Mohini Ekadashi: ತಾಯಿ ಲಕ್ಷ್ಮಿ ಆಶೀರ್ವಾದಕ್ಕಾಗಿ ನಾಳೆ ತಪ್ಪದೇ ಮಾಡಿ ಈ ಕೆಲಸ

Mohini Ekadashi: ಮೇ 12 ರ ಗುರುವಾರದಂದು ಕೆಲವು ವಿಶೇಷ ಮತ್ತು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದಿನ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು, ಆರ್ಥಿಕ ಲಾಭವಾಗುತ್ತದೆ ಎಂಬ ನಂಬಿಕೆ ಇದೆ.

Written by - Yashaswini V | Last Updated : May 11, 2022, 01:43 PM IST
  • ನಾಳೆ ಮೋಹಿನಿ ಏಕಾದಶಿ
  • ಮೋಹಿನಿ ಏಕಾದಶಿಯನ್ನು ತಾಯಿ ಲಕ್ಷ್ಮಿ ಆಶೀರ್ವಾದ ಪಡೆಯಲು ವಿಶೇಷ ಎಂದು ಪರಿಗಣಿಸಲಾಗಿದೆ
  • ಮೋಹಿನಿ ಏಕಾದಶಿಯಂದು ತಾಯಿ ಲಕ್ಷ್ಮಿಯನ್ನು ಈ ರೀತಿ ಪೂಜಿಸುವುದರಿಂದ ಹಣಕಾಸಿನ ತೊಂದರೆಯಿಂದ ಮುಕ್ತಿ ಸಿಗಲಿದೆ
Mohini Ekadashi: ತಾಯಿ ಲಕ್ಷ್ಮಿ ಆಶೀರ್ವಾದಕ್ಕಾಗಿ ನಾಳೆ ತಪ್ಪದೇ ಮಾಡಿ ಈ ಕೆಲಸ  title=
Mohini ekadashi 2022

ಮೋಹಿನಿ ಏಕಾದಶಿಯಂದು ತಾಯಿ ಲಕ್ಷ್ಮಿ ಆಶೀರ್ವಾದ ಪಡೆಯಲು ಸಲಹೆ: ಹಿಂದೂ ಧರ್ಮದಲ್ಲಿ, ಯಾವುದೇ ಹೊಸ ಅಥವಾ ಮಂಗಳಕರ ಕೆಲಸವನ್ನು ಶುಭ ದಿನ ಮತ್ತು ಮಂಗಳಕರ ಸಮಯವನ್ನು ನೋಡುವ ಮೂಲಕ ಪ್ರಾರಂಭಿಸಲಾಗುತ್ತದೆ. ಶುಭ ಮುಹೂರ್ತದಲ್ಲಿ ಮಾಡುವ ಕೆಲಸಗಳು ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಇದೆ. ನೀವು ಸಹ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲು ಶುಭ ಸಮಯ ಮತ್ತು ದಿನಕ್ಕಾಗಿ ಕಾಯುತ್ತಿದ್ದರೆ, ಮೇ 12 ರ ದಿನವು ತುಂಬಾ ವಿಶೇಷವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ 12 ರಂದು  ಕೆಲವು ವಿಶೇಷ ಮತ್ತು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಈ ದಿನ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ತಾಯಿ ಲಕ್ಷ್ಮಿಯ ಅನುಗ್ರಹವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

ಮೇ 12 ರಂದು, ಮೋಹಿನಿ ಏಕಾದಶಿಯ ಉಪವಾಸವನ್ನು ಸಹ ಮಾಡಲಾಗುತ್ತದೆ. ಇದರೊಂದಿಗೆ ಈ ದಿನದಂದು ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಶುಭ ಹರ್ಷ ಯೋಗವು ರೂಪುಗೊಳ್ಳುತ್ತಿದೆ. ಈ ದಿನ, ಮೂರು ಗ್ರಹಗಳು - ಚಂದ್ರನು ತನ್ನದೇ ಆದ ಕನ್ಯಾರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ, ಶನಿಯು ಕುಂಭದಲ್ಲಿ ಮತ್ತು ಗುರುವು ಮೀನದಲ್ಲಿರಲಿದ್ದಾನೆ. ಈ ದಿನದಂದು ಪೂಜೆ ಮತ್ತು ಉಪವಾಸದಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ-  Job Remedy: ಈ ದಿನ ಹೊಸ ಕೆಲಸಕ್ಕೆ ಸೇರಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ

