ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಅತ್ಯಂತ ಪ್ರಮುಖ ಗ್ರಹ ಎಂದು ಪರಿಗಣಿಸಲ್ಪಟ್ಟ ಶನಿಯ ಸ್ಥಾನದಲ್ಲಿ (Shani transit) ಆಗುವ ಸಣ್ಣ ಬದಲಾವಣೆ ಕೂಡ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಕಳೆದ ಜನವರಿ 22, 2022 ರಿಂದ, ಶನಿ ಗ್ರಹವು ಮಕರ ರಾಶಿಯಲ್ಲಿ ಅಸ್ತವಾಗಿದ್ದಾನೆ (Shani Asta). ಈ ಕಾರಣದಿಂದಾಗಿ ಎಲ್ಲಾ ರಾಶಿಚಕ್ರ ಚಿಹ್ನೆಗಳ (Zodiac Sign) ಜನರು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಶನಿಯ ಅಸ್ತದ ಪರಿಣಾಮ, ಸಮಸ್ಯೆಗಳನ್ನು ಎದುರಿಸುತ್ತಿದ್ದ  ರಾಶಿಯವರಿಗೆ ಈಗ ಪರಿಹಾರ ಸಿಗಲಿದೆ. ಮಾತ್ರವಲ್ಲ ಅವರ ಮೇಲೆ ಹಣದ ಸುರಿಮಳೆಯಾಗಲಿದೆ. ಫೆಬ್ರವರಿ 24 ರಿಂದ ಶನಿಗ್ರಹ ಉದಯವಾಗಲಿದೆ. 


COMMERCIAL BREAK
SCROLL TO CONTINUE READING

ಈ ರಾಶಿಯವರ ಅದೃಷ್ಟವು ಹೊಳೆಯುತ್ತದೆ :
ಮೇಷ (Aries): 
ಶನಿಗ್ರಹದ ಉದಯದಿಂದಾಗಿ ಮೇಷ ರಾಶಿಯವರಿಗೆ (Aries) ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಇದುವರೆಗೆ ವೃತ್ತಿ ಜೀವನದಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಯಶಸ್ಸು ಸಿಗಲು ಪ್ರಾರಂಭಿಸುತ್ತವೆ. 


ಇದನ್ನೂ ಓದಿ : ಈ ಹೊತ್ತಲ್ಲಿ ನೀರು ಕುಡಿದರೆ ವಿಷವಾಗಿ ಪರಿಣಮಿಸಬಹುದು, ಎಂದಿಗೂ ಈ ತಪ್ಪು ಮಾಡದಿರಿ


ಮಿಥುನ (Gemini): 
ಶನಿ ಗ್ರಹದ ಉದಯದಿಂದ (Shani udaya) ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ವೃತ್ತಿಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ಪ್ರಶಂಸೆ ಸಿಗಲಿದೆ. ಪ್ರಯಾಣ ಬೆಳೆಸುವ ಅವಕಾಶ ಸಿಗಬಹುದು.  


ತುಲಾ (Libra): 
ಶನಿ ಗ್ರಹದ ಉದಯದಿಂದ (Shani transit) ಹೊಸ ಉದ್ಯೋಗಾವಕಾಶಗಳು ಎದುರಾಗಲಿವೆ. ನೀವು ಪ್ರಗತಿಯನ್ನು ಪಡೆಯುತ್ತೀರಿ. ಆದಾಯ ಹೆಚ್ಚಾಗಲಿದೆ. ಸೌಕರ್ಯಗಳು ಹೆಚ್ಚಾಗಲಿವೆ. ಸ್ಥಗಿತಗೊಂಡಿರುವ ಹಳೆಯ ಕೆಲಸಗಳು ಮತ್ತೆ ಆರಂಭವಾಗಲಿವೆ. ಹಳೆಯ ಆಸೆ ನೆರವೇರಲಿದೆ.


ಇದನ್ನೂ ಓದಿ : Astrology: ತಮ್ಮ ಕೆಲಸ ಸಾಧಿಸುವಲ್ಲಿ ನಿಪುಣರು ಈ ರಾಶಿಯ ಹುಡುಗಿಯರು!


ಕುಂಭ(Aquarius) :
ಕುಂಭ ರಾಶಿಯವರಿಗೆ (Aquarius) ಶನಿ ಗ್ರಹದ ಉದಯವು ಉದ್ಯೋಗದಲ್ಲಿ ಪ್ರಗತಿಯನ್ನು ತರುತ್ತದೆ. ಬಡ್ತಿ ಸಿಗುವ ಸಾಧ್ಯತೆಗಳಿವೆ. ಆದಾಯವೂ ಹೆಚ್ಚುತ್ತದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲ ನಿಮ್ಮದಾಗಲಿದೆ. ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.