ಬೆಂಗಳೂರು : ಏಪ್ರಿಲ್ 29 ರಂದು, ಶನಿ  ಸಂಕ್ರಮಣವಾಗಿತ್ತು. 30 ವರ್ಷಗಳ ನಂತರ ಶನಿದೇವ ಕುಂಭ ರಾಶಿಗೆ ಪ್ರವೇಶಿಸಿದ್ದಾರೆ. ಕುಂಭ ಶನಿಯ ರಾಶಿ. ಕುಂಭ ರಾಶಿಗೆ ಶನಿಯ ಪ್ರವೇಶವಾಗುತ್ತಿದ್ದಂತೆಯೇ, ಕೆಲವು ರಾಶಿಯವರಿಗೆ ಸಾಡೇ ಸಾತಿಯಿಂದ ಮುಕ್ತಿ ಸಿಕ್ಕಿದೆ. ಇನ್ನು ಕೆಲವು ರಾಶಿಯವರಿಗೆ ಸಾಡೇಸಾತಿ ಆರಂಭವಾಗಿದೆ. ಕರ್ಮಫಲದಾತ ಎಂದೇ ಕರೆಸಿಕೊಳ್ಳುವ ಶನಿ ದೇವ, ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಒಳ್ಳೆಯದು ಮತ್ತು ಕೆಟ್ಟ ಫಲವನ್ನು ನೀಡುತ್ತಾನೆ ಎನ್ನುವುದು ನಂಬಿಕೆ.  ಶನಿಯ ಈ ಸಂಕ್ರಮಣದಿಂದ ಪಂಚ ಮಹಾಪುರುಷ ಯೋಗವು ರೂಪುಗೊಂಡಿದೆ. ಈ ಪಂಚ ಮಹಾಪುರುಷ ಯೋಗದ ಪರಿಣಾಮವು  ಈ ಎರಡು ರಾಶಿಯವರ ಮೇಲೆ ಕಂಡುಬರುತ್ತದೆ. 


COMMERCIAL BREAK
SCROLL TO CONTINUE READING

ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ, ಶುಭ ಫಲಿತಾಂಶಗಳು ದೊರೆಯುತ್ತವೆ. ಅದೇ ಸಮಯದಲ್ಲಿ, ತಪ್ಪು ಕರ್ಮಗಳನ್ನು ಮಾಡುವಾಗ, ವ್ಯಕ್ತಿಯು ಸಾಡೇಸಾತಿ  ಧೈಯ ಮತ್ತು ಮಹಾದಶದಲ್ಲಿ ಕರ್ಮಗಳಿಗೆ ಅನುಗುಣವಾಗಿ ಫಲ ಸಿಗುತ್ತದೆ. ಶನಿಯ ಪಂಚ ಮಹಾಪುರುಷನ ಪ್ರಭಾವ  ಹೇಗಿರಲಿದೆ ? 


ಇದನ್ನೂ ಓದಿ : Shani Grah Upay: ಶನಿಯ ಕೋಪದಿಂದ ಮುಕ್ತಿ ಪಡೆಯಲು ಸರಳ ವಿಧಾನ


ಕುಂಭ: ಕುಂಭ ರಾಶಿಯವರಿಗೆ ಶನಿ ದೇವನು ಅಧಿಪತಿಯಾಗಿರುವುದರಿಂದ ಇದು ಮಂಗಳಕರವಾಗಿರುತ್ತದೆ. ಶನಿಯು ತನ್ನದೇ ರಾಶಿಯಾದ ಕುಂಭ ರಾಶಿಯಲ್ಲಿ ಸಂಚರಿಸುವುದರಿಂದ ಪಂಚ ಮಹಾಪುರುಷ ಯೋಗವು ರೂಪುಗೊಳ್ಳುತ್ತಿದೆ. ಕುಂಭ ರಾಶಿಯವರಿಗೆ ಇದು ವಿಶೇಷವಾಗಿ ಫಲಕಾರಿಯಾಗಿದೆ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಗಳಿರಬಹುದು. ನಿಮ್ಮ ಕೆಲಸದ ಸಾಮರ್ಥ್ಯವು ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳು ಸೃಷ್ಟಿಯಾಗಲಿವೆ.  ಈ ಅವಧಿಯಲ್ಲಿ ಶನಿಯ ಪರಿಹಾರಗಳನ್ನು ಮಾಡುವುದರಿಂದ ಮಂಗಳಕರವಾಗಿ ಸಾಬೀತಾಗಲಿದೆ. ಆಂಜನೇಯನ ಆರಾಧನೆಯಿಂದ ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. 


ಮೀನ ರಾಶಿ  : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನ ಈ ಬದಲಾವಣೆಯು ಮೀನ ರಾಶಿಯವರಿಗೆ ವ್ಯಯ ಮನೆಯಲ್ಲಿ ಸಂಭವಿಸಿದೆ. ಇದು ಮೀನ ರಾಶಿಯವರಿಗೆ ತುಂಬಾ ಶುಭವಲ್ಲ, ಆದಾಯ ಮತ್ತು ವೆಚ್ಚದ ಅಂಶವಾಗಿದೆ. ವ್ಯಾಪಾರ ಚಟುವಟಿಕೆಗಳಲ್ಲಿ ಹೆಚ್ಚಿನ ಖರ್ಚು ಸಂಭವಿಸಬಹುದು. 


ಇದನ್ನೂ  ಓದಿ : Vastu Tips : ಮನೆಯಲ್ಲಿ ಏಳು ಕುದುರೆಗಳ ಇಂಥಹ ಫೋಟೋ ಹಾಕುವ ಮುನ್ನ ಇರಲಿ ಎಚ್ಚರ !ಖಾಲಿಯಾಗಿ ಬಿಡಬಹುದು ತಿಜೋರಿ


ಪಂಚ ಮಹಾಪುರುಷ ಯೋಗ ಎಂದರೇನು ? 
ಪಂಚ ಮಹಾಪುರುಷ ಯೋಗ : ಈ ಯೋಗವು ಐದು ಗ್ರಹಗಳಾದ ಗುರು, ಮಂಗಳ, ಶುಕ್ರ, ಶನಿ ಮತ್ತು ಬುಧರಿಂದ ರೂಪುಗೊಂಡಿದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಈ ಯೋಗವು ರೂಪುಗೊಂಡಾಗ, ಗ್ರಹಗಳ ಗುಣಗಳು ಆ ವ್ಯಕ್ತಿಯಲ್ಲಿ ಹೆಚ್ಚು ಸಕ್ರಿಯವಾಗುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಪಂಚ ಮಹಾಪುರುಷ ಯೋಗವು ರೂಪುಗೊಳ್ಳುತ್ತಿದ್ದರೆ ಮತ್ತು ಅದೇ ಗ್ರಹಗಳು ಜಾತಕದಲ್ಲಿ ಉತ್ಕೃಷ್ಟವಾಗಿದ್ದರೆ, ಈ ಯೋಗವು ಹೆಚ್ಚು ಪರಿಣಾಮ ಬೀರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.