ನೆಸ್ (Fitness) ಬಗ್ಗೆ ತುಂಬಾ ಕಾಳಜಿ ವಹಿಸಲು ಪ್ರಾರಂಭಿಸಿದ್ದಾರೆ. ಯುವಕರಿಂದ ಹಿಡಿದು ಮಹಿಳೆಯರು, ವಯೋವೃದ್ಧರು ಎಲ್ಲರೂ ಜಿಮ್‌ನಲ್ಲಿ ವ್ಯಾಯಾಮ ಮಾಡುವುದನ್ನು ಕಾಣಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇವರೇ ಸಲ್ಮಾನ್ ಖಾನ್ ನ 2300 ಕೋಟಿ ಆಸ್ತಿಯ ವಾರಾಸುದಾರ ..!


ಫಿಟ್ ಆಗಿ ಮತ್ತು ಕ್ರಿಯಾಶೀಲವಾಗಿರಿಸಲು ಪ್ರತಿದಿನ ವ್ಯಾಯಾಮ ಮಾಡುವುದು ಪ್ರಯೋಜನಕಾರಿ. ಪಾರ್ಕ್‌ನಲ್ಲಿ ವಾಕ್ ಮಾಡಲು ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ ಹೆವಿವೇಯ್ಟ್ ವ್ಯಾಯಾಮ ಮಾಡಲು ಇಷ್ಟಪಡುವವರು ಜಿಮ್‌ಗೆ (Gym) ಹೋಗುತ್ತಾರೆ.


 



 


ಜಿಮ್‌ನಲ್ಲಿ ನಾವು ವಿವಿಧ ರೀತಿಯ ಜನರನ್ನು ನೋಡುತ್ತೇವೆ. ಗರ್ಭಿಣಿ ಮಹಿಳೆಯೊಬ್ಬರು (Pregnant Woman) ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರು ಕಸರತ್ತು ಮಾಡುತ್ತಿದ್ದುದನ್ನು ಕಂಡು ಜನರು ಬೆರಗಾದರು.


ಅಂತರ್ಜಾಲದಲ್ಲಿ ವೈರಲ್ (Video Viral) ಆಗಿರುವ ಈ ವಿಡಿಯೋದಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡಲು ಹತ್ತಾರು ಮಂದಿ ಹಾಜರಿದ್ದು, ಗರ್ಭಿಣಿಯೊಬ್ಬರು ಏಕಾಂಗಿಯಾಗಿ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ಭುಜದ ಮೇಲೆ ಸುಮಾರು 30 ಕೆಜಿ ಗಿಂತಲೂ ಹೆಚ್ಚಿನ ತೂಕವನ್ನು ಹೊತ್ತು ವರ್ಕೌಟ್ ಮತ್ತು ನಿರಂತರವಾಗಿ ಸಿಟ್-ಅಪ್ ಗಳನ್ನು ಮಾಡುತ್ತಿದ್ದಾರೆ. 


ಇದನ್ನೂ ಓದಿ: ನಿಮಗೂ ಪೆಟ್ರೋಲ್ ವಾಸನೆ ತೆಗೆದುಕೊಳ್ಳುವ ಚಟವಿದೆಯೇ? ತುಂಬಾ ಅಪಾಯಕಾರಿ ಈ ಅಭ್ಯಾಸ!


ಈ ವ್ಯಾಯಾಮವನ್ನು ಜಿಮ್ ನಲ್ಲಿ ಸ್ಕ್ವಾಟ್ ಎಂದು ಕರೆಯಲಾಗುತ್ತದೆ. ಅಂತಹ ವ್ಯಾಯಾಮವನ್ನು (Exercise) ಮಾಡಲು ಸಾಕಷ್ಟು ಶಕ್ತಿ ಬೇಕಾಗುತ್ತದೆ. ಮಹಿಳೆ ತನ್ನ ಭುಜದ ಮೇಲೆ ತುಂಬಾ ಭಾರ ಹೊತ್ತಿದ್ದಾಳೆ. ಇದನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್:


ಗರ್ಭಿಣಿಯರು ವೈದ್ಯರ ಸಲಹೆ ಪಡೆದ ನಂತರವೇ ಜಿಮ್‌ನಲ್ಲಿ ವ್ಯಾಯಾಮ ಮಾಡಬೇಕು. ಇದಕ್ಕಾಗಿ ಉತ್ತಮ ತರಬೇತುದಾರರ ಅಗತ್ಯವಿದೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇಲ್ಲಿಯವರೆಗೆ 1 ಲಕ್ಷ 22 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. surprizhikayeler ಹೆಸರಿನ Instagram ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.