ಮೋಹಿನಿ ಏಕಾದಶಿಯಂದು ತಪ್ಪದೇ ಈ ಕೆಲಸ ಮಾಡಿ :
ಮಂಗಳಕರ ಯೋಗಗಳಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಿ ತುಳಸಿಯ ಸುತ್ತ 11 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿಯಾಗಲಿದೆ ಎಂದು ನಂಬಲಾಗಿದೆ. 

ಈ ದಿನ ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು, ಸಂಜೆ ಹಾಲು ಮತ್ತು ಗಂಗಾಜಲದೊಂದಿಗೆ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ. ಅರ್ಹ ಬ್ರಾಹ್ಮಣನಿಗೆ ತುಪ್ಪ, ಮೊಸರು, ಬಿಳಿ ಬಟ್ಟೆ ಇತ್ಯಾದಿಗಳನ್ನು ದಾನ ಮಾಡಿ.  

ಈ ದಿನ ಅರಳಿ ಮರಕ್ಕೆ ನೀರನ್ನು ಅರ್ಪಿಸಿ ನಂತರ ತುಪ್ಪದ ದೀಪವನ್ನು ಬೆಳಗಿಸಿ. 

ಈ ದಿನ ಶ್ರೀ ಮದ್ ಭಾಗವತ ಪಠಿಸಿ. 

ಇದನ್ನೂ ಓದಿ-   ಈ ರಾಶಿಯ ಜನರು ಧೈರ್ಯವಂತರು, ಆದರೆ ತಮ್ಮ ಕೆಲಸ ಸಾಧಿಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ

ಮಾ ಲಕ್ಷ್ಮಿ ಜೊತೆಗೆ ಭಗವಾನ್ ವಿಷ್ಣು ಮತ್ತು ದಕ್ಷಿಣಾವರ್ತಿ ಶಂಖವನ್ನು ಪೂಜಿಸಿ. ಪೂಜೆಯ ನಂತರ, ಹಳದಿ ಹಣ್ಣುಗಳು, ಹಳದಿ ಬಟ್ಟೆ ಮತ್ತು ಹಳದಿ ಧಾನ್ಯಗಳನ್ನು ಅಗತ್ಯವಿರುವವರಿಗೆ ದಾನ ಮಾಡಿ. 

ಈ ದಿನದಂದು ಭಗವಾನ್ ವಿಷ್ಣುವಿಗೆ ಶಂಖದಿಂದ ಅಭಿಷೇಕ ಮಾಡಿ ಮತ್ತು ಲಕ್ಷ್ಮಿ ದೇವಿಗೆ ಪಾಯಸವನ್ನು ಅರ್ಪಿಸಿ ಮತ್ತು ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸಿ. 

ಈ ದಿನ ಏಕಾದಶಿಯ ಕಥೆಯನ್ನು ಓದಿ. ಅಲ್ಲದೆ, ಈ ದಿನದ ಪೂಜೆಯ ಸಮಯದಲ್ಲಿ, ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆರತಿಯನ್ನು ಮಾಡಿ. 

ಮೋಹಿನಿ ಏಕಾದಶಿಯಂದು ತಾಯಿ ಲಕ್ಷ್ಮಿಯನ್ನು ಈ ರೀತಿ ಪೂಜಿಸುವುದರಿಂದ ಹಣಕಾಸಿನ ತೊಂದರೆಯಿಂದ ಹೊರಬರಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News