Raksha Bandhan 2021: ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಸಹೋದರ-ಸಹೋದರಿಯರ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ವರ್ಷ 22 ಆಗಸ್ಟ್ 2021 ರಂದು ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ರಕ್ಷಾ ಬಂಧನದಂದು (Raksha Bandhan)  ಸಹೋದರಿ ತನ್ನ ಸಹೋದರನಿಗೆ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ರಕ್ಷಣೆಯ ದಾರವನ್ನು ಅಂದರೆ ರಾಖಿ ಅನ್ನು ಕಟ್ಟುತ್ತಾಳೆ. ಪ್ರತಿಯಾಗಿ, ಸಹೋದರನು ತನ್ನ ಸಹೋದರಿಗೆ ಉಡುಗೊರೆಗಳನ್ನು ನೀಡಿ ರಕ್ಷಣೆ ನೀಡುವ ಭರವಸೆ ನೀಡುತ್ತಾನೆ. ಈ ಪವಿತ್ರ ಹಬ್ಬದಂದು, ರಾಖಿ ಕಟ್ಟುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಅಂತಹ ಕೆಲವು ಪ್ರಮುಖ ವಿಷಯಗಳ ಬಗ್ಗೆ ತಿಳಿಯೋಣ.


ಇದನ್ನೂ ಓದಿ - Raksha Bandhan: ರಕ್ಷಾ ಬಂಧನದಂದು ರೂಪುಗೊಳ್ಳಲಿದೆ 'ಗಜ ಕೇಸರಿ ಯೋಗ', ಯಾರ ಮೇಲೆ ನೇರ ಪರಿಣಾಮ!


>> ರಾಖಿ (Rakhi) ಕಟ್ಟುವಾಗ ಭದ್ರ ಕಾಲ ಮತ್ತು ರಾಹುಕಾಲವನ್ನು ನೆನಪಿನಲ್ಲಿಡಿ. ಈ ಎರಡೂ ಸಮಯದಲ್ಲಿ ಯಾವುದೇ ಕಾರಣಕ್ಕೂ ರಾಖಿ ಕಟ್ಟಬಾರದು.


>> ಸಹೋದರನಿಗೆ ತಿಲಕ ಹಚ್ಚುವಾಗ, ತುಪ್ಪದಿಂದ ತಯಾರಿಸಿದ ಅಕ್ಷತೆಯನ್ನು ಬಳಸಿ. ಅಕ್ಷತೆಯಲ್ಲಿ ಅಕ್ಕಿ ಮುರಿಯದಂತೆ ನೋಡಿಕೊಳ್ಳಿ.


ಇದನ್ನೂ ಓದಿ- Raksha Bandhan 2021: ರಕ್ಷಾಬಂಧನದ ದಿನ ರಾಶಿಗನುಗುಣವಾಗಿ ನೀಡಿ ಉಡುಗೊರೆ , ಗಟ್ಟಿಯಾಗಿರಲಿ ಸಹೋದರ ಸಹೋದರಿ ಸಂಬಂಧ


>> ರಾಖಿ ಕಟ್ಟುವಾಗ ಸಹೋದರಿಯರು ಸಹೋದರನ ಮುಖ ದಕ್ಷಿಣ ದಿಕ್ಕಿನಲ್ಲಿರಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬದಲಾಗಿ ಸಹೋದರನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಕುಳಿತರೆ ಒಳ್ಳೆಯದು.


>> ರಕ್ಷಾಬಂಧನದ ಸಂದರ್ಭದಲ್ಲಿ, ನೀವು ಕಪ್ಪು ಬಣ್ಣವನ್ನು ಬಳಸುವುದನ್ನು ತಪ್ಪಿಸಬೇಕು. ಈ ಬಣ್ಣವು ನಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ಸಾಧ್ಯವಾದರೆ, ನಿಮ್ಮ ಸಹೋದರನ ರಾಶಿಗೆ ಅನುಗುಣವಾಗಿ ರಾಖಿಯ ಬಣ್ಣವನ್ನು ಆರಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