ಬೆಂಗಳೂರು : Vastu Tips : ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಅಥವಾ ಕಚೇರಿಯಲ್ಲಿ ಹಾಕುವ ಫೋಟೋಗಳ ಬಗ್ಗೆ ಹೇಳಲಾಗಿದೆ ಆ ಫೋಟೋಗಳನ್ನು ಹಾಕುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಹೇಳಲಾದ ಈ ನಿಯಮಗಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಇಲ್ಲದಿದ್ದರೆ ಮನೆಯಲ್ಲಿ ಬಡತನ ಬಂದೊದಗಬಹುದು.
ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ಹಲವು ನಿಯಮಗಳನ್ನು ಹೇಳಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಸಂತೋಷವನ್ನು ಪಡೆಯಬಹುದು. ಅದೇ ರೀತಿ, ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಹಾಕುವ ಪೇಂಟಿಂಗ್‌ಗಳ ಬಗ್ಗೆಯೂ ಹೇಳಲಾಗಿದೆ. ಕೆಲವೊಂದು ಫೋಟೋಗಳು ಧನಾತ್ಮಕ ಪರಿಣಾಮವನ್ನು ಉಂಟು ಮಾಡಿದರೆ, ಇನ್ನು ಕೆಲವು ನಕಾರಾತ್ಮಕತೆಯನ್ನು ತರುತ್ತವೆ ಎಂದು ಹೇಳಲಾಗಿದೆ.
ಇದನ್ನೂ ಓದಿ : Marriage Remedies : ಮದುವೆ ಯೋಗಕ್ಕೆ ಅಡಿಕೆಯನ್ನು ಈ ರೀತಿ ಬಳಸಿ, ಈ ದಿನ ಮಾಡಿದ್ರೆ ವಿಶೇಷ ಲಾಭ
ಮನೆಯಲ್ಲಿ ಏಳು ಕುದುರೆಗಳ ಫೋಟೋವನ್ನು ಹಾಕುವುದು ಶುಭ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ, ಈ ಚಿತ್ರವನ್ನು ವೇಗ, ಯಶಸ್ಸು ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಏಳು ಬಿಳಿ ಕುದುರೆಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಜನರು ಅದನ್ನು ಮನೆ ಅಥವಾ ಕಚೇರಿಗಳಲ್ಲಿ ಇಡುತ್ತಾರೆ. ಇದನ್ನು ಮನೆಯಲ್ಲಿ ಇಟ್ಟರೆ ಪ್ರಗತಿಯಾಗುತ್ತದೆ ಎಂದು ನಂಬಲಾಗಿದೆ. ಆದರೆ ಮನೆಯಲ್ಲಿ ಇದನ್ನು ಹಾಕುವ ಬಗ್ಗೆ ಕೂಡಾ ಕೆಲವು ನಿಯಮಗಳನ್ನು ಹೇಳಲಾಗಿದೆ.
ಮನೆಯಲ್ಲಿ 7 ಕುದುರೆಗಳ ಫೋಟೋ ಹಾಕುವ ನಿಯಮಗಳು ಇವು :
ಮನೆಯಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ಓಡುತ್ತಿರುವ ಏಳು ಕುದುರೆಗಳ ಚಿತ್ರವನ್ನು ಮನೆಯಲ್ಲಿ ಎಂದಿಗೂ ಹಾಕಬಾರದು. ಫೋಟೋದಲ್ಲಿರುವ ಎಲ್ಲಾ ಕುದುರೆಗಳು ಒಂದೇ ದಿಕ್ಕಿನಲ್ಲಿ ಓಡುತ್ತಿರುವಂತೆ ಇರಬೇಕು.
-ಫೋಟೋದಲ್ಲಿ ಏಳು ಕುದುರೆಗಳಿರಬೇಕು ಎನ್ನುವುದು ನೆನಪಿರಲಿ. ಏಳು ಕುದುರೆಗಲಿಗಿನತ ಕಡಿಮೆ ಅಥವಾ ಹೆಚ್ಚು ಇರಬಾರದು. ಇಲ್ಲವಾದರೆ ವಾಸ್ತು ದೋಷಗಳು ಉಂಟಾಗುತ್ತವೆ.
ಇದನ್ನೂ ಓದಿ : Shani Dev : ಶನಿ ದೇವನಿಂದ ದೂರವಿರಬೇಕು ಈ ರಾಶಿಯವರು : ಇವರಿಗೆ ಶತ್ರುಗಳ ಕಾಟ ಹೆಚ್ಚು!
1.ವಾಸ್ತು ಪ್ರಕಾರ ಮನೆಯಲ್ಲಿ ಒಂದೇ ಕುದುರೆಯ ಚಿತ್ರವನ್ನು ಹಾಕಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಹಾನಿಯಾಗುವ ಸಾಧ್ಯತೆ ತುಂಬಾ ಹೆಚ್ಚುತ್ತದೆ.
2.ಮನೆಯಲ್ಲಿ ಓಡುವ ಕುದುರೆಗಳ ಚಿತ್ರವು ಮಂಗಳಕರವಾಗಿದೆ. ಆದರೆ ಈ ಕುದುರೆಗಳು ಯಾವುದೇ ಯುದ್ಧಭೂಮಿಯಲ್ಲಿ ಓಡುವಂತೆ ಇರಬಾರದು.
3.ರಥ ಎಳೆಯುವ ರೀತಿಯ ಕುದುರೆಯ ಫೋಟೋವನ್ನು ಹಾಕಬೇಡಿ.
4.ಮನೆಯಲ್ಲಿ ಏಳು ಕುದುರೆಗಳ ಫೋಟೋವನ್ನು ಹಾಕುತ್ತಿದ್ದರೆ, ಆ ಕುದುರೆಗಳ ಬಣ್ಣ ಬಿಳಿಯಾಗಿರಬೇಕು ಎನ್ನುವುದು ನೆನಪಿರಲಿ. ಯಾಕೆಂದರೆ ಬಿಳಿ ಕುದುರೆಗಳನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
5.ಈ ಕುದುರೆಗಳು ಚಲಿಸುವ ಸ್ಥಿತಿಯಲ್ಲಿರಬೇಕು. ಒಂದೇ ಸ್ಥಳದಲ್ಲಿ ನಿಂತಂತೆ ಇರಬಾರದು. ಕುಳಿತುಕೊಂಡಿರಲೂ ಬಾರದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.